ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಸನಾತನದ ಮೂವರು ಗುರುಗಳ ಬಗ್ಗೆ ಸಪ್ತರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಗಳ ಮಾಧ್ಯಮದಿಂದ ಕಾಲಕಾಲಕ್ಕೆ ತೆರೆದಿಟ್ಟ ದೈವೀ ವೈಶಿಷ್ಟ್ಯಗಳು !

ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳ ಹತ್ತಿರ ಕುಳಿತಿರುವ, ಅವರ ಬಲಗಡೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಎಡಗಡೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಸಪ್ತರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರ ಮಹಾನತೆಯನ್ನು ಹೇಳಿ ಅವರಿಗೆ ನೀಡಿದ ಗೌರವ !

೧. ಏಕಮೇವಾದ್ವಿತೀಯ ಪರಾತ್ಪರ ಗುರು ಡಾ. ಆಠವಲೆಯವರು

‘ಪರಾತ್ಪರ ಗುರು ಡಾ. ಆಠವಲೆಯವರಂತಹ ‘ಗುರುಗಳು ಪೃಥ್ವಿಯ ಮೇಲೆ ಬೇರೆ ಯಾರೂ ಇಲ್ಲ. ಪೃಥ್ವಿಯ ಮೇಲೆ ತಮ್ಮನ್ನು ‘ಗುರು ಎಂದು ಹೇಳಿಕೊಳ್ಳುವವರಲ್ಲಿ ಸ್ವಲ್ಪವಾದರೂ ಸ್ವಾರ್ಥ ಇರುತ್ತದೆ; ಆದರೆ ಪರಾತ್ಪರ ಗುರು ಡಾಕ್ಟರರಲ್ಲಿ ಸ್ವಾರ್ಥದ ವಿಚಾರವೇ ಇಲ್ಲ.

೨. ಆದಿ ಶಂಕರಾಚಾರ್ಯರ ನಂತರ ಆಗಿರುವ ಭಗವಂತನ ಅವತಾರವೆಂದರೆ ಪರಾತ್ಪರ ಗುರು ಡಾ. ಆಠವಲೆಯವರು !

೩. ಗುರುದೇವರನ್ನು ಸ್ಮರಿಸಿದರೆ ಸಾಧಕರಿಗೆ ಸಮಾಧಾನ ಹಾಗೂ ಧೈರ್ಯ ಸಿಗುತ್ತದೆ 

ಸನಾತನದ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರು ‘ತಾಯಿಯಂತೆ ಇದ್ದಾರೆ ಹಾಗೂ ಎಲ್ಲ ಸಾಧಕರೂ ಗುರುದೇವರ ಕಡೆಗೆ‘ತಾಯಿ ಎಂದೇ ನೋಡುತ್ತಾರೆ. ಎಷ್ಟೇ ಸಂಕಟಗಳು ಬಂದರೂ ಗುರುದೇವರನ್ನು ಸ್ಮರಿಸಿದರೆ ಸಾಧಕರಿಗೆ ಸಮಾಧಾನ ಹಾಗೂ ಧೈರ್ಯ ಸಿಗುತ್ತದೆ. – ಸಪ್ತರ್ಷಿ (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೬೨ (೧೧.೧೨.೨೦೨೦))

೪ .ಮುಂಬರುವ ಪೀಳಿಗೆಗಳ ಬಗ್ಗೆ ವಿಚಾರ ಮಾಡುವ ನಿಃಸ್ವಾರ್ಥಿ ವೃತ್ತಿಯ ಪರಾತ್ಪರ ಗುರು ಡಾ. ಆಠವಲೆಯವರು !

‘ಓರ್ವ ವ್ಯಕ್ತಿಯು ವಿಧಾನಸಭೆಯ ಸದಸ್ಯನಾದರೆ ಅವನು ಸಂಸದನಾಗುವ ಇಚ್ಛೆಯನ್ನು ಇಟ್ಟುಕೊಳ್ಳುತ್ತಾನೆ. ಸಂಸದನಿಗೆ ಮಂತ್ರಿಯಾಗುವ ಇಚ್ಛೆಯಿರುತ್ತದೆ. ಮನುಷ್ಯನ ಮಹತ್ವಾಕಾಂಕ್ಷೆಗೆ ಅಂತ್ಯವೇ ಇರುವುದಿಲ್ಲ; ಆದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಎಲ್ಲಿಯೂ ಸ್ವಾರ್ಥಿ ದೃಷ್ಟಿಕೋನವನ್ನಿಟ್ಟುಕೊಳ್ಳದೇ ಪ್ರತಿಯೊಂದು ಕೃತಿಯನ್ನು ಮಾಡುವಾಗ ಮುಂಬರುವ ಪೀಳಿಗೆಯ ಬಗ್ಗೆ ವಿಚಾರ ಮಾಡುತ್ತಾರೆ. ಇದರಿಂದ ಅವರ ದೂರದೃಷ್ಟಿಯು ಗಮನಕ್ಕೆ ಬರುತ್ತದೆ. – ಸಪ್ತರ್ಷಿ (ಆಧಾರ :  ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೬೪(೬.೧.೨೦೨೧))

೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೆಂದರೆ ಆದಿಶಕ್ತಿಯ ಎರಡು ರೂಪಗಳಾಗಿವೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೆಂದರೆ ಆದಿಶಕ್ತಿಯ ೨ ರೂಪಗಳಾಗಿದ್ದಾರೆ ! ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ನಿಮ್ಮನ್ನು (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ  ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು) ಶೋಧಿಸಿ ಪರಾತ್ಪರ ಗುರು ಡಾಕ್ಟರರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಎಂದು ನೇಮಿಸಿದ್ದಾರೆ.

೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ತಮ್ಮ ತಂಗಿಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಕಾಳಜಿ ವಹಿಸುವುದು

ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ಉದ್ದೇಶಿಸಿ ‘ಹೇ ಕಾರ್ತಿಕ ಪುತ್ರಿ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ನಿನ್ನ ಹಿರಿಯ ಸಹೋದರಿಯಾಗಿದ್ದಾರೆ. ಮನೆಯಲ್ಲಿ ಅಕ್ಕ, ತಂಗಿಯ ಕಾಳಜಿಯನ್ನು ಮಾಡುವಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಕಾಳಜಿ ವಹಿಸುತ್ತಾರೆ. ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ರವಾಸಕ್ಕಾಗಿ ಆವಶ್ಯಕವಾಗಿರುವ ಎಲ್ಲ ವಸ್ತುಗಳನ್ನೂ ಅವರಿಗೆ ಒದಗಿಸಿ ಕೊಡುತ್ತಾರೆ.

೩. ಪ್ರತಿ ಜನ್ಮದಲ್ಲಿ ಒಟ್ಟಿಗೆ ಜನಿಸುವ ಕಾರ್ತಿಕಪುತ್ರಿ ಹಾಗೂ ಉತ್ತರಾಪುತ್ರಿ

ಸಪ್ತರ್ಷಿಗಳು ‘ಇಲ್ಲಿಯವರೆಗೆ ಆದಿಶಕ್ತಿಯ ಅಂಶಾವತಾರವಾಗಿರುವ ಕಾರ್ತಿಕಪುತ್ರಿ ಹಾಗೂ ಉತ್ತರಾಪುತ್ರಿಯರು ಪ್ರತಿಯೊಂದು ಜನ್ಮದಲ್ಲಿಯೂ ಒಟ್ಟಿಗೆ ಜನ್ಮಕ್ಕೆ ಬಂದಿದ್ದಾರೆ ಹಾಗೂ ಇನ್ನು ಮುಂದೆಯೂ ಶ್ರೀಗುರುಗಳ ಕಾರ್ಯಕ್ಕಾಗಿ ಪುನಃ ಜನ್ಮಕ್ಕೆ ಬರುವವರಿದ್ದಾರೆ ಎಂದು ಹೇಳಿದ್ದಾರೆ. – ಸಪ್ತರ್ಷಿ (ಆಧಾರ: ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೪೯(೧.೧೦.೨೦೨೦)


ಸನಾತನದ ಮೂವರು ಗುರುಗಳ ಬಗ್ಗೆ ಸಪ್ತರ್ಷಿಗಳು ಹೇಳಿದ ಮಹಾನತೆ

೧. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆ ಬರೆಯುವ ಭಾಗ್ಯ ಲಭಿಸಿರುವ ಬಗ್ಗೆ ಸಪ್ತರ್ಷಿಗಳು ಆದಿಶಕ್ತಿ ಜಗದಂಬೆಯ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು : ಸಪ್ತರ್ಷಿಗಳು ಮುಂದಿನಂತೆ ಹೇಳಿದ್ದಾರೆ, ‘ನಾವು ಸಪ್ತರ್ಷಿಗಳು ಆದಿಶಕ್ತಿ ಜಗದಂಬೆಯ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ‘ಹೇ ದೇವೀ, ನಿನ್ನ ಕೃಪೆಯಿಂದಲೇ ನಮಗೆ, (ಸಪ್ತರ್ಷಿಗಳಿಗೆ) ನಿನ್ನ ಅಂಶವಾಗಿರುವ ‘ಉತ್ತರಾಪುತ್ರಿ ಹಾಗೂ ‘ಕಾರ್ತಿಕ ಪುತ್ರಿ ಇವರಿಬ್ಬರ ಬಗ್ಗೆ ಬರೆಯುವ ಭಾಗ್ಯ ಲಭಿಸಿತು.

ಹೇ ಕಾರ್ತಿಕಪುತ್ರಿ, ನೀನು ಭೂಲೋಕದಲ್ಲಿದ್ದರೂ ನಿನ್ನ ಪ್ರವಾಸವು ದೇವಲೋಕದಲ್ಲಿ ಇರುವಂತೆಯೇ ಇರಬೇಕು. ‘ಉತ್ತರಾಪುತ್ರಿಯು ರಾಮನಾಥಿ ಆಶ್ರಮದಲ್ಲಿದ್ದು ಆಧ್ಯಾತ್ಮಿಕ ಮಟ್ಟದಲ್ಲಿ ಸನಾತನ ಸಂಸ್ಥೆಯ ಪರಿಪಾಲನೆಯನ್ನು ಮಾಡುವುದು ಹಾಗೂ ಕಾರ್ತಿಕ ಪುತ್ರಿಯು ಎಲ್ಲ ಸಾಧಕರ ರಕ್ಷಣೆಗಾಗಿ ಪ್ರವಾಸ ಮಾಡುವುದು ಇದು ಈಶ್ವರೀ ಆಯೋಜನೆಯಾಗಿದೆ.

೨. ಸನಾತನದ ಮೂವರು ಗುರುಗಳ ಜನ್ಮವು ಕೇವಲ ಧರ್ಮದ ಪುನರ್ಸ್ಥಾಪನೆಗಾಗಿಯೇ ಆಗಿದೆ, ಆದುದರಿಂದ ಧರ್ಮವು ಈಗ ಸುಂದರ ರೂಪವನ್ನು ಧರಿಸಲಿದೆ : ಸೂರ್ಯದೆಶೆಯಲ್ಲಿ ಸನಾತನದ ಮೂವರೂ ಗುರುಗಳ ಜನ್ಮವು ಆಗಿದೆ ಯುಗಾನು ಯುಗಗಳವರೆಗೆ ಸೂರ್ಯನ ಅಸ್ತಿತ್ವವಿದೆ. ಅವನು ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ನೋಡುತ್ತಾನೆ. ಮೂವರೂ ಗುರುಗಳು ಸೂರ್ಯನಂತೆ ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ಅರಿತಿದ್ದಾರೆ. ಜಗತ್ತಿನಲ್ಲಿ ಧರ್ಮಕ್ಕೆ ಬಂದಿರುವ ದುರ್ದೆಶೆಯನ್ನು ದೂರಗೊಳಿಸಲು ಹಾಗೂ ಕೇವಲ ಸನಾತನ ಧರ್ಮದ ಪುನರ್ಸ್ಥಾಪನೆಗಾಗಿ ಅವರ ಜನ್ಮವಾಗಿದೆ. ಅರುಣೋದಯವು ಸುಂದರವಾಗಿರುತ್ತದೆ. ಮೂವರು ಗುರುಗಳಿಂದ ಧರ್ಮಕ್ಕೆ ಬಂದಿರುವ ದುರ್ದೆಶೆಯು ದೂರವಾಗಿ ಈಗ ಧರ್ಮವು ತನ್ನ ಸುಂದರ ರೂಪವನ್ನು ಧರಿಸಲಿದೆ. – ಸಪ್ತರ್ಷಿ (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೬೧ (೧೦.೧೨.೨೦೨೦)


ಶ್ರೀಗುರುಗಳ ಮೇಲಿನ ಶ್ರದ್ಧೆ ಮತ್ತು ಸಾಧನೆಯೇ ಕೊನೆಗೆ ಪ್ರಾಣವನ್ನು ಉಳಿಸುವ ಕಾರ್ಯವನ್ನು ಮಾಡಲಿದೆ !

ನಾಡಿವಾಚಕ ಪೂ. ಡಾ. ಓಂ ಉಲಗನಾಥ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಪೃಥ್ವಿಯ ಮೇಲೆ ಅವತರಿಸಿದ್ದಾರೆ. ಅವರ ಜನ್ಮವು ಪೃಥ್ವಿಯ ಸಮಸ್ತ ಜೀವಗಳ ಕಲ್ಯಾಣಕ್ಕಾಗಿ ಆಗಿದೆ. ಆದುದರಿಂದ ಸಾಧನೆ ಹಾಗೂ ಶ್ರದ್ಧೆಯನ್ನು ಹೆಚ್ಚಿಸುವುದೇ ಸಾಧಕರ ಕೈಯಲ್ಲಿದೆ. ಶ್ರದ್ಧೆ ಹಾಗೂ ಸಾಧನೆ ಇಲ್ಲದಿದ್ದರೆ ದೇವರು ಸಾಧಕರನ್ನು ಹೇಗೆ ರಕ್ಷಿಸುವನು ? ಪ್ರಾಣ ಉಳಿಸಲು ಮಂತ್ರಜಪ ಉಪಯೋಗಿಸಬಹುದು; ಆದರೆ ಅಡಚಣೆಯಲ್ಲಿ ಅದೂ ಸಾಧ್ಯವಿಲ್ಲ. ಆಗ ಶ್ರದ್ಧೆಯೇ ಕಾರ್ಯ ಮಾಡುತ್ತದೆ. –  ಸಪ್ತರ್ಷಿ (ಆಧಾರ: ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೫೦)

ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿಗಳಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜವಾಬ್ದಾರಿ

೧. ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಎಂದರೆ ಪರಾತ್ಪರ ಗುರು ಡಾ. ಆಠವಲೆಯವರ ಎರಡು ಕಣ್ಣುಗಳು ! 

‘ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರಿಬ್ಬರ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ಸಮಾನ ಗಮನವಿದೆ. ಏಕೆಂದರೆ ‘ಇವರಿ ಬ್ಬರಿಂದಾಗಿಯೇ ಮುಂಬರುವ ಕಾಲದಲ್ಲಿ ಸಾಧಕರ ರಕ್ಷಣೆಯಾಗಲಿದೆ, ಎಂಬುದು ಅವರಿಗೆ ಗೊತ್ತಿದೆ. ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಅಂದರೆ ಪರಾತ್ಪರ ಗುರು ಡಾ. ಆಠವಲೆಯವರ ಎರಡು ಕಣ್ಣುಗಳೇ ಆಗಿದ್ದಾರೆ !

೨. ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರಿಬ್ಬರೂ ಒಂದೇ ಆಗಿರುವುದು

ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರಿಬ್ಬರೂ ಒಂದೇ ಆಗಿದ್ದಾರೆ. ಉತ್ತರಾಪುತ್ರಿ ಗರ್ಭಗುಡಿಯಲ್ಲಿರುವ ದೇವತೆಯಂತೆ ರಾಮನಾಥಿ ಆಶ್ರಮರೂಪಿ ದೇವಸ್ಥಾನದಲ್ಲಿರುತ್ತಾಳೆ ಮತ್ತು ಕಾರ್ತಿಕಪುತ್ರಿ ಉತ್ಸವಕ್ಕಾಗಿ ಎಲ್ಲೆಡೆ ಹೋಗುವ ದೇವಸ್ಥಾನದಲ್ಲಿನ ಉತ್ಸವ ಮೂರ್ತಿಯಂತೆ ಇದ್ದಾಳೆ.

೩. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಕಡೆಗೆ ಸಾಧಕರ ಪಾಲನೆಯ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಕಡೆಗೆ ತೀರ್ಥಯಾತ್ರೆ ಮಾಡಿ ಸಾಧಕರ ರಕ್ಷಣೆಗಾಗಿ ದೇವತೆಗಳ ಕೃಪೆಯನ್ನು ಪ್ರಾಪ್ತಮಾಡಿಕೊಳ್ಳುವ ಜವಾಬ್ದಾರಿ ಇದೆ

ಪರಾತ್ಪರ ಗುರು ಡಾ. ಆಠವಲೆಯವರು ಮಹರ್ಷಿಗಳ ಮಾಧ್ಯಮ ದಿಂದ ಈ ಇಬ್ಬರನ್ನೂ ತಮ್ಮ ‘ಆಧ್ಯಾತ್ಮಿಕ ಉತ್ತರಾಧಿಕಾರಿಗಳೆಂದು ನೇಮಿಸಿದ್ದಾರೆ. ಸರ್ವಜ್ಞರಾಗಿರುವ ಗುರುದೇವರು ಉತ್ತರಾಪುತ್ರಿಗೆ ರಾಮನಾಥಿ ಆಶ್ರಮದಲ್ಲಿದ್ದು ಎಲ್ಲ ಸಾಧಕರ ಪರಿಪಾಲನೆ ಮಾಡುವ ಜವಾಬ್ದಾರಿಯನ್ನು ನೀಡಿದ್ದಾರೆ ಮತ್ತು ಕಾರ್ತಿಕಪುತ್ರಿಗೆ ತೀರ್ಥಯಾತ್ರೆ ರೂಪಿ ದೈವೀ ಪ್ರವಾಸದ ಮಾಧ್ಯಮದಿಂದ ಎಲ್ಲ ಸಾಧಕರ ರಕ್ಷಣೆಯ ಜವಾಬ್ದಾರಿಯನ್ನು ನೀಡಿದ್ದಾರೆ. – ಸಪ್ತರ್ಷಿ (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೫೬ (೩೧.೧೦.೨೦೨೦)

ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರು ಸ್ವತಃ ಅವತಾರರಾಗಿದ್ದರೂ ಸಾಮಾನ್ಯ ಗೃಹಿಣಿಯರಂತೆ ತಮ್ಮ ಎಲ್ಲ ಕರ್ತವ್ಯಗಳನ್ನು ಮಾಡಿದ್ದಾರೆ

‘ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರಿಬ್ಬರಿಗೂ ಈಗ ತಮ್ಮ ಮನೆ, ತಮ್ಮ ಜೀವನ ಅಥವಾ ಸಂಬಂಧಿಕರು ಇಂತಹದ್ದೇನೂ ಉಳಿದಿಲ್ಲ. ಇವರಿಬ್ಬರ ಮದುವೆಯಾಗಿದೆ. ಇವರಿಬ್ಬರ ಪತಿಯರೂ ಆದರ್ಶರಾಗಿದ್ದಾರೆ. ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರಿಬ್ಬರೂ ‘ಅವತಾರರಾಗಿದ್ದರೂ, ಅವರು ಓರ್ವ ಸಾಮಾನ್ಯ ಗೃಹಿಣಿಯರಂತೆ ತಮ್ಮ ಎಲ್ಲ ಕರ್ತವ್ಯಗಳನ್ನೂ ಸರಿಯಾಗಿ ಮಾಡಿದ್ದಾರೆ. ಮಗಳು, ಸಹೋದರಿ, ಪತ್ನಿ, ತಾಯಿ, ಗೃಹಿಣಿ ಇತ್ಯಾದಿ ಎಲ್ಲ ಕರ್ತವ್ಯಗಳನ್ನು ಅವರು ಸರಿಯಾಗಿ ಮಾಡಿದ್ದಾರೆ. – ಸಪ್ತರ್ಷಿಗಳು (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೫೨ (೮.೧೦.೨೦೨೦))

ಪ್ರಭು ಶ್ರೀರಾಮನ ಚರಣಸ್ಪರ್ಶದಿಂದ ಶಾಪಮುಕ್ತಳಾದ ಅಹಿಲ್ಯೆಯ ಕಥೆಯಿಂದ ಅವತಾರಗಳ ಶ್ರೇಷ್ಠತೆಯು ಗಮನಕ್ಕೆ ಬರುತ್ತದೆ

‘ನಿಮಗೆ ಗೌತಮಋಷಿ ಮತ್ತು ಅಹಿಲ್ಯಾ ಇವರ ಕಥೆ ಗೊತ್ತೇ ಇದೆ. ಗೌತಮಋಷಿಗಳ ಶಾಪದಿಂದ ಕಲ್ಲಾದ ಅಹಿಲ್ಯೆಯು ನಂತರ ಶ್ರೀರಾಮನ ಚರಣಸ್ಪರ್ಶದಿಂದ ಶಾಪಮುಕ್ತಳಾಗುತ್ತಾಳೆ. ಆಗ ಅಹಿಲ್ಯೆಯು ಗೌತಮ ಋಷಿಗಳಿಗೆ, “ಈಗ ನೀವು ನನ್ನನ್ನು ಸ್ವೀಕರಿಸಿರಿ, ಎಂದು ಹೇಳುತ್ತಾಳೆ. ಆಗ ಗೌತಮ ಋಷಿಗಳು “ನಿನ್ನಿಂದ ಯಾವಾಗ ತಪ್ಪಾಯಿತೋ, ಅಂದಿನಿಂದಲೇ, ನೀನು ನನ್ನ ಪತ್ನಿಯಾಗುವ ಹಕ್ಕನ್ನು ಕಳೆದುಕೊಂಡಿರುವೆ, ಎಂದು ಹೇಳುತ್ತಾರೆ. ಆಗ ಶ್ರೀರಾಮನು ಗೌತಮ ಋಷಿಗಳಿಗೆ, ‘ಹೇ ಗೌತಮಋಷಿಗಳೇ, ನನ್ನ ಚರಣಸ್ಪರ್ಶವಾದ ಮೇಲೆ ಅವಳ ಪುನರ್ಜನ್ಮವಾಗಿದೆ. ಆದುದರಿಂದ ನೀವು ಅವಳನ್ನು ಸ್ವೀಕರಿಸಿರಿ, ಎಂದು ಹೇಳುತ್ತಾನೆ. ಇದರಿಂದ ಅವತಾರಗಳ ಶ್ರೇಷ್ಠತೆವು ಗಮನಕ್ಕೆ ಬರುತ್ತದೆ. – ಸಪ್ತರ್ಷಿಗಳು (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೫೯ (೨೫.೧೧.೨೦೨೦))


ಸಾಧಕರು ಸನಾತನದ ಮೂವರು ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟರೆ ಅವರು ಯಾವುದೇ ಸಂಕಟದಿಂದ ನಿಶ್ಚಿತವಾಗಿಯೂ ಪಾರಾಗುವರು !

೧. ಪರಾತ್ಪರ ಗುರು ಡಾ. ಆಠವಲೆಯವರು ಮನುಷ್ಯರೂಪದಲ್ಲಿರುವುದರಿಂದ ಸಾಮಾನ್ಯ ವ್ಯಕ್ತಿಗಳಿಗೆ ಅದು ತಿಳಿಯದಿರುವುದು ಮತ್ತು ಮನುಷ್ಯರಂತೆಯೇ ಅವರಿಗೆ ಸೂಕ್ಷ್ಮ ಕೆಟ್ಟ ಶಕ್ತಿಗಳೊಂದಿಗೆ ಹೋರಾಟ ಮಾಡಬೇಕಾಗುವುದು

‘ಸನಾತನ ಸಂಸ್ಥೆ ಈ ಹೆಸರನ್ನು ಪರಾತ್ಪರ ಗುರು ಡಾ. ಆಠವಲೆ ಯವರೇ ಇಟ್ಟಿದ್ದಾರೆ. ರಾಮನಾಥಿ ಆಶ್ರಮದಲ್ಲಿನ ಆಹಾರ-ನೀರು ಇವೆಲ್ಲವೂ ‘ಸಂಜೀವಿನಿಯೇ ಆಗಿವೆ ! ಸಾಕ್ಷಾತ್ ಶ್ರೀವಿಷ್ಣುವೇ ‘ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಮನುಷ್ಯ ರೂಪದಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಲು ಬಂದಿದ್ದಾನೆ. ಗುರುಗಳು ಪೃಥ್ವಿಯ ಮೇಲಿರುವುದರಿಂದ ಅವರಿಗೆ ಮನುಷ್ಯರಂತೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಕೆಟ್ಟ ಶಕ್ತಿಗಳೊಂದಿಗೆ ಹೋರಾಡಬೇಕಾಗುತ್ತದೆ. ಒಂದು ವೇಳೆ ಇದೇ ದೇವಲೋಕದಲ್ಲಿ ಘಟಿಸುತ್ತಿದ್ದರೆ, ಗುರುದೇವರು ಕೇವಲ ಮಂತ್ರಶಕ್ತಿಯಿಂದಲೇ ಕೆಟ್ಟ ಶಕ್ತಿಗಳ ನಾಶವನ್ನು ಮಾಡುತ್ತಿದ್ದರು.

೨. ಸನಾತನ ಸಾಧಕರು ಶ್ರೀ ಗುರುಗಳಿಂದ ಸುರಕ್ಷಿತರಾಗಿದ್ದು, ಅವರು ಎಲ್ಲವನ್ನೂ ಶ್ರೀ ಗುರುಗಳ ಮೇಲೆ ಬಿಟ್ಟು ಶ್ರದ್ಧೆಯಿಂದ ನಿಶ್ಚಿಂತರಾಗಿರಬೇಕು !

ಜಗತ್ತಿನಲ್ಲಿ ಶ್ರದ್ಧೆಯು ಮಹತ್ವದ್ದಾಗಿರುತ್ತದೆ. ಪಕ್ಷಿಯು ಆಕಾಶದಲ್ಲಿ ಹಾರಾಡುತ್ತಿರುತ್ತದೆ; ಆದರೆ ಅದು ತನ್ನ ನೆರಳಿನಿಂದಲೇ ಗೂಡಿನಲ್ಲಿರುವ ಮರಿಗಳ ಕಾಳಜಿಯನ್ನೂ ತೆಗೆದುಕೊಳ್ಳುತ್ತದೆ. ‘ಆ ಮರಿಗಳಿಗೆ ನಾವು ಯಾರಿಂದಾಗಿ ಸುರಕ್ಷಿತವಾಗಿದ್ದೇವೆ, ಎಂಬುದು ತಿಳಿಯುವುದಿಲ್ಲ. ಅದರಂತೆ ಗುರುಗಳಿಂದ ಎಲ್ಲ ಸಾಧಕರು ಸುರಕ್ಷಿತರಾಗಿದ್ದಾರೆ; ಆದರೆ ಸಾಧಕರಿಗೆ ಅದು ತಿಳಿಯುವುದಿಲ್ಲ. ಸಾಧಕರು ಎಲ್ಲವನ್ನೂ ಗುರುಗಳ ಮೇಲೆ ಬಿಡಬೇಕು. ಅವರೇ ಎಲ್ಲವನ್ನೂ ನೋಡಿಕೊಳ್ಳುವರು. ‘ಎಷ್ಟೇ ದೊಡ್ಡ ಸಂಕಟ ಬಂದರೂ, ಸನಾತನದ ಮೂವರು ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟರೆ ಸಾಧಕರು ಆ ಸಂಕಟಗಳಿಂದ ಪಾರಾಗಲಿದ್ದಾರೆ, ಇದು ಮಾತ್ರ ನಿಶ್ಚಿತ.

೩. ಸ್ತ್ರೀರೂಪದಲ್ಲಿ ಜನಿಸಿರುವ ಉತ್ತರಾಪುತ್ರಿ ಮತ್ತು ಕಾರ್ತಿಕಪುತ್ರಿ ಈ ಇಬ್ಬರು ಅವತಾರಿ ಜೀವಗಳಿಗೆ ಕೇಡನ್ನು ಮಾಡುವವರು ಈ ಸಂಪೂರ್ಣ ಜಗತ್ತಿನಲ್ಲಿ ಯಾರೂ ಇಲ್ಲ. – ಸಪ್ತರ್ಷಿಗಳು (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೬೬ (೧೮.೧.೨೦೨೧)

ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರ ಭಾಷೆ, ಪ್ರಾಂತ್ಯ, ಪ್ರಕೃತಿ ಇತ್ಯಾದಿಗಳು ಭಿನ್ನವಾಗಿದ್ದರೂ ಅವರು ಒಂದೇ ಆಗಿದ್ದಾರೆ !

‘ವಿಶ್ವಕಲ್ಯಾಣಕ್ಕಾಗಿ ಶ್ರೀವಿಷ್ಣುವಿನ ಕೃಪೆ ಬೇಕು, ಅದೇ ರೀತಿ ಶ್ರೀ ಮಹಾಲಕ್ಷ್ಮೀಯ ಕೃಪೆಯೂ ಬೇಕು. ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಇವರಿಬ್ಬರೂ ಶ್ರೀ ಮಹಾಲಕ್ಷ್ಮೀಯ ಅಂಶಾವತಾರರಾಗಿ ದ್ದಾರೆ. ನಾವು ಸಪ್ತರ್ಷಿಗಳು ಇಬ್ಬರನ್ನೂ ‘ಮಹಾಲಕ್ಷ್ಮೀ ಎಂದೇ ಸಂಬೋಧಿಸುತ್ತೇವೆ. ಇಬ್ಬರ ಜನ್ಮದ ಸಮಯವು ಬೇರೆಯಾಗಿದೆ, ಹಾಗೆಯೇ ಅವರ ಭಾಷೆ, ಪ್ರಾಂತ, ಪ್ರಕೃತಿ ಮುಂತಾದವುಗಳು ಭಿನ್ನವಾಗಿದ್ದರೂ, ಅವರು ಒಂದೇ ಆಗಿದ್ದಾರೆ. – ಸಪ್ತರ್ಷಿಗಳು (೧೬.೧೦.೨೦೨೦)

ಸನಾತನದ ಸಾಧಕರು ಗುರುದಕ್ಷಿಣೆ ಎಂದು ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತಾಭಾವದಿಂದ ಜೀವನವನ್ನು ಸಮರ್ಪಿಸಬೇಕು

‘ದ್ರೋಣಾಚಾರ್ಯರು ಏಕಲವ್ಯನಿಗೆ ಏನನ್ನೂ ಕಲಿಸಲಿಲ್ಲ, ಆದರೂ ಶ್ರೀ ಗುರುಗಳು ಕೇಳಿದಾಗ ಅವನು ತಕ್ಷಣ ಗುರುದಕ್ಷಿಣೆ ಯೆಂದು ತನ್ನ ಹೆಬ್ಬೆರಳನ್ನು ಕತ್ತರಿಸಿ ಕೊಟ್ಟನು. ಸನಾತನದ ಸಾಧಕರಿಗೆ ಮೂವರು ಗುರುಗಳಿಗೆ ಗುರುದಕ್ಷಿಣೆಯನ್ನು ಕೊಡುವುದು ಸಾಧ್ಯವಿಲ್ಲ. ಆದರೂ ಅವರು ಕೃತಜ್ಞತಾಭಾವದಿಂದ ಶ್ರೀ ಗುರುಗಳ ಚರಣಗಳಲ್ಲಿ ಜೀವನವನ್ನು ಸಮರ್ಪಿಸಿದರೂ, ಸಾಕಾಗುತ್ತದೆ.

– ಸಪ್ತರ್ಷಿಗಳು (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೬೦ (೧೩.೧೨.೨೦೨೦))