ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀ ಮಹಾಲಕ್ಷ್ಮೀಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಾಸ್ತವ್ಯದಿಂದ ಸನಾತನದ ರಾಮನಾಥಿ ಆಶ್ರಮವು ಸಾಕ್ಷಾತ್ ಭೂವೈಕುಂಠವಾಗಿದೆ. ಮಹರ್ಷಿಗಳು ಅವರ ಅವತಾರತ್ವದ ಗೌರವವನ್ನು ಮಾಡುವುದರೊಂದಿಗೆ ಈ ಪಾವನ ಆಶ್ರಮದ ಮಹಾತ್ಮೆಯನ್ನೂ ಆಗಾಗ ವೃದ್ಧಿಸಿದ್ದಾರೆ. ಮೂಲದಲ್ಲಿಯೇ ಚೈತನ್ಯಮಯವಾಗಿರುವ ಆಶ್ರಮದ ಮೇಲೆ ಮಹರ್ಷಿಗಳು ಇಲ್ಲಿಯವರಿಗೆ ಕಳಶ ಸ್ಥಾಪನೆ, ಸಾಧಕರ ರಕ್ಷಣೆಗಾಗಿ ಆಶ್ರಮದ ವಾಸ್ತುವಿನ ಮೇಲೆ ಧ್ವಜಸ್ಥಾಪನೆ, ಆಶ್ರಮದ ಪ್ರವೇಶದ್ವಾರದಲ್ಲಿ ಗಜಸ್ಥಾಪನೆ, ಕಮಲಪೀಠದ ಮೇಲಿನ ದೀಪಲಕ್ಷ್ಮೀಯ ಸ್ಥಾಪನೆ ಇವುಗಳಂತಹ ವಿವಿಧ ವಿಧಿಗಳನ್ನು ಮಾಡಿಸಿ ಈ ವಾಸ್ತುವಿಗೆ ಸ್ಥೂಲದಲ್ಲಿಯೂ ವೈಕುಂಠದ ರೂಪವನ್ನೇ ಪ್ರಾಪ್ತ ಮಾಡಿ ಕೊಟ್ಟಿದ್ದಾರೆ. ಆಶ್ರಮದ ಪರಿಸರದಲ್ಲಿ ಈಗ ಧರ್ಮಧ್ವಜವು ಸಡಗರದಿಂದ ಹಾರಾಡುತ್ತಿದೆ. ಪರಾತ್ಪರಗುರುದೇವರ ಕೃಪೆಯಿಂದ ಮತ್ತು ಮಹರ್ಷಿಗಳ ಆಶೀರ್ವಾದದಿಂದ ಹಿಂದೂ ರಾಷ್ಟ್ರದ ವಿಜಯಧ್ವಜವೂ ಶೀಘ್ರದಲ್ಲಿ ಹಾರಾಡುವುದು, ಇದು ನಿಶ್ಚಿತ ! |
ಧ್ವಜಸ್ಥಾಪನೆಯ ಅಂತರ್ಗತ ಉಪದೇಶದ / ಅಭಿಮಂತ್ರಣ ವಿಧಿಯನ್ನು ಮಾಡುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧ್ವಜವನ್ನು ಸ್ಪರ್ಶಿಸಿದಾಗ ಅವರಿಗೆ ಅದು ಅತ್ಯಂತ ಸಜೀವವಾಗಿದೆ ಎಂದು ಅನಿಸಿತು. ‘ಶ್ರೀಗುರುಗಳ ಚರಣಗಳನ್ನೇ ಸ್ಪರ್ಶಿಸುತ್ತಿದ್ದೇನೆ’, ಎಂದು ಅತ್ಯಂತ ಸ್ಪಷ್ಟವಾಗಿ ಅರಿವಾಯಿತು. ಆ ವೈಶಿಷ್ಟ್ಯಪೂರ್ಣ ಕ್ಷಣ ! ಧ್ವಜಸ್ಥಾಪನೆಯ ವಿಧಿಯು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಂತಹ ಆಧ್ಯಾತ್ಮಿಕ ಅಧಿಕಾರಿ ವಿಭೂತಿಗಳಿಂದ ನೆರವೇರಿದುದರಿಂದ ಆ ಧ್ವಜಕ್ಕೆ ಜಾಗೃತಿ ಬಂದಿತು. ಅನಂತರ ಅದರ ಕಾರ್ಯವು ಆರಂಭವಾಗಿ ವಾತಾವರಣದಲ್ಲಿ ಪ್ರಕ್ಷೇಪಿಸತೊಡಗಿತು.
ಶ್ರೀರಾಮನ ವಿಜಯಪತಾಕೆ ಹಾರಿತು ಆಕಾಶದಲ್ಲಿ | ಪ್ರತಿಧ್ವನಿಸಿತು ಹಿಂದೂ ರಾಷ್ಟ್ರದ ಜಯಕಾರ ಎಲ್ಲೆಡೆಯಲ್ಲಿ ||
ಸದ್ಯದ ಧರ್ಮಗ್ಲಾನಿಯ ಕಾಲದಲ್ಲಿ ಅಧರ್ಮವು ಹೆಚ್ಚಾಗಿರುವುದರಿಂದ ತೊಂದರೆಗೀಡಾದ, ಅನ್ಯಾಯ-ಅತ್ಯಾಚಾರಗಳಿಂದ ಪೀಡಿತರಾದ ಎಲ್ಲರೂ ಹಿಂದೂ ರಾಷ್ಟ್ರದ ದಾರಿಯನ್ನು ಆತುರದಿಂದ ಕಾಯುತ್ತಿದ್ದಾರೆ. ರಾಮರಾಜ್ಯದ ಅನುಭೂತಿಯನ್ನು ನೀಡುವ ಹಿಂದೂ ರಾಷ್ಟ್ರವು ಆದಷ್ಟು ಬೇಗನೆ ಸಾಕಾರವಾಗ ಬೇಕೆಂದು ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಸನಾತನದ ಮೂವರು ಗುರುಗಳು ಅಖಂಡವಾಗಿ ಕಾರ್ಯನಿರತರಾಗಿದ್ದಾರೆ. ಸದ್ಯದ ಆಪತ್ಕಾಲವು ಮುಗಿದ ನಂತರ ಮಂಗಲಮಯ ಹಿಂದೂ ರಾಷ್ಟ್ರವು ಅನುಭವಿಸಲು ಸಿಗಲಿದೆ. ಸಪ್ತರ್ಷಿಗಳು ಧ್ವಜವನ್ನು ಸ್ಥಾಪಿಸಬೇಕೆಂದು ಹೇಳಿ ಒಂದು ರೀತಿಯಲ್ಲಿ ಅದಕ್ಕೆ ಪುಷ್ಟಿಯನ್ನೇ ನೀಡಿದ್ದಾರೆ ! ಸಪ್ತರ್ಷಿಗಳು ಮಾಡಿದ ಆಜ್ಞೆಗನುಸಾರ ಅಕ್ಷಯ ತೃತೀಯಾದ (೧೪.೫.೨೦೨೧) ಶುಭದಿನದಂದು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತಗಳಿಂದ ಧರ್ಮಧ್ವಜವನ್ನು ಸ್ಥಾಪಿಸಲಾಯಿತು.
ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಈ ಧ್ವಜದ ಮೇಲೆ ಒಂದು ಬದಿಗೆ ಪ್ರಭು ಶ್ರೀರಾಮನ ಚಿತ್ರ ಮತ್ತು ಇನ್ನೊಂದು ಬದಿಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದಲ್ಲಿನ ಚಿತ್ರವನ್ನು ಹಾಕಲು ಆಜ್ಞೆಯನ್ನು ಮಾಡಿದ್ದರು. ಅದಕ್ಕನುಸಾರ ಈ ಬಟ್ಟೆಯ ಧ್ವಜವನ್ನು ತಯಾರಿಸಲಾಯಿತು. ‘ಈ ಧರ್ಮಧ್ವಜವು ಹಿಂದೂ ರಾಷ್ಟ್ರವು ಸಮೀಪ ಬಂದಿರುವುದರ ಪ್ರತೀಕವಾಗಿದೆ. ಈ ಧರ್ಮಧ್ವಜದ ಸ್ಥಾಪನೆಯಿಂದ ಎಲ್ಲೆಡೆ ಹಿಂದೂ ಧರ್ಮದ ಕೀರ್ತಿಯು ಬಹಳಷ್ಟು ಪ್ರಮಾಣದಲ್ಲಿ ಹರಡುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗೆ ವೇಗ ಬರುವುದು’, ಎಂಬ ಆಶೀರ್ವಚನವನ್ನು ಸಪ್ತರ್ಷಿಗಳು ನೀಡಿದ್ದಾರೆ.
ಧ್ವಜಸ್ಥಾಪನೆಯ ಅಂತರ್ಗತ ಉಪದೇಶದ / ಅಭಿಮಂತ್ರಣ ವಿಧಿಯನ್ನು ಮಾಡುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧ್ವಜವನ್ನು ಸ್ಪರ್ಶಿಸಿದಾಗ ಅವರಿಗೆ ಅದು ಅತ್ಯಂತ ಸಜೀವವಾಗಿದೆ ಎಂದು ಅನಿಸಿತು. ‘ಶ್ರೀಗುರುಗಳ ಚರಣಗಳನ್ನೇ ಸ್ಪರ್ಶಿಸುತ್ತಿದ್ದೇನೆ’, ಎಂದು ಅತ್ಯಂತ ಸ್ಪಷ್ಟವಾಗಿ ಅರಿವಾಯಿತು.
ವೈಶಿಷ್ಟ್ಯಪೂರ್ಣ ಕ್ಷಣ !
ಧ್ವಜಸ್ಥಾಪನೆಯ ವಿಧಿಯನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಂತಹ ಆಧ್ಯಾತ್ಮಿಕ ಅಧಿಕಾರಿ ವಿಭೂತಿಗಳಿಂದ ನೆರವೇರಿದುದರಿಂದ ಆ ಧ್ವಜಕ್ಕೆ ಜಾಗೃತಿ ಬಂದಿತು. ಅನಂತರ ಅದರ ಕಾರ್ಯವು ಆರಂಭವಾಗಿ ವಾತಾವರಣದಲ್ಲಿ ಪ್ರಕ್ಷೇಪಿಸ ತೊಡಗಿತು.
ಧರ್ಮಧ್ವಜದ ಸ್ಥಾಪನೆಯನ್ನು ಮಾಡುವಾಗ ಬಂದ ಅನುಭೂತಿ‘ಧರ್ಮಧ್ವಜ ಸ್ಥಾಪನೆಯ ವಿಧಿಯು ಆರಂಭವಾದ ನಂತರ ಮತ್ತು ಧರ್ಮಧ್ವಜದ ಆರೋಹಣದ ನಂತರವೂ ಗಾಳಿಯು ಬೀಸುತ್ತಿರಲಿಲ್ಲ. ಆದುದರಿಂದ ಧ್ವಜ ಹಾರಾಡುತ್ತಿರಲಿಲ್ಲ. ವಿಧಿಯ ಅಂತರ್ಗತ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧ್ವಜಕ್ಕೆ ನಮಸ್ಕಾರ ಮಾಡಿದ ನಂತರ ಇದ್ದಕ್ಕಿದ್ದಂತೆಯೇ ಗಾಳಿ ಬೀಸತೊಡಗಿತು ಮತ್ತು ಧ್ವಜವೂ ಚೆನ್ನಾಗಿ ಹಾರಾಡತೊಡಗಿತು. ‘ಶ್ರೀಮಹಾಲಕ್ಷ್ಮೀ ಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧ್ವಜಕ್ಕೆ ನಮಸ್ಕರಿಸಿದುದರಿಂದ ಧ್ವಜವು ಜಾಗೃತವಾಯಿತು, ಎಂದು ಉಪಸ್ಥಿತರಿದ್ದ ಎಲ್ಲರಿಗೂ ಅನಿಸಿತು. ಅನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧ್ವಜಸ್ತಂಭವನ್ನು ಸ್ಪರ್ಶಿಸಿದರು, ಆಗಲೂ ಅದೇ ಅನುಭೂತಿಯು ಪುನಃ ಬಂದಿತು. – ಶ್ರೀ. ಅತುಲ ಬಧಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. |
ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |