ಪರಬ್ರಹ್ಮಸ್ವರೂಪರಾದ ಶ್ರೀಮನ್ನಾರಾಯಣನೇ ‘ಶ್ರೀ ಜಯಂತ  ರೂಪದಲ್ಲಿ ಸನಾತನದ ಸಾಧಕರಿಗೆ ಗುರುರೂಪದಲ್ಲಿ ದೊರಕಿದ್ದಾರೆ !

ಲಕ್ಷಗಟ್ಟಲೆ ವರ್ಷಗಳ ಹಿಂದೆ ಬರೆದಿರುವ ಸಪ್ತರ್ಷಿ ಜೀವನಾಡಿಪಟ್ಟಿಯ ಮೂಲಕ ವರ್ಣಿಸಿರುವ ಗುರುಮಹಿಮೆ !

ಸಾಧಕರಿಗೆ ಮಹಾವಿಷ್ಣು ಎಂದರೇ ಪರಾತ್ಪರ ಗುರು ಡಾಕ್ಟರರು ಎಂಬುದರ ಅನುಭೂತಿಯು ಮುಂದೆ ಬರಲಿದೆ !

‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವಾಗಿದ್ದಾರೆ. ಅವರ ದೇಹವಲ್ಲ, ಅವರಲ್ಲಿನ ಸೂಕ್ಷ್ಮ ಆತ್ಮವೆಂದರೆ ಮಹಾವಿಷ್ಣು. ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹದಲ್ಲಿ ಮಹಾವಿಷ್ಣು ರೂಪಿ ತತ್ತ್ವವಿರುವುದರಿಂದ ಅವರಿಗೆ ತೊಂದರೆ ಖಂಡಿತವಾಗಿಯೂ ಆಗುತ್ತದೆ. ದೀಪದಲ್ಲಿ ಸ್ವಯಂಪ್ರಕಾಶಿ ಜ್ಯೋತಿಯೆಂದರೆ ಮಹಾವಿಷ್ಣು, ಅಂದರೆ ಪ.ಪೂ. ಡಾಕ್ಟರರಾಗಿದ್ದಾರೆ. ಅವರು ಯಾರು ಎಂಬುದರ ಅನುಭೂತಿ ಸಾಧಕರಿಗೆ ಮುಂದೆ ಬರಲಿದೆ. ಸಾಕ್ಷಾತ್ ಈಶ್ವರನೇ ಗುರುಗಳ ರೂಪದಲ್ಲಿ ಪೃಥ್ವಿಯ ಮೇಲೆ ಬಂದಿದ್ದಾನೆ. ಗುರುಗಳೇ ಈಶ್ವರನ ರೂಪ ಎಂಬ ಭಾವವಿದ್ದಲ್ಲಿ ಎಲ್ಲವೂ ಸಿಗುತ್ತದೆ. ಅವರ ‘ಜಯಂತ ಎಂಬ ಹೆಸರಿನಲ್ಲಿಯೇ ಎಲ್ಲವೂ ಇದೆ. ನಮ್ಮ ಗುರುಗಳು ಶಿಷ್ಯನ ಪ್ರತಿಯೊಂದು ತೊಂದರೆಯನ್ನು ದೂರಗೊಳಿಸುವವರಾಗಿದ್ದಾರೆ. ಸನಾತನದ ಸಾಧಕರು ಪ್ರಾರ್ಥನೆ ಮಾಡಿದಾಗ ಕೂಡಲೇ ಗುರುಗಳು ಬರುತ್ತಾರೆ. ಗುರುಗಳೆಂದರೆ ಪ್ರತ್ಯಕ್ಷ ಈಶ್ವರರಾಗಿದ್ದಾರೆ. ಸಾಧಕರು ‘ಇದು ಭೂಲೋಕವಲ್ಲ, ಈಶ್ವರನ ಸತ್ಯಲೋಕವೇ ಆಗಿದೆ ಎಂಬ ಭಾವವನ್ನಿಟ್ಟುಕೊಳ್ಳಬೇಕು. ಸಾಧಕರ ಒಂದು ಕ್ಷಣದ ಪ್ರಾರ್ಥನೆಯಿಂದ ಗುರುಗಳ ಕೃಪೆ ಅವರೆಡೆಗೆ ಧಾವಿಸಿ ಬರುತ್ತದೆ. – ಸಪ್ತರ್ಷಿಗಳು

ತ್ರೇತಾಯುಗದಲ್ಲಿ ಶ್ರೀರಾಮನ ರೂಪದಲ್ಲಿ ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದಂತಹ ಭಗವಂತನು ಈಗ ‘ಶ್ರೀಜಯಂತ ಎಂಬ ರೂಪದಲ್ಲಿ ಅವತರಿಸಿದ್ದಾನೆ !

ಶ್ರೀರಾಮಾವತಾರದಲ್ಲಿ ವಾಲ್ಮೀಕಿ ಋಷಿಗಳು ಲವ-ಕುಶನ ಮಾಧ್ಯಮದಿಂದ ರಾಮಾಯಣದ ಕಥೆಯನ್ನು ಹೇಳಿದರು. ಇದರಿಂದ ಅಯೋಧ್ಯೆಯ ಪ್ರಜೆಗಳಿಗೆ ಶ್ರೀರಾಮನು ಸ್ವಯಂ ಶ್ರೀಮನ್ನಾರಾಯಣನಾಗಿದ್ದಾನೆಂದು ಗಮನಕ್ಕೆ ಬಂದಿತು. ಭಗವಂತನು ಶ್ರೀಕೃಷ್ಣಾವತಾರದಲ್ಲಿ ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಅರ್ಜುನನಿಗೆ ‘ನಾನೇ ಆ ಶ್ರೀಮನ್ನಾರಾಯಣನು ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದನು. ತ್ರೇತಾಯುಗದಲ್ಲಿ ಯಾರು ಶ್ರೀರಾಮನ ರೂಪದಲ್ಲಿ ಅವತರಿಸಿದನೋ ಮತ್ತು ದ್ವಾಪರಯುಗದಲ್ಲಿ ಯಾರು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದನೋ, ಅದೇ ಭಗವಂತನು ಈಗ ಗುರುದೇವರ ರೂಪದಲ್ಲಿ ಅವತರಿಸಿದ್ದಾನೆ. ನಿರ್ವಿಕಾರ, ನಿರ್ವಿಕಲ್ಪ, ಪರಬ್ರಹ್ಮಸ್ವರೂಪ ಶ್ರೀಮನ್ನಾರಾಯಣನೇ ‘ಶ್ರೀಜಯಂತ ಎಂಬ ರೂಪದಲ್ಲಿ ಇಂದು ಸನಾತನದ ಸಾಧಕರೊಂದಿಗೆ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸಿಸುತ್ತಿ ದ್ದಾನೆ. ‘ಸಚ್ಚಿದಾನಂದವು ಅವನ ಮೂಲ ಸ್ವರೂಪ ವಾಗಿದೆ ! (ಆಧಾರ : ೧೩.೫.೨೦೨೦ ರಂದು ನಡೆದ ಸಪ್ತರ್ಷಿ ಜೀವನಾಡಿವಾಚನ)

ಮಹರ್ಷಿಗಳ ದಿವ್ಯವಾಣಿ ಅಂದರೆ ಜೀವನಾಡಿ ಪಟ್ಟಿ ಅಂದರೇನು ?

ಅಖಿಲ ಮನುಕುಲದ ಬಗ್ಗೆ ಶಿವ-ಪಾರ್ವತಿ ಯರಲ್ಲಾದ ಸಂವಾದವನ್ನು ಸಪ್ತರ್ಷಿಗಳು ಕೇಳಿಸಿ ಕೊಂಡರು. ಅವರು ಅದನ್ನು ಮನುಕುಲದ ಕಲ್ಯಾಣ ಕ್ಕಾಗಿ ಮತ್ತು ಆಧ್ಯಾತ್ಮಿಕ ಜೀವಗಳ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಬರೆದಿಟ್ಟರು. ಇದೇ ಆ ನಾಡಿಭವಿಷ್ಯ ! ನಾಡಿಭವಿಷ್ಯವು ತಾಳೆಗರಿಯ ಕೆಲವು ಪಟ್ಟಿಗಳ ಮೇಲೆ ಬರೆದಿರುತ್ತದೆ, ಅದರಲ್ಲಿನ ‘ಜೀವನಾಡಿ ಸಜೀವ ಇದೆ. ನಾಡಿ ಓದುವಾಗ ಸಾಕ್ಷಾತ್ ಶಿವ-ಪಾರ್ವತಿಯರು ನರ್ತಿಸುತ್ತಾರೆ, ಎಂದು ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್ ಇವರು ಹೇಳಿದ್ದಾರೆ. ಇಂದು ಅತ್ಯಂತ ಕಡಿಮೆ ಜನರಲ್ಲಿ ಮಹರ್ಷಿಗಳು ಲಕ್ಷಗಟ್ಟಲೆ ವರ್ಷಗಳ ಹಿಂದೆ ಬರೆದಿದ್ದ ನಾಡಿಭವಿಷ್ಯವನ್ನು ಓದುವ ಕೌಶಲ್ಯವಿದೆ.

ಸಪ್ತರ್ಷಿಗಳು ವರ್ಣಿಸಿದ ಸನಾತನದ ಮೂವರು ಗುರುಗಳ ಮಹಿಮೆ !

೧. ಮೂವರು ಗುರುಗಳ ದರ್ಶನದಿಂದಲೇ ಸಾಧಕರ ತೊಂದರೆ ದೂರವಾಗಲಿವೆ !

ನಾವು ಸಪ್ತರ್ಷಿಗಳು ಮತ್ತು ೮೮ ಸಾವಿರ ಋಷಿ-ಮುನಿಗಳು ಖಂಡಿತವಾಗಿಯೂ ಹೇಳುವುದೇನೆಂದರೆ, ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂವರ ಕೇವಲ ಭಾವಪೂರ್ಣ ದರ್ಶನದಿಂದಲೇ ಎಲ್ಲ ಸಾಧಕರ ದುಃಖ, ದಾರಿದ್ರ್ಯ, ಪಾಪ-ತಾಪ ಮತ್ತು ದೋಷಗಳು ದೂರವಾಗುವವು. (೧೩.೫.೨೦೨೦)

೨. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ‘ಸತ್ ತತ್ತ್ವವೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ‘ಚಿತ್ ತತ್ತ್ವವೆಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಶ್ರೀವಿಷ್ಣುವು ‘ಶ್ರೀಜಯಂತ ಅವತಾರದಲ್ಲಿ ಮಾಡಿದ ಅವತಾರಿ ಕಾರ್ಯವನ್ನು ಇನ್ನು ಮುಂದೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮುನ್ನಡೆಸಲಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಶ್ರೀಮನ್ನಾರಾಯಣನ ಶಕ್ತಿ ಎಂದರೆ ‘ಶ್ರೀ ಮಹಾಲಕ್ಷ್ಮಿಯಾಗಿದ್ದಾರೆ. ಶ್ರೀವಿಷ್ಣುವಿನ ಆಜ್ಞೆಯಿಂದ ಶ್ರೀ ಮಹಾಲಕ್ಷ್ಮೀಯು ‘ಭೂದೇವಿ ಮತ್ತು ‘ಶ್ರೀದೇವಿ ಎಂಬ ರೂಪಗಳಲ್ಲಿ ಪೃಥ್ವಿಯ ಮೇಲೆ ಅವತಾರ ಧಾರಣೆ ಮಾಡಿದ್ದಾರೆ. ‘ಸತ್-ಚಿತ್-ಆನಂದಸ್ವರೂಪ ಶ್ರೀವಿಷ್ಣುವಿನ ‘ಸತ್ ತತ್ತ್ವವೆಂದರೆ ಭೂದೇವಿಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಾಗಿದ್ದಾರೆ ಮತ್ತು ‘ಚಿತ್ ತತ್ತ್ವವೆಂದರೆ ಶ್ರೀದೇವಿಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಾಗಿದ್ದಾರೆ ! ಬರುವ ಕಾಲದಲ್ಲಿ ಯಾರಾದರೂ ಗುರುಗಳಿಗೆ ನವರತ್ನಗಳಿಂದ, ಕೋಟಿ ಕೋಟಿ ಸುವರ್ಣಗಳಿಂದ ಅಭಿಷೇಕ ಮಾಡಿದರೂ, ಭೂದೇವಿಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಬಿಟ್ಟು ಬೇರೆ ಯಾರೂ ಗುರುದೇವರ ಉತ್ತರಾಧಿಕಾರಿಗಳಾಗಲು ಸಾಧ್ಯವಿಲ್ಲ.

೩. ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ ಇವರ ಎರಡು ನೇತ್ರಗಳೆಂದರೆ ‘ಬ್ರಹ್ಮನ ‘ಬಿಂದೂ ಎಂಬ ಹೆಸರಿರುವ ‘ಬಿಂದಾ ಮತ್ತು ‘ಪಂಚಮಹಾಭೂತರೂಪಿ ಕೈಗಳ ಬೊಗಸೆ ಎಂದರೆ ‘ಅಂಜಲಿ !

‘ಶ್ರೀರಾಮ, ಶ್ರೀಕೃಷ್ಣ, ವ್ಯಾಸ, ಧನ್ವಂತರಿ ಮುಂತಾದ ರೂಪಗಳಲ್ಲಿ ಯಾರು ಪ್ರಕಟರಾದರೋ, ಅದೇ ಶ್ರೀಮಹಾವಿಷ್ಣುವು ಈಗ ‘ಶ್ರೀಜಯಂತ ಎಂಬ ರೂಪದಲ್ಲಿ ಪ್ರಕಟರಾಗಿದ್ದಾರೆ ಎಂಬುದು ಹೇಗೆ ಸತ್ಯವಾಗಿದೆಯೋ, ಅದೇ ರೀತಿ ‘ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ ಎಂದರೆ ಸಾಧಕರಿಗೆ ದೊರಕಿದ ಭಗವಂತರಾಗಿದ್ದಾರೆ ಎಂಬುದೂ ಅಷ್ಟೇ ಸತ್ಯವಾಗಿದೆ. ಈ ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತರವರ ಎರಡು ನೇತ್ರಗಳೆಂದರೆ ‘ಬ್ರಹ್ಮನ ‘ಬಿಂದೂ ಎಂಬ ಹೆಸರಿರುವ ‘ಬಿಂದಾ ಮತ್ತು ‘ಪಂಚಮಹಾಭೂತರೂಪಿ ಕೈಗಳ ಬೊಗಸೆ ಎಂದರೆ ‘ಅಂಜಲಿ ಹೆಸರಿರುವ ಈ ಇಬ್ಬರು ದೈವೀ ಸ್ತ್ರೀಯರಾಗಿದ್ದಾರೆ !

. ಪ್ರಸ್ತುತ ‘ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂರು ಅವತಾರವು ಪೃಥ್ವಿಯ ಮೇಲಿರುವುದರಿಂದ, ಅವರ ಕಡೆಗೆ ದೇವದೇವತೆಗಳು, ಬ್ರಹ್ಮಾಂಡದ ಎಲ್ಲ ನಕ್ಷತ್ರಗಳು, ಪಂಚಮಹಾಭೂತಗಳು, ಪಂಚಾಗ್ನಿ, ಸೂರ್ಯ, ಚಂದ್ರ, ೮೮ ಸಾವಿರ ಋಷಿ-ಮುನಿಗಳು ಇವರೆಲ್ಲರ ದೃಷ್ಟಿಯು ಪೃಥ್ವಿಯ ಕಡೆಗಿದೆ.

. ಸನಾತನದ ಮಂದಿರದಲ್ಲಿ ಗರ್ಭಗುಡಿಯಲ್ಲಿನ ಮೂರ್ತಿಯು ಪ.ಪೂ. ಗುರುದೇವರಾಗಿದ್ದಾರೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉತ್ಸವಮೂರ್ತಿಗಳಾಗಿದ್ದಾರೆ. (ಆಧಾರ : ೩೦.೫.೨೦೧೬ ಮತ್ತು ೧೩.೫.೨೦೨೦ ರಂದು ನಡೆದ ಸಪ್ತರ್ಷಿ ಜೀವನಾಡಿವಾಚನ)

ಭಗವಾನ್ ಶ್ರೀಕೃಷ್ಣನು ತನ್ನ ಲೀಲೆಯಿಂದ ದ್ರೌಪದಿಯ ರಕ್ಷಣೆ ಮಾಡಬಲ್ಲನಾದರೆ, ಪರಾತ್ಪರ ಗುರುದೇವರು ರಕ್ಷಣೆ ಮಾಡುವುದಿಲ್ಲವೇ ?

ನಾಡಿವಾಚನದ ಸಮಯದಲ್ಲಿ ವಸಿಷ್ಠರು ಮತ್ತು ವಿಶ್ವಾಮಿತ್ರರಲ್ಲಿ ಸಂವಾದ ನಡೆಯುತ್ತಿತ್ತು. ವಿಶ್ವಾಮಿತ್ರರು ವಸಿಷ್ಠಋಷಿಗಳಿಗೆ “ಗುರುಗಳ ಸ್ಮರಣೆಯಿಂದಲೇ ಜಯ ಲಭಿಸುತ್ತದೆ, ಹೀಗಿರುವಾಗ ಸನಾತನದ ಸಾಧಕರು ಗುರುದೇವರ ಸ್ಮರಣೆ ಮಾಡಿದರೆ ಹಸಿವು ನೀಗಬಹುದೇ ? ಎಂದು ಕೇಳಿದರು. ಆಗ ವಸಿಷ್ಠಋಷಿಗಳು ಒಂದು ಕಥೆಯನ್ನು ಹೇಳಿದರು. ದೂರ್ವಾಸಋಷಿಗಳು ತಮ್ಮ ಸಾವಿರಾರು ಶಿಷ್ಯರೊಂದಿಗೆ ದುರ್ಯೋಧನನ ಬಳಿ ಹೋಗುತ್ತಾರೆ. ಆಗ ಭೋಜನವಾದ ನಂತರ ಅವರು ದುರ್ಯೋಧನನಿಗೆ ‘ವರ ಕೇಳು ಎನ್ನುತ್ತಾರೆ.  ಆಗ ದುರ್ಯೋಧನನು “ನನಗೆ ವರ ಬೇಡ, ಆದರೆ ತಾವು ಪಾಂಡವರ ಮನೆಯಲ್ಲಿ ಭೋಜನ ಸ್ವೀಕರಿಸಬೇಕು ಎಂದನು. ಅದರಂತೆ ದೂರ್ವಾಸಋಷಿಗಳು ಪಾಂಡವರಿದ್ದಲ್ಲಿಗೆ ಹೋಗುತ್ತಾರೆ. ದ್ರೌಪದಿಯು ಮನೆಯಲ್ಲಿ ಅನ್ನದ ಒಂದು ಅಗುಳೂ ಇಲ್ಲದಿರುವುದನ್ನು ನೋಡುತ್ತಾಳೆ. ಅವರು ಶ್ರೀಕೃಷ್ಣನ ಸ್ಮರಣೆ ಮಾಡುತ್ತಾಳೆ. ಶ್ರೀಕೃಷ್ಣನು “ದ್ರೌಪದಿ ಏಕೆ ಚಿಂತಿಸುತ್ತೀ ? ಅಕ್ಷಯಪಾತ್ರೆಯನ್ನು ತೆಗೆದುಕೊಂಡು ಬಾ ಎಂದನು. ಆ ಅಕ್ಷಯಪಾತ್ರೆಗೆ ಅಂಟಿದ ಅನ್ನದ ೧ ಅಗುಳನ್ನು ಕೃಷ್ಣನು ತಿಂದು ‘ಕೃಷ್ಣಾರ್ಪಣಮಸ್ತು ಎನ್ನುತ್ತಾನೆ. ಅದೇ ಸಮಯದಲ್ಲಿ ನದಿಗೆ ಸ್ನಾನಕ್ಕಾಗಿ ಹೋದ ದೂರ್ವಾಸಋಷಿ ಮತ್ತು ಅವರ ಸಾವಿರಾರು ಶಿಷ್ಯಂದಿರ ಹೊಟ್ಟೆ ತಾನಾಗಿಯೇ ತುಂಬುತ್ತದೆ. ಶ್ರೀಕೃಷ್ಣನು ಇದನ್ನು ಮಾಡಬಲ್ಲನಾದರೆ, ನಮ್ಮ ಗುರುಗಳು ಮಾಡಲಾರರೇ ? (ಆಧಾರ : ೩೦.೫.೨೦೧೬ ರಂದು ನಡೆದ ಸಪ್ತರ್ಷಿ ಜೀವನಾಡಿವಾಚನ)

ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ.

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು