ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಜಯಂತ ಆಠವಲೆ

ರಾಜಕೀಯ ನಾಯಕರು ಮತ್ತು ಭಕ್ತರ ನಡುವಿನ ವ್ಯತ್ಯಾಸ !

‘ರಾಜಕೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಯಾರಿಂದಾದರೂ ಹಣ ಅಥವಾ ಪದವಿ ದೊರೆಯುವುದಾದರೆ ತಕ್ಷಣ ಇನ್ನೊಂದು ಪಕ್ಷಕ್ಕೆ ಹೋಗಿಬಿಡುತ್ತಾರೆ. ಇದಕ್ಕೆ ವಿರುದ್ಧವಾಗಿ ಭಕ್ತನು ಭಗವಂತನ ಪಕ್ಷ ಬಿಟ್ಟು, ಭಗವಂತನ ಚರಣದಲ್ಲಿನ ತನ್ನ ಸ್ಥಾನವನ್ನು ಬಿಟ್ಟು ಇನ್ನೆಲ್ಲಿಗೂ ಹೋಗುವುದಿಲ್ಲ !’

ಹಿಂದೂಗಳ ದಯನೀಯ ಸ್ಥಿತಿಗೆ ಕಾರಣವಾದ ಸಾಮ್ಯವಾದ !

ಮುಸಲ್ಮಾನರು ಸಾಮ್ಯವಾದಿಗಳಾಗುವುದಿಲ್ಲ; ಆದರೆ ದೇವರನ್ನು ನಂಬದ ಹಿಂದೂಗಳು ಸಾಮ್ಯವಾದಿಗಳಾಗುತ್ತಾರೆ, ಇದರಿಂದಾಗಿ ಅವರಿಗೆ ದೇವರ ಆಶೀರ್ವಾದ ಸಿಗುವುದಿಲ್ಲ. ಬಂಗಾಳ ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಸಾಮ್ಯವಾದಿಗಳಾಗಿರುವುದರಿಂದ, ಅಲ್ಲಿನ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ.

ಇಂತಹವರ ಹೆಸರು ಎಂದಾದರೂ ಅಜರಾಮರವಾಗಬಹುದೇ ?

ಈ ಜಗತ್ತಿನಲ್ಲಿ ’ದೇಹ, ಮನಸ್ಸು ಮತ್ತು ಬುದ್ಧಿಗೆ’ ಅರ್ಥವಾಗುವಂತಹ ವಿಷಯಗಳು ಶೇಕಡಾ ಒಂದು ಲಕ್ಷಾಂಶಕ್ಕಿಂತಲೂ ಕಡಿಮೆಯಿರುವಾಗ, ಅವುಗಳಿಂದ ತಿಳಿದುಬಂದದ್ದನ್ನು ವೈಭವೀಕರಿಸುವವರ ಹೆಸರು ಎಂದಾದರೂ ಅಜರಾಮರವಾಗುವುದೇ ?

ವಿಜ್ಞಾನದ ಮೌಲ್ಯವು ‘ಶೂನ್ಯ’ !

ಮಾನವನಿಗೆ ಮಾನವೀಯತೆಯನ್ನು ಕಲಿಸದಿರುವ; ಬದಲಾಗಿ ವಿಧ್ವಂಸಕ ಅಸ್ತ್ರ, ಶಸ್ತ್ರಗಳನ್ನು ನೀಡುವ ವಿಜ್ಞಾನದ ಮೌಲ್ಯವು ಶೂನ್ಯವಾಗಿದೆ !

ವಿಜ್ಞಾನದ ಮಿತಿ !

‘ವಿಜ್ಞಾನವು ಅಧ್ಯಾತ್ಮದ ಸಿದ್ಧಾಂತಗಳ ವಿಷಯದಲ್ಲಿ ಏನಾದರೂ ಹೇಳುವುದು ಎಂದರೆ, ಚಿಕ್ಕ ಮಗುವು ದೊಡ್ಡವರ ಬಗ್ಗೆ ಮಾತನಾಡಿದಂತೆ !’

ಸಾಧನೆಯ ಮಹತ್ವ!

‘ಸಾಧನೆಯಿಂದ ‘ದೇವರು ಬೇಕು’, ಎಂದೆನಿಸತೊಡಗಿದರೆ, ‘ಪೃಥ್ವಿಯ ಮೇಲಿನ ಏನಾದರೂ ಬೇಕು’, ಎಂದು ಅನಿಸುವುದಿಲ್ಲ. ಅದರಿಂದ ಯಾರ ಮೇಲೆಯೂ ಅಸೂಯೆ, ಮತ್ಸರ ಅಥವಾ ದ್ವೇಷ ಅನಿಸುವುದಿಲ್ಲ. ಹಾಗೆಯೇ ಇತರರೊಂದಿಗೆ  ದೂರವಾಗಿರುವಿಕೆ, ಜಗಳಗಳೂ ಆಗುವುದಿಲ್ಲ.

ಅಧ್ಯಾತ್ಮದ ಮಹತ್ವ

‘ಜಗತ್ತಿನಲ್ಲಿ ಇತರ ಎಲ್ಲ ವಿಷಯಗಳ ಜ್ಞಾನವು ಅಹಂಕಾರವನ್ನು ವೃದ್ಧಿಸುತ್ತದೆ, ಕೇವಲ ಅಧ್ಯಾತ್ಮದ ವಿಷಯ ಮಾತ್ರ ಅಹಂಕಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.’

‘ವೈಯಕ್ತಿಕ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಹಾಗೂ ಧರ್ಮಪ್ರೇಮ ಮಾಡಿ ನೋಡಿ. ಅದರಲ್ಲಿ ಹೆಚ್ಚು ಆನಂದವಿದೆ !’

’ವಿಜ್ಞಾನಕ್ಕೆ ಹೆಚ್ಚಿನದು ತಿಳಿಯದ ಕಾರಣ, ಪದೇ ಪದೇ ಶೋಧ ಕಾರ್ಯಗಳನ್ನು ಮಾಡಬೇಕಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ಎಲ್ಲವೂ ತಿಳಿದಿರುವ ಕಾರಣ ಶೋಧ ಕಾರ್ಯ ಮಾಡುವ ಅವಶ್ಯಕತೆಯಿಲ್ಲ.’

– (ಪರಾತ್ಪರ ಗುರು) ಡಾ. ಆಠವಲೆ