ಜ್ಞಾನವಾಪಿ ಮಸೀದಿ ಸಮೀಕ್ಷೆಯನ್ನು ತಡೆದ ನೂರಾರು ಮುಸ್ಲಿಮರು !

ಶೃಂಗಾರಗೌರಿ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಮೇ ೬ರಂದು ಮುಸ್ಲಿಂ ಪಕ್ಷ ಹಾಗೂ ಹಿಂದೂ ಪಕ್ಷದ ನ್ಯಾಯವಾದಿಗಳ ಸಮ್ಮುಖದಲ್ಲಿ ನ್ಯಾಯಾಲಯದ ಆಯುಕ್ತರಿಂದ ಶೃಂಗಾರಗೌರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸಲಾಯಿತು.

ಮೂರು ಐ.ಎ.ಎಸ್. ಅಧಿಕಾರಿಗಳಿಗೆ ೧ ತಿಂಗಳ ಜೈಲು ಶಿಕ್ಷೆ !

ನ್ಯಾಯಾಂಗ ನಿಂದನೆ ಮತ್ತು ನಿಗದಿತ ಅವಧಿಯೊಳಗೆ ಆದೇಶವನ್ನು ಪಾಲಿಸದ ಆರೋಪದಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ಮತ್ತು ೨,೦೦೦ ರೂಪಾಯಿ ದಂಡ ವಿಧಿಸಿದೆ.

ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮೆ. ೧೯ ರಂದು ತೀರ್ಪು !

ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಮೊಕದ್ದಮೆಯ ಮೇಲೆ ಬರುವ ಮೆ ೧೯ ರಂದು ನ್ಯಾಯಾಲಯ ತೀರ್ಪು ನೀಡಲಿದೆ. ಕಟರಾ ಕೇಶವ ದೇವ ಮಂದಿರದ ದೇವತೆ ಶ್ರೀಕೃಷ್ಣ ವಿರಾಜಮಾನ ಮತ್ತು ಅನ್ಯ ೬ ಜನರು ರಂಜನಾ ಅಗ್ನಿಹೋತ್ರಿ ಇವರ ಮೂಲಕ ದಾಖಲಿಸಿರುವ ಮನವಿಯ ಮೇಲೆ ತೀರ್ಪು ನೀಡುವರು.

ಗುಜರಾತಿನ ನಿರ್ದಲಿಯ ಶಾಸಕ ಜಿಗ್ನೇಶ್ ಮೇವಾನಿ ಇವರ ಸಹಿತ ೧೦ ಜನರಿಗೆ ಕಾರಾಗೃಹ ಶಿಕ್ಷೆ

೫ ವರ್ಷಗಳ ಮೊದಲು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವ ಪ್ರಕರಣದಲ್ಲಿ ಇಲ್ಲಿಯ ದಂಡಾಧಿಕಾರಿ ನ್ಯಾಯಾಲಯವು ಗುಜರಾತಿನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇನ್ನಿತರ ೯ ಜನರನ್ನು ತಪ್ಪಿತಸ್ಥರೆಂದು ಘೋಷಿಸಿ ೩ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಮಸೀದಿಗಳ ಮೇಲೆ ಧ್ವನಿವರ್ಧಕದಲ್ಲಿ ಅಜಾನ ನೀಡುವುದು ಮೂಲಭೂತ ಅದಿಕಾರವಲ್ಲ ! – ಅಲಹಾಬಾದ ಉಚ್ಚ ನ್ಯಾಯಾಲಯ

ಮಸೀದಿಗಳ ಮೇಲೆ ಧ್ವನಿವರ್ಧಕಗಳಿಂದ ಅಜಾನ ನೀಡುವುದು ಇದು ಮೂಲಭೂತ ಅಧಿಕಾರವಲ್ಲ . ಈ ಸಂದರ್ಭದಲ್ಲಿ ನಾವು ಈ ಮೊದಲೇ ಆದೇಶ ನೀಡಿದ್ದೇವೆ, ಎಂದು ಹೇಳುತ್ತಾ ಉಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ದಾಖಲಿಸಲಾದ ಮನವಿಯನ್ನು ತಿರಸ್ಕರಿಸಿದೆ.

ಶೃಂಗಾರ ಗೌರಿ ಮಂದಿರ ಮತ್ತು ಜ್ಞಾನವಾಪಿ ಮಸೀದಿಯ ಪರಿಶೀಲನೆಗೆ ಮುಸಲ್ಮಾನರ ವಿರೋಧ !

ನ್ಯಾಯಾಲಯದ ಆದೇಶದ ಪ್ರಕಾರ ಮೇ ೬ ರಂದು ನ್ಯಾಯಾಲಯ ಆಯುಕ್ತರಿಂದ ಶೃಂಗಾರ ಗೌರಿ ಮಂದಿರ ಮತ್ತು ಜ್ಞಾನವಾಪಿ ಮಸೀದಿ ಇವುಗಳ ಚಿತ್ರೀಕರಣ ಮತ್ತು ಪರಿಶೀಲನೆ ನಡೆಸಲಾಯಿತು. ಶುಕ್ರವಾರ ಇರುವುದರಿಂದ ಜ್ಞಾನವಾಪಿ ಮಸೀದಿಯಲ್ಲಿ ಮಧ್ಯಾಹ್ನ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ನಮಾಜ್ ಪಠಣಕ್ಕಾಗಿ ಬಂದಿದ್ದರು.

ಮುಸಲ್ಮಾನ ಪುರುಷರಿಗೆ ಬಹುಪತ್ನಿತ್ವದ ಅನುಮತಿ ನೀಡಬಾರದು !- ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಮುಸಲ್ಮಾನ ಪುರುಷರಿಗೆ ಅವರ ಮೊದಲ ಪತ್ನಿಯ ಅನುಮತಿಯಿಲ್ಲದೇ ಎರಡನೇ ಅಥವಾ ಬಹುವಿವಾಹ ಮಾಡಿಕೊಳ್ಳಲು ಅನುಮತಿಯನ್ನು ನೀಡಬಾರದು ಎಂದು ಕೋರಿ, ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ರೇಶ್ಮಾ ಹೆಸರಿನ 28 ವರ್ಷದ ಮುಸಲ್ಮಾನ ಮಹಿಳೆಯು ದಾಖಲಿಸಿದ್ದಾಳೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಮ ಆದ್ಮಿ ಪಕ್ಷದ ಮಹಿಳಾ ನಾಯಕಿಗೆ ೭ ವರ್ಷಗಳ ಜೈಲು ಶಿಕ್ಷೆ

ಇಲ್ಲಿನ ನಗರ ವಸತಿ ಅಭಿವೃದ್ಧಿ ಪ್ರಾಧಿಕಾರದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆಮ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಾಧ್ಯಕ್ಷೆ ನಿಶಾ ಸಿಂಗ ಸೇರಿದಂತೆ ಒಟ್ಟು ೧೦ ಮಹಿಳೆಯರಿಗೆ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೧೦೦೦೦ ರೂಪಾಯಿ ದಂಡ ವಿಧಿಸಲಾಗಿದೆ.

ಹಿಮಾಲಯದ ೫೧ ಶಕ್ತಿಪೀಠಗಳ ಸಂರಕ್ಷಣೆಗಾಗಿ ಮನವಿ

ಹಿಮಾಲಯದಲ್ಲಿರುವ ೫೧ ಶಕ್ತಿ ಪೀಠಗಳ ಸಂರಕ್ಷಣೆಯ ಸಂದರ್ಭದಲ್ಲಿ ಮನವಿ ದಾಖಲಿಸಲಾಗಿರುವುದರ ವಿಚಾರಣೆ ನಡೆಸುವಾಗ ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಬರುವ ೬ ವಾರಗಳಲ್ಲಿ ಉತ್ತರ ನೀಡಲು ಹೇಳಲಾಗಿದೆ. ಈ ಮನವಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ಕಕ್ಷಿದಾರ ಮಾಡಲಾಗಿದೆ.

ಜ್ಞಾನವಾಪೀ ಮಸೀದಿಯ ಒಳಗಿನ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸಲು ಬಿಡುವುದಿಲ್ಲ !

ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ.