ಧಾಮಪುರ (ಉತ್ತರ ಪ್ರದೇಶ) – ಬಿಜನೋರ ಜಿಲ್ಲೆಯಲ್ಲಿನ ಧಾಮಪುರದಲ್ಲಿರುವ ಕುಂದೀಪುರ ಗ್ರಾಮದ ಮುಖ್ಯಸ್ಥರಾದ ನಿಸಾರ ಅಹಮದರ ಮಗನಾದ ಆರಿಫನು, ಭಗವಾನ ಶ್ರೀರಾಮ ಮತ್ತು ಸೀತಾಮಾತೆಯ ಬಗ್ಗೆ ಅಶ್ಲೀಲ ಟೀಕೆಗಳನ್ನು ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾನೆ. ಆರಿಫನು ತನ್ನ ಇನ್ಸ್ಟಾಗ್ರಾಮ್ ಖಾತೆಯಾದ ‘ಆರಿಫ್ ಡಾನ್, ಭಯೋತ್ಪಾದನೆಯ ಇನ್ನೊಂದು ಹೆಸರು’ನಿಂದ ಒಂದು ‘ವಿಡಿಯೋ ಸ್ಟೇಟಸ್’ ಅಪ್ಲೋಡ್ ಮಾಡಿದ್ದಾನೆ, ಅದರಲ್ಲಿ ಅವನು ಭಗವಾನ ಶ್ರೀರಾಮ ಮತ್ತು ಸೀತಾ ಮಾತೆಯ ಛಾಯಾಚಿತ್ರವನ್ನು ಪ್ರಸಾರ ಮಾಡಿ ಅವರ ಬಗ್ಗೆ ಅಶ್ಲೀಲ ಟೀಕೆಗಳನ್ನು ಮಾಡಿದ್ದಾನೆ. ಈ ವಿಡಿಯೋ ನೋಡಿದ ನಂತರ ಗ್ರಾಮಸ್ಥರು ಆಕ್ರೋಶಗೊಂಡರು. ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕುಂದೀಪುರದ ಗ್ರಾಮಸ್ಥರಾದ ವಿಶೇಷ ರಾಜಪೂತರವರು ಮಾತನಾಡಿ, ಇನ್ಸ್ಟಾಗ್ರಾಮ್ ನೋಡಿದಾಗ ನನಗೆ ಕುಂದೀಪುರದ ಈ ಯುವಕನ ವೀಡಿಯೊ ಕಾಣಿಸಿತು. ವೀಡಿಯೊದಲ್ಲಿ, ಆರಿಫನು ದೇವತೆಗಳ ಬಗ್ಗೆ ಅಶ್ಲೀಲ ಟೀಕೆಗಳನ್ನು ಮಾಡಿದ್ದನು ಎಂದು ಹೇಳಿದರು. ಗ್ರಾಮಸ್ಥರು ಈ ಹಿಂದೆ ಆರಿಫನ ಮೇಲೆ ಕಳ್ಳತನ, ಹೊಡೆದಾಟ ಮತ್ತು ವಿನಯಭಂಗದ ಆರೋಪದಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಗ್ರಾಮಸ್ಥರ ದೂರಿನ ಬಳಿಕ ಧಾಮಪೂರ ಪೊಲೀಸರು ಆರಿಫನ ವಿರುದ್ಧ ದೂರು ದಾಖಲಿಸಿ ಅವನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮುಸಲ್ಮಾನ ಅಲ್ಪಸಂಖ್ಯಾತರ ಮದವನ್ನು ತಿಳಿಯಿರಿ ! ಮುಸಲ್ಮಾನರು ಆಗಾಗ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿ ಹಿಂದೂಗಳನ್ನು ಕೆಣಕಲು ಪ್ರಯತ್ನಿಸುತ್ತಿರುತ್ತಾರೆ. ಮುಸಲ್ಮಾನರ ಈ ಮದವು ಕಮ್ಯುನಿಸ್ಟರು ಮತ್ತು ಜಾತ್ಯಾತೀತವಾದಿಗಳಿಗೆ ಕಾಣಿಸುವುದಿಲ್ಲ. ಹಿಂದೂಗಳ ಮೇಲಿನ ದಾಳಿಗಳ ವಿರುದ್ಧ ಹಿಂದೂಗಳು ಸಂಘಟಿತರಾಗುವುದು ಈ ಕಾಲದ ಆವಶ್ಯಕತೆಯಾಗಿದೆ ! |