ಸಂಭಲ (ಉತ್ತರ ಪ್ರದೇಶ) – ಕಳೆದ ಕೆಲವು ಕಾಲಾವಧಿಗಳಿಂದ ಉತ್ತರ ಪ್ರದೇಶದ ಸಂಭಲನಲ್ಲಿ ಉತ್ಖನನ ಮತ್ತು ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಅವಧಿಯಲ್ಲಿ, 6 ಕ್ಕೂ ಹೆಚ್ಚು ದೇವಸ್ಥಾನಗಳು ಮತ್ತು 24 ಬಾವಿಗಳು ಪತ್ತೆಯಾಗಿವೆ. ಈ 30 ಸ್ಥಳಗಳ ಸಮೀಕ್ಷೆ ನಡೆಸಲಾಗಿದೆ. ಇವುಗಳಲ್ಲಿ ಚತುರ್ಮುಖ ಬ್ರಹ್ಮ ಕೂಪ (ಬಾವಿ), ಅಮೃತ ಕೂಪ, ಅಶೋಕ ಕೂಪ, ಸಪ್ತಸಾಗರ ಕೂಪ, ಬಲಿ ಕೂಪ, ಧರ್ಮ ಕೂಪ, ಋಷಿಕೇಶ ಕೂಪ, ಪರಾಶರ ಕೂಪ, ಅಕರ್ಮಮೋಚನ ಕೂಪ, ಧರಣಿ ಬಾರಾ ಕೂಪ, ಭದ್ರಕ ಆಶ್ರಮ ತೀರ್ಥ, ಸ್ವರ್ಗದೀಪ ತೀರ್ಥ, ಚಕ್ರಪಾಣಿ ತೀರ್ಥ, ಕಲ್ಕಿ ಶ್ರೀ ವಿಷ್ಣು ದೇವಸ್ಥಾನ, ಬಾವಡಿ ಚಂದೌಸಿ, ಫಿರೋಜ್ಪುರ ಕೋಟೆ, ಜೋಮ ನಾಥ ದೇವಸ್ಥಾನ, ತೋತಾ ಮೈನಾ ಸಮಾಧಿ ಮತ್ತು ಪೃಥ್ವಿರಾಜನ ಬಾವಡಿ ಉರ್ಫ್ ಕಳ್ಳರ ಬಾವಿ ಸೇರಿವೆ.