ಮಸೀದಿಗಳ ಮೇಲೆ ಧ್ವನಿವರ್ಧಕದಲ್ಲಿ ಅಜಾನ ನೀಡುವುದು ಮೂಲಭೂತ ಅದಿಕಾರವಲ್ಲ ! – ಅಲಹಾಬಾದ ಉಚ್ಚ ನ್ಯಾಯಾಲಯ

ಪ್ರಯಾಗರಾಜ (ಉತ್ತರ ಪ್ರದೇಶ) – ಮಸೀದಿಗಳ ಮೇಲೆ ಧ್ವನಿವರ್ಧಕಗಳಿಂದ ಅಜಾನ ನೀಡುವುದು ಇದು ಮೂಲಭೂತ ಅಧಿಕಾರವಲ್ಲ . ಈ ಸಂದರ್ಭದಲ್ಲಿ ನಾವು ಈ ಮೊದಲೇ ಆದೇಶ ನೀಡಿದ್ದೇವೆ, ಎಂದು ಹೇಳುತ್ತಾ ಉಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ದಾಖಲಿಸಲಾದ ಮನವಿಯನ್ನು ತಿರಸ್ಕರಿಸಿದೆ.

೧. ಉತ್ತರಪ್ರದೇಶದ ಬದಾಯು ಎಂಬಲ್ಲಿಯ ಇರ್ಫಾನ್ ಮನವಿ ದಾಖಲಿಸಿದ್ದನು. ಅದರ ಮೂಲಕ ಅವನು ಅವನ ಊರಿನಲ್ಲಿ ಇರುವ ಮಸೀದಿಗಳಲ್ಲಿ ಅಜಾನ್ ಧ್ವನಿವರ್ಧಕದ ಮೂಲಕ ಕೇಳಿಸಲು ಅನುಮತಿ ನೀಡಬೇಕೆಂಬುದು ಒತ್ತಾಯಿಸಿದ್ದನು. ಇದರ ಮೇಲೆ ನ್ಯಾಯಾಲಯವು ಯಾವುದೇ ಧಾರ್ಮಿಕ ಪೂಜೆ ಮಾಡುವುದಕ್ಕಾಗಿ ಧ್ವನಿವರ್ಧಕದ ಉಪಯೋಗ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.

೨. ೨೦೨೦ರಲ್ಲಿ ಸಂಸದ ಆಫಜಲ್ ಅನ್ಸಾರಿ ಇವರ ಮನವಿಯನ್ನು ಅಲಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯ ‘ಧ್ವನಿವರ್ಧಕದ ಮೂಲಕ ಅಜಾನ್ ನೀಡುವುದರ ಮೇಲೆ ನಿಷೇಧ ಹೇರಿರುವುದು ಯೋಗ್ಯವಾಗಿದೆ. ಕಾರಣ ಈ ರೀತಿ ಮಾಡುವುದು ಇಸ್ಲಾಂ ಪ್ರಕಾರ ಪದ್ಧತಿ ಅಲ್ಲ. ಧ್ವನಿವರ್ಧಕದ ಸಂಶೋಧನೆ ಆಗುವುದರ ಮೊದಲು ಮನುಷ್ಯನಿಂದ ಅಜಾನ ನೀಡಲಾಗುತ್ತಿತ್ತು. ಈಗಲೂ ಮನುಷ್ಯನಿಂದ ಆಜಾನ್ ನೀಡಲು ಸಾಧ್ಯವಾಗುತ್ತದೆ’ ಎಂದು ಸ್ಪಷ್ಟಪಡಿಸಿತ್ತು.

ಸಂಪಾದಕೀಯ ನಿಲುವು

ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳಿಂದ ಇನ್ನು ಎಷ್ಟು ಬಾರಿ ಆದೇಶ ನೀಡಿದರೆ ಅದರ ಪ್ರಕಾರ ಮುಸಲ್ಮಾನರು ಕೃತಿ ಮಾಡುವರು ಮತ್ತು ಪೊಲೀಸರು ಅವರಿಗೆ ಆ ಕೃತಿ ಮಾಡಲು ಅನಿವಾರ್ಯಪಡಿಸುವವರು ?