ಲವ್ ಜಿಹಾದ್‌ನಿಂದ ಕೇರಳದ ಒಂದೇ ತಾಲೂಕಿನಿಂದ ೪೦೦ ಕ್ರೈಸ್ತ ಯುವತಿಯರು ನಾಪತ್ತೆ! – ಭಾಜಪ ನಾಯಕ ಪಿ.ಸಿ. ಜಾರ್ಜ್

ಭಾಜಪ ನಾಯಕ ಪಿ.ಸಿ. ಜಾರ್ಜ್ ಇವರಿಂದ ಮಾಹಿತಿ

ತಿರುವನಂತಪುರಂ (ಕೇರಳ) – ಲವ್ ಜಿಹಾದ್ ನಿಂದ ಕೇರಳದ ಮೀನಾಚಿಲ ತಾಲೂಕಿನಿಂದಲೇ 400 ಕ್ರೈಸ್ತ ಯುವತಿಯರು ನಾಪತ್ತೆಯಾಗಿದ್ದಾರೆ. ಅವರಲ್ಲಿ 41 ಯುವತಿಯರನ್ನು ಮಾತ್ರ ಮರಳಿ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೇರಳದ ಭಾಜಪ ನಾಯಕ ಮತ್ತು ಮಾಜಿ ಶಾಸಕ ಪಿ.ಸಿ. ಜಾರ್ಜ್ ಮಾಹಿತಿ ನೀಡಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

೧. ಪಿ.ಸಿ. ಜಾರ್ಜ್ ಅವರು ತಮ್ಮ ಮಾತನ್ನು ಮುಂದುವರಿಸಿ, ಕೇರಳದ ಸಧ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕ್ರೈಸ್ತ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ 24 ವರ್ಷ ವಯಸ್ಸಾಗುವ ಮುನ್ನವೇ ವಿವಾಹ ಮಾಡಿಸಬೇಕು, ಎಂದಿದ್ದಾರೆ.

2. ಇತ್ತೀಚೆಗೆ ರಾಜ್ಯದ ಎರಾಟ್ಟುಪೇಟದಲ್ಲಿ ಹೆಚ್ಚಿನ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಬಗ್ಗೆ ಅವರು ಮಾತನಾಡಿ, ಇಡೀ ರಾಜ್ಯವನ್ನು ನಾಶಮಾಡಲು ಈ ಸ್ಫೋಟಕಗಳು ಸಾಕಾಗಿದ್ದವು ಎಂದರು.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಈಗಲಾದರೂ ಸಂಪೂರ್ಣ ದೇಶದಲ್ಲಿ ಲವ್ ಜಿಹಾದ ವಿರೋಧಿ ಕಾನೂನು ರೂಪಿಸಿ ಕಠಿಣ ಶಿಕ್ಷೆಯ ಅವಕಾಶ ಕಲ್ಪಿಸುವುದು ಆವಶ್ಯಕವಾಗಿದೆ!