ವಕ್ಫ್ ಕಾನೂನಿನಲ್ಲಿನ ಸುಧಾರಣೆಗಳ ವಿರುದ್ಧ ಮುಸ್ಲಿಮರಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಹೇಳಿಕೆ!
ನವದೆಹಲಿ – ವಕ್ಫ್ ಕಾನೂನಿನ ಮೂಲಕ ಸರಕಾರಿ ಭೂಮಿ, ದೇವಸ್ಥಾನದ ದೇವಭೂಮಿ, ವೈಯಕ್ತಿಕ ಮಾಲೀಕತ್ವದ ಭೂಮಿ ಸೇರಿದಂತೆ ಲಕ್ಷಾಂತರ ಎಕರೆ ಭೂಮಿಯನ್ನು ವಕ್ಫ್ ಮಂಡಳಿ ಕಬಳಿಸಿದೆ. ಇಂತಹ ಕಪ್ಪು, ದಬ್ಬಾಳಿಕೆಯ, ಅನ್ಯಾಯದ ಕಾನೂನುಗಳಲ್ಲಿ ಬದಲಾವಣೆ ಬೇಡ, ಅವುಗಳನ್ನು ರದ್ದುಗೊಳಿಸಬೇಕು. ವಕ್ಫ್ ಕಾನೂನಿನಲ್ಲಿ ಬದಲಾವಣೆ ಮಾಡಬೇಡಿ, ಅದನ್ನು ರದ್ದುಗೊಳಿಸಿ ಎಂದು ಪ್ರಖರ ಹಿಂದೂತ್ವವಾದಿ ಚಿಂತಕ ಮತ್ತು ವಿಜ್ಞಾನಿ ಡಾ. ಆನಂದ್ ರಂಗನಾಥನ್ ನೇವವಾಗಿ ಹೇಳಿದ್ದಾರೆ. ಅವರು ಇಂಗ್ಲಿಷ್ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ‘ನನ್ನ ವಿರೋಧ ವಕ್ಫ್ ಮಂಡಳಿಗೆ ಅಲ್ಲ, ಅದರ ಕಾನೂನಿಗೆ. ಹಲವಾರು ಮಂಡಳಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಿವೆ, ಹಾಗೆಯೇ ವಕ್ಫ್ ಮಂಡಳಿಯೂ ಇದೆ’ ಎಂದು ರಂಗನಾಥನ್ ಸ್ಪಷ್ಟಪಡಿಸಿದರು.
ಡಾ. ರಂಗನಾಥನ್ ಅವರು ಮುಂದೆ ಮಾತನಾಡುತ್ತಾ,
1. ಶಾಹೀನ್ ಬಾಗ್‌ನ ಭಯಾನಕ ಪ್ರತಿಭಟನೆಯನ್ನು ನೆನಪಿಸಿಕೊಳ್ಳಿ!
ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದ್ದರೂ, ಯಾವುದನ್ನಾದರೂ ನಿಲ್ಲಿಸುವ ಹಕ್ಕು ಯಾರಿಗೂ ಇಲ್ಲ. ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯನ್ನು ನೆನಪಿಸಿಕೊಳ್ಳಿ. ದ್ವೇಷಪೂರಿತ ಮತಾಂಧರು ಅಲ್ಲಿನ ರಸ್ತೆಗಳನ್ನು ಅಕ್ರಮವಾಗಿ ತಡೆದು ಲಕ್ಷಾಂತರ ಜನರಿಗೆ ತೊಂದರೆ ಉಂಟುಮಾಡಿದ್ದರು. ಅದಕ್ಕೆ ಅವರ ಬಳಿ ಯಾವುದೇ ತಾರ್ಕಿಕ ಕಾರಣವಿರಲಿಲ್ಲ. ಕೇವಲ ಶಕ್ತಿ ಪ್ರದರ್ಶನಕ್ಕಾಗಿ ಅವರು ಹಾಗೆ ಮಾಡಿದರು ಮತ್ತು ಆ ಸಮಯದಲ್ಲಿ ಯಾವ ಘೋಷಣೆಗಳನ್ನು ಕೂಗಿದರು, ‘ತೇರಾ-ಮೇರಾ ರಿಶ್ತಾ ಕ್ಯಾ ಲಾ-ಇಲಾಹ-ಇಲ್ಲಲ್ಲಾಹ್’ (ಅಲ್ಲಾ ಮಾತ್ರ ದೇವರು, ಬೇರೆ ಯಾರೂ ಅಲ್ಲ); ‘ಹಿಂದೂಗಳಿಂದ ಸ್ವಾತಂತ್ರ್ಯ’, ‘ಕಾಫಿರರಿಂದ ಸ್ವಾತಂತ್ರ್ಯ’, ‘ಜಿನ್ನಾ ವಾಲಿ ಆಜಾದಿ ಹಮ್ ಲೇಕರ್ ರಹೇಂಗೆ’, ‘ಹಿಂದುತ್ವದ ಕಬರ್ ತೋಡುತ್ತೇವೆ’ ?
2. ಮತ್ತೆ ‘ಶಾಹೀನ್ ಬಾಗ್’ ರೀತಿಯ ಪ್ರತಿಭಟನೆ ನಡೆದರೆ, ಕೇಂದ್ರ ಸರಕಾರವೇ ಸಂಪೂರ್ಣ ಹೊಣೆ !
ವಕ್ಫ್ ಕಾನೂನಿನಲ್ಲಿನ ಸುಧಾರಣೆಗಳ ವಿರುದ್ಧ ಮುಸ್ಲಿಮರು ಶಾಹೀನ್ ಬಾಗ್ ರೀತಿಯ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ; ಆದರೆ ನಾನು ಅವರನ್ನು ದೂಷಿಸುವುದಿಲ್ಲ. ಇದಕ್ಕಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಅವರನ್ನೇ ನಾನು ಹೊಣೆಗಾರರನ್ನಾಗಿ ಮಾಡುತ್ತೇನೆ. ಮೊದಲ ಬಾರಿಗೆ (2020 ರಲ್ಲಿ) ಅವರು ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆಯನ್ನು ನಿಲ್ಲಿಸುವಲ್ಲಿ ವಿಫಲರಾದರು. ಈಗ ಅವರು ಮತ್ತೆ ವಿಫಲರಾದರೆ, ನಾವು ರಸ್ತೆಗೆ ಇಳಿದ ಸಮುದಾಯದ ವಿರೋಧದ ಮುಂದೆ (‘ಸ್ಟ್ರೀಟ್ ವೀಟೋ’ ಮುಂದೆ) ಮಣಿಯುವ ದುರ್ಬಲ ರಾಷ್ಟ್ರವೆಂದು ನಾವು ಒಪ್ಪಿಕೊಳ್ಳಬೇಕು.
3. ರಾಷ್ಟ್ರಧ್ವಜದ ಅಶೋಕ ಚಕ್ರದ ಸ್ಥಳದಲ್ಲಿ ಇಸ್ಲಾಮಿಕ್ ಪ್ರತಿಜ್ಞೆ ಬರೆದಿದ್ದನ್ನು ನೆನಪಿಸಿಕೊಳ್ಳಿ!
2020 ರಲ್ಲಿ ತೆಲಂಗಾಣದಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜದ ಅಶೋಕ ಚಕ್ರದ ಸ್ಥಳದಲ್ಲಿ ‘ಶಹಾದಾ’ ಬರೆದಿರುವುದು ನಿಮಗೆ ನೆನಪಿದೆಯೇ? (ಶಹಾದಾ ಇಸ್ಲಾಮಿಕ್ ಪ್ರತಿಜ್ಞೆಯಾಗಿದ್ದು, ಅಲ್ಲಾನಲ್ಲಿ ಮಾತ್ರ ನಂಬಿಕೆ ಇಡಲು ಹೇಳಲಾಗಿದೆ.) ‘ನಾವು ಮೋದಿ ಮತ್ತು ಶಾ ಅವರನ್ನು ಗುಂಡಿಕ್ಕಿ ಕೊಲ್ಲುತ್ತೇವೆ’ ಎಂದು ಚಿಕ್ಕ ಮಕ್ಕಳು ಹೇಳಿದ್ದು ನೆನಪಿದೆಯೇ?
4. ಇಡೀ ಭಾರತೀಯ ಉಪಖಂಡವು ‘ಒಂದೇ ದೇಶ’ವಾಗಿ ವಕ್ಫ್‌ನ ಆಳ್ವಿಕೆಗೆ ಒಳಪಡುತ್ತದೆ!
ವಕ್ಫ್ ಕಾನೂನಿನ ಹೆಸರಿನಲ್ಲಿ ಮೊದಲು 1 ಸಾವಿರದ 500 ವರ್ಷಗಳ ಹಿಂದಿನ ದೇವಸ್ಥಾನ, ನಂತರ ಬಿಹಾರದ ಒಂದು ಇಡೀ ಗ್ರಾಮ, ನಂತರ ಭಾರತದ ಸಂಸತ್ತು, ನಂತರ ವಿಜಯಪುರದ (ಕರ್ನಾಟಕ) ಹಲವಾರು ಎಕರೆ ಭೂಮಿ, ಕಣ್ಣೂರಿನ ಭೂಮಿ, ಕೇರಳದ ಕ್ರೈಸ್ತರ 400 ಎಕರೆ ಭೂಮಿ, ನಂತರ ಮಹಾಕುಂಭಮೇಳದ ಪವಿತ್ರ ಭೂಮಿ, ಇವೆಲ್ಲವನ್ನೂ ವಕ್ಫ್ ಮಂಡಳಿ ತನ್ನದು ಎಂದು ಹೇಳಿಕೊಂಡಿದೆ. ಪೇಶಾವರದಿಂದ ಪ್ಲಾಸಿವರೆಗಿನ ಇಡೀ ಭಾರತೀಯ ಉಪಖಂಡವು ‘ಒಂದೇ ದೇಶ’ವಾಗಿ ವಕ್ಫ್‌ನ ಆಳ್ವಿಕೆಗೆ ಒಳಪಡುವ ದಿನ ದೂರವಿಲ್ಲ. ಇದೆಲ್ಲವೂ ತುಂಬಾ ವಿಚಿತ್ರವಾಗಿದೆ.
…ಆದರೆ 24 ಗಂಟೆಗಳಲ್ಲಿ ಇವರೆಲ್ಲರೂ (ಮುಸ್ಲಿಮರು) ದಾರಿಗೆ ಬರುತ್ತಾರೆ!ಈ ಸಂದರ್ಭದಲ್ಲಿ ಡಾ. ರಂಗನಾಥನ್ ಮಾತನಾಡಿ, ಜಗತ್ತಿನಾದ್ಯಂತ ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಧಾರ್ಮಿಕ ಸಮುದಾಯ-ನಿರಪೇಕ್ಷ ಕಾನೂನುಗಳ ಮೂಲಕ ಬಗೆಹರಿಸಲಾಗುತ್ತದೆ. ಹಾಗಾದರೆ ಭಾರತದಲ್ಲಿ ಒಂದು ಧಾರ್ಮಿಕ ಸಮುದಾಯವು ಇನ್ನೊಂದು ಧಾರ್ಮಿಕ ಸಮುದಾಯದ ಮೇಲೆ ಬೇರೆಯದೇ ಕಾನೂನಿನ ನೆಪದಲ್ಲಿ ಅನ್ಯಾಯ ಮತ್ತು ದೌರ್ಜನ್ಯ ಎಸಗುವುದು ಹೇಗೆ ಸರಿ? ಇದು ಅಪರಾಧವೇ ಸರಿ. ಹಿಂದೂಗಳಿಗೆ ವಕ್ಫ್ ಕಾನೂನಿನಂತಹ ಯಾವುದೇ ಕಾನೂನು ಇದೆಯೇ? ಅಂತಹ ಕಾನೂನನ್ನು ಮಾಡಿ. ವಕ್ಫ್ ಕಾನೂನು ‘ಹೇಗಿದೆಯೋ ಹಾಗೆಯೇ’ ಇರಬೇಕೆಂದು ಬಯಸುವವರು, ಹಿಂದೂಗಳು ದೇಶಾದ್ಯಂತ ಸಾವಿರಾರು ಮಸೀದಿಗಳು, ಮುಸ್ಲಿಂ ಗ್ರಾಮಗಳ ಮೇಲೆ ಹಕ್ಕು ಸಾಧಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಅಲ್ಲದೆ, ಈ ಭೂಮಿಗಳ ಮೇಲೆ ನ್ಯಾಯಾಲಯಗಳ ಮೂಲಕವಲ್ಲ, ವಕ್ಫ್‌ನಂತಹ ಹಿಂದೂ ಕಾನೂನಿನ ಮೂಲಕವೂ ನಿಯಂತ್ರಣ ಸಾಧಿಸುತ್ತಾರೆ. ಹೀಗಾದರೆ, ಇವರೆಲ್ಲರೂ (ಮುಸ್ಲಿಮರು) 24 ಗಂಟೆಗಳಲ್ಲಿ ದಾರಿಗೆ ಬರುತ್ತಾರೆ ಎಂಬುದನ್ನು ನೆನಪಿಡಿ. |