ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮೆ. ೧೯ ರಂದು ತೀರ್ಪು !

ಮಥುರೆ (ಉತ್ತರ ಪ್ರದೇಶ) – ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಮೊಕದ್ದಮೆಯ ಮೇಲೆ ಬರುವ ಮೆ ೧೯ ರಂದು ನ್ಯಾಯಾಲಯ ತೀರ್ಪು ನೀಡಲಿದೆ. ಕಟರಾ ಕೇಶವ ದೇವ ಮಂದಿರದ ದೇವತೆ ಶ್ರೀಕೃಷ್ಣ ವಿರಾಜಮಾನ ಮತ್ತು ಅನ್ಯ ೬ ಜನರು ರಂಜನಾ ಅಗ್ನಿಹೋತ್ರಿ ಇವರ ಮೂಲಕ ದಾಖಲಿಸಿರುವ ಮನವಿಯ ಮೇಲೆ ತೀರ್ಪು ನೀಡುವರು.

ಮನವಿ ದಾಖಲಿಸಿದವರ ಅಂಬೋಣ ಏನೆಂದರೆ, ಮೊಘಲ್ ಬಾದಶಹನ ಆದೇಶದ ನಂತರ ೧೬೬೯ – ೭೦ ರಲ್ಲಿ ಭಗವಾನ ಶ್ರೀಕೃಷ್ಣನ ಮಂದಿರ ನಾಶಗೊಳಿಸಿ ಅಲ್ಲಿಯ ೧೩ – ೩೭ ಎಕರೆ ಭೂಮಿಯಲ್ಲಿ ಶಾಹಿ ಈದಗಾಹ ಮಸೀದಿ ಕಟ್ಟಲಾಗಿದೆ. ಹಾಗಾಗಿ ಈ ಮಸೀದಿಯಲ್ಲಿ ಉತ್ಖನನ ಮಾಡುವ ಅನುಮತಿ ಕೇಳಲಾಗಿದೆ. ಏನಾದರೂ ಇಲ್ಲಿ ಉತ್ಖನನ ಕಾರ್ಯ ನಡೆದರೆ, ಆಗ ಅಲ್ಲಿ ಭಗವಾನ ಶ್ರೀಕೃಷ್ಣನು ಜನಿಸಿದ ಕಾರಾಗೃಹ ಸಿಗುವುದು ಎಂದು ಮನವಿಯಲ್ಲಿ ಹೇಳಲಾಗಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಬಾಕಿ

ಶ್ರೀಕೃಷ್ಣ ಜನ್ಮಭೂಮಿಯ ಸಂದರ್ಭದಲ್ಲಿ ಒಂದು ಮನವಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಈ ಮನವಿಯಲ್ಲಿ, ಹಿಂದೂಗಳ ಜೊತೆ ವಿಶ್ವಾಸಘಾತ ನಡೆಸಿ ಯಾವುದೇ ಒಪ್ಪಂದ ಇಲ್ಲದೆ ಶ್ರೀ ಕೃಷ್ಣ ಜನ್ಮಭೂಮಿಯನ್ನು ಮಸೀದಿಗೆ ನೀಡಲಾಯಿತು ಎಂದು ಆರೋಪಿಸಲಾಗಿತ್ತು. ಆದ್ದರಿಂದ ನ್ಯಾಯಾಲಯವು ಆಗಸ್ಟ್ ೧೨.೧೯೬೮ ರಂದು ಶಾಹಿ ಈದ್ಗಾ ಮಸೀದಿಗೆ ಯಾವುದೇ ಒಪ್ಪಂದ ಇಲ್ಲದೆ ಮಂದಿರದ ಜಾಗ ನೀಡಲಾಗಿದೆ ಎಂದು ಘೋಷಿಸಬೇಕು ಮತ್ತು ಈ ಜಾಗ ಹಿಂದೂಗಳಿಗೆ ಹಿಂತಿರುಗಿಸಬೇಕು.