ನವದೆಹಲಿ – ‘ಥೈರೋಕೇರ್’ ಸಂಸ್ಥೆಯ ಸಂಸ್ಥಾಪಕರು ಮತ್ತು ಸುಮಾರು 5 ಸಾವಿರ ಕೋಟಿ ರೂಪಾಯಿಗಳ ಆಸ್ತಿಯ ಮಾಲೀಕರಾದ ಡಾ. ಎ. ವೇಲುಮಣಿ ಅವರು ಎರಡು ರೀತಿಯ ಜನರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಅಡುಗೆ ಕಲಿಯುವವರು ಮತ್ತು ಇನ್ನೊಬ್ಬರು ಅಡುಗೆ ಮಾಡುವುದೆಂದರೆ ಸಮಯ ವ್ಯರ್ಥ ಎಂದು ಪರಿಗಣಿಸುವವರು! ಡಾ. ವೇಲುಮಣಿ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಮೊದಲ ವರ್ಗದ ಜನರು ಅಡುಗೆ ಕಲಿಯುತ್ತಾರೆ. ಅವರು ಬಲವಾದ ಸಂಬಂಧಗಳು ಮತ್ತು ಸಂತೋಷದ ವೈವಾಹಿಕ ಜೀವನವನ್ನು ಆನಂದಿಸುತ್ತಾರೆ. ಎರಡನೇ ವರ್ಗದ ಜನರು ಶ್ರೀಮಂತ ಕುಟುಂಬದ ಹುಡುಗಿಯನ್ನು ಹೆಂಡತಿಯಾಗಿ ಪಡೆದರೂ, ಅವರು ಸಂಬಂಧವನ್ನು ಉಳಿಸಿಕೊಳ್ಳಲು ಅನೇಕ ಬಾರಿ ಕಷ್ಟ ಪಡಬೇಕಾಗುತ್ತದೆ. ಈ ರೀತಿಯ ಪರಿಸ್ಥಿತಿ ವಾರ್ಷಿಕ ಆದಾಯ 5 ರಿಂದ 25 ಲಕ್ಷ ರೂಪಾಯಿಗಳಿರುವ ಕುಟುಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಡಾ. ವೇಲುಮಣಿ ಅವರು ಮಾತು ಮುಂದುವರೆಸಿ,
1. ಅಡುಗೆ ಕಲೆಯು ಜೀವನದ ಅಗತ್ಯವಾದ ಕೌಶಲ್ಯವಾಗಿದೆ. ತಮ್ಮ ಮಕ್ಕಳಿಗೆ ‘ಅಡುಗೆ ಮಾಡುವುದು ಹೇಗೆಂದು ಕಲಿಸದ ಪೋಷಕರು ನಂತರ ಪಶ್ಚಾತ್ತಾಪ ಪಡಬಹುದು. ಭಾವನಾತ್ಮಕ ಸಂಬಂಧಗಳನ್ನು ನಿರ್ಮಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.
2. ನನ್ನ ದಿವಂಗತ ಪತ್ನಿ ಸುಮತಿ ವೇಲುಮಣಿ ಅವರು ಎರಡು ದೊಡ್ಡ ಕುಟುಂಬಗಳನ್ನು ಪೋಷಿಸಿದಳು. ಒಂದು ನನ್ನ ಕುಟುಂಬ ಮತ್ತು ಇನ್ನೊಂದು ಅವಳ ಕುಟುಂಬವನ್ನು. ನನ್ನ ಪತ್ನಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿ ಕೆಲಸ ಮಾಡುತ್ತಿದ್ದರೂ ಅಡುಗೆ ಮಾಡುತ್ತಿದ್ದರು.
3. ಅದೃಷ್ಟವಶಾತ್ ನಾವು ಒಟ್ಟಿಗೆ ಪಾತ್ರೆ ತೊಳೆಯುತ್ತಿದ್ದೆವು. (ಈ ಪೋಸ್ಟನೊಂದಿಗೆ ಡಾ. ವೇಲುಮಣಿ ಅವರು ಪಾತ್ರೆ ತೊಳೆಯುತ್ತಿರುವ ಚಿತ್ರವನ್ನು ಸಹ ಪ್ರಸಾರ ಮಾಡಿದ್ದಾರೆ.)