‘ಶುಕ್ರವಾರದ ನಮಾಜ್ ಸಮಯ ಬದಲಾಯಿಸಲು ಸಾಧ್ಯವಿಲ್ಲ; 2 ಗಂಟೆಗಳ ಕಾಲ ಹೋಳಿ ನಿಲ್ಲಿಸಿ!’ – ಮೇಯರ್ ಅಂಜುಮ್ ಆರಾ

ದರ್ಭಾಂಗಾ (ಬಿಹಾರ) ನಗರದ ಮೇಯರ್ ಅಂಜುಮ್ ಆರಾ ಅವರ ಕರೆ!

(ಗಂಗಾ-ಜಮುನಿ ತಹಜೀಬ್ ಎಂದರೆ ಗಂಗಾ ಮತ್ತು ಯಮುನಾ ನದಿಗಳ ದಡದಲ್ಲಿ ವಾಸಿಸುವ ಹಿಂದೂ ಮತ್ತು ಮುಸ್ಲಿಮರ ನಡುವಿನ ಐಕ್ಯತೆಯನ್ನು ಸೂಚಿಸುವ ಸಂಸ್ಕೃತಿ.)

ದರ್ಭಾಂಗ (ಬಿಹಾರ) – ಈ ವರ್ಷ ಹೋಳಿಯ ಮರುದಿನವಾದ ಧುಳಿವಂದನ ಶುಕ್ರವಾರ, ಮಾರ್ಚ್ 14 ರಂದು ಇದೆ. ಪ್ರಸ್ತುತ ಮುಸ್ಲಿಮರ ರಂಜಾನ್ ತಿಂಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಧುಳಿವಂದನ ಆಚರಣೆಯ ಬಗ್ಗೆ ಉದ್ವಿಗ್ನತೆ ಸೃಷ್ಟಿಯಾಗಿದೆ. ದರ್ಭಾಂಗಾದ ಮೇಯರ್ ಅಂಜುಮ್ ಆರಾ ಅವರು ಜಿಲ್ಲಾಡಳಿತದ ಮೂಲಕ ಶಾಂತಿ ಸಮಿತಿ ಸಭೆ ನಡೆಸಿ ನಂತರ ಹೇಳಿಕೆ ನೀಡಿದ್ದಾರೆ. ಮೇಯರ್ ಆರಾ ಅವರು ನಿವಾಸಿಗಳಿಗೆ ಕರೆ ನೀಡುತ್ತಾ, ಮಧ್ಯಾಹ್ನ 12:30 ರಿಂದ 2:00 ರವರೆಗೆ ಹೋಳಿಯನ್ನು ನಿಲ್ಲಿಸಬೇಕು; ಏಕೆಂದರೆ ಶುಕ್ರವಾರದ ನಮಾಜ್ ಸಮಯವನ್ನು ಮುಂದೂಡಲು ಸಾಧ್ಯವಿಲ್ಲ. ಆದ್ದರಿಂದ ಹೋಳಿಗೆ 2 ಗಂಟೆಗಳ ವಿರಾಮ ನೀಡಬೇಕು. ಹಾಗೆಯೇ ಹೋಳಿ ಆಡುವ ಜನರು 2 ಗಂಟೆಗಳ ಕಾಲ ಮಸೀದಿ ಮತ್ತು ಪ್ರಾರ್ಥನಾ ಸ್ಥಳಗಳಿಂದ ದೂರವಿರಬೇಕು. ಹೋಳಿ ಮತ್ತು ರಂಜಾನ್ ತಿಂಗಳು ಈ ಹಿಂದೆ ಹಲವು ಬಾರಿ ಒಟ್ಟಿಗೆ ಆಚರಿಸಲ್ಪಟ್ಟಿವೆ.

ಮೇಯರ್ ಅಂಜುಮ್ ಆರಾ ಅವರು ‘ಗಜ್ವಾ-ಎ-ಹಿಂದ್’ (ಕಾಫಿರರನ್ನು ಕೊಲ್ಲಲು ಯುದ್ಧ) ಮತ್ತು ಭಯೋತ್ಪಾದಕ ಮನಸ್ಥಿತಿಯವರು! – ಭಾಜಪ ಶಾಸಕ ಹರಿಭೂಷಣ ಠಾಕೂರ್ ಬಚೌಲ್

ಬಿಹಾರದ ಭಾಜಪ ಶಾಸಕ ಹರಿಭೂಷಣ ಠಾಕೂರ್ ಬಚೌಲ್ ಅವರು ಮೇಯರ್ ಅಂಜುಮ್ ಆರಾ ಅವರ ಕರೆಗೆ ಪ್ರತಿಕ್ರಿಯಿಸುತ್ತಾ, ದರ್ಭಾಂಗಾದ ಮೇಯರ್ ‘ಗಜ್ವಾ-ಎ-ಹಿಂದ್’ ಮತ್ತು ಭಯೋತ್ಪಾದಕ ಮನಸ್ಥಿತಿಯ ಮಹಿಳೆ ಎಂದು ಹೇಳಿದ್ದಾರೆ. ಅವರು ಯಾವ ಕುಟುಂಬದಿಂದ ಬಂದಿದ್ದಾರೋ ಆ ಕುಟುಂಬದ ಇತಿಹಾಸವು ಬಹಳ ಹಳೆಯದು. ಹೋಳಿಯನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಇಷ್ಟವಿಲ್ಲದವರು ಅದನ್ನು ತಪ್ಪಿಸಬೇಕು. ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಜನರು ಎಲ್ಲಿದ್ದಾರೆ? ಅವರು ಏಕೆ ಮೌನವಾಗಿದ್ದಾರೆ? ಅವರು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಮತ್ತು ಆ ಬೆಂಕಿ ಹತ್ತಿಕೊಳ್ಳುವುದಿಲ್ಲ. ಅಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೋಳಿ ಒಂದು ನಿಮಿಷವೂ ನಿಲ್ಲುವುದಿಲ್ಲ. ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು, ಎಂದು ಹೇಳಿದರು.

ಏಕತೆ ಮತ್ತು ಸೌಹಾರ್ದತೆಯ ಜವಾಬ್ದಾರಿಯನ್ನು ಹಿಂದೂಗಳು ಮಾತ್ರ ಏಕೆ ತೆಗೆದುಕೊಳ್ಳಬೇಕು? – ಭಾಜಪ

ಬಿಹಾರದ ಭಾಜಪದ ವಕ್ತಾರ ಕುಂತಲ್ ಕೃಷ್ಣ ಅವರು ಮಾತನಾಡಿ, ಹೋಳಿ ಹಿಂದೂಗಳ ದೊಡ್ಡ ಹಬ್ಬವಾಗಿದ್ದು, ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಏಕತೆ ಮತ್ತು ಸೌಹಾರ್ದತೆಯ ಜವಾಬ್ದಾರಿಯನ್ನು ಹಿಂದೂಗಳು ಮಾತ್ರ ಏಕೆ ಪದೇ ಪದೇ ತೆಗೆದುಕೊಳ್ಳಬೇಕು? ಮುಸ್ಲಿಮರೂ ಸಹ ಆ ಜವಾಬ್ದಾರಿ ಇದೆ. ಅವರು ಈ ಸಂದರ್ಭದಲ್ಲಿ ನೇತೃತ್ವ ವಹಿಸಬೇಕು ಮತ್ತು ಏಕತೆ ಮತ್ತು ಸೌಹಾರ್ದತೆಗೆ ಉದಾಹರಣೆಯಾಗಬೇಕು, ಎಂದು ಹೇಳಿದೆ.

ಮೇಯರ್ ಅವರ ಹೇಳಿಕೆ ಪ್ರಚೋದನಕಾರಿಯಾಗಿದೆ! – ಸಚಿವ ನಿತೀನ್ ನವೀನ್

ರಾಜ್ಯದ ಸಚಿವ ನಿತೀನ್ ನವೀನ್ ಅವರು ಮೇಯರ್ ಅವರ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಸರಕಾರವು ಇದನ್ನು ಗಮನಿಸಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ. ಮುಸ್ಲಿಂ ಸಹೋದರರು ನಮಾಜ್ ಮಾಡಲು ಹೊರಗೆ ಹೋದರೆ ಯಾರು ಆಕ್ಷೇಪಿಸುತ್ತಾರೆ? ಅವರ ಮೇಲೆ ಯಾರೂ ನಿರ್ಬಂಧ ಹೇರಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹೋಳಿ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ, ಆದರೆ ಶುಕ್ರವಾರದ ನಮಾಜ್ ವರ್ಷಕ್ಕೆ 52 ಬಾರಿ ಬರುತ್ತದೆ. ಆದರೂ ಇಂತಹ ಮನಸ್ಥಿತಿಯನ್ನು ತೋರಿಸುವವರು ಹಿಂದೂಗಳಿಂದ ‘ಗಂಗಾ-ಜಮುನಿ ತಹಜೀಬ್’ ಅನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ನೆನಪಿಡಿ!
  • ನಾಳೆ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದರೆ, ಹಿಂದೂಗಳು ಹೋಳಿಯ ಬದಲು ನಮಾಜ್ ಮಾಡಬೇಕಾಗುತ್ತದೆ ಎಂಬುದನ್ನು ಅವರು ಯಾವಾಗಲೂ ನೆನಪಿನಲ್ಲಿಡಬೇಕು!