ಜಯಪುರ (ರಾಜಸ್ಥಾನ) – ಇಲ್ಲಿನ ಪ್ರತಾಪನಗರದಲ್ಲಿರುವ ಮಹಿಳಾ ಪಾಲಿಟೆಕ್ನಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಮಾಜಿ ಅಧ್ಯಾಪಕರಾದ ಸೈಯದ ಮಶಕೂರ ಅಲಿಯವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ವಿದ್ಯಾರ್ಥಿನಿಯರು ಮಾತನಾಡಿ, ಮಾಜಿ ಅಧ್ಯಾಪಕರು ವಿದ್ಯಾರ್ಥಿನಿಯರನ್ನು ತಮ್ಮೊಂದಿಗೆ ಮಲಗಲು ಒತ್ತಾಯಿಸುತ್ತಿದ್ದರು, ಎಂದು ಹೇಳಿದ್ದಾರೆ. ಅವರು ಹುಡುಗಿಯರನ್ನು ಪೂರೈಸುವ ಕೆಲಸವನ್ನೂ ಮಾಡುತ್ತಾರೆ ಎಂದು ಹೇಳಿದರು. ಹುಡುಗಿಯರು ಆತನ ಮಾತನ್ನು ಕೇಳದಿದ್ದರೆ ಕಾಲೇಜಿನಿಂದ ತೆಗೆದುಹಾಕುವುದಾಗಿ ಬೆದರಿಸುತ್ತಿದ್ದನು.
1. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮತ್ತು ಕಾಲೇಜಿನ ಸಿಬ್ಬಂದಿಗಳು ಫೆಬ್ರವರಿ 3 ರಂದು ತಾಂತ್ರಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು. ಆನಂತರ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಮಶಕೂರ ಅವರನ್ನು ಅಮಾನತುಗೊಳಿಸಲಾಯಿತು. ಆದಾಗ್ಯೂ ಮಶಕೂರರವರು ತಾನು ನಿರ್ದೋಷಿ ಎಂದು ಪ್ರತಿಪಾದಿಸಿದರು. ಆನಂತರ ಮಾರ್ಚ್ 10 ರಂದು ತನಿಖಾ ಸಮಿತಿ ಮತ್ತೊಮ್ಮೆ ಕಾಲೇಜಿಗೆ ತನಿಖೆಗಾಗಿ ಬಂದಿತು. ವಿದ್ಯಾರ್ಥಿನಿಯರು ಅದನ್ನು ವಿರೋಧಿಸಿದರು. ಮಶಕೂರ ಅಲಿಯನ್ನು ರಕ್ಷಿಸಲು ಮರುತನಿಖೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
2. ಮಾಜಿ ಅಧ್ಯಾಪಕರಾದ ಸೈಯದ ಮಶಕೂರ ಅಲಿಯವರು 2023 ರಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಅಂದಿನಿಂದ ಅವರು ವಿದ್ಯಾರ್ಥಿನಿಯರೊಂದಿಗೆ ಅಯೋಗ್ಯವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
3. ಮಶಕೂರರವರು ತಮ್ಮನ್ನು ವಿದ್ಯಾರ್ಥಿನಿಯರ ವೈಯಕ್ತಿಕ ವಾಟ್ಸಾಪ್ ಗುಂಪುಗಳಲ್ಲಿ ಸೇರಿದ್ದಾನೆ. ಅವರು ಹುಡುಗಿಯರಿಗೆ ಅಶ್ಲೀಲ ಸಂದೇಶಗಳನ್ನೂ ಕಳುಹಿಸುತ್ತಿದ್ದರು. ಅವರು ಸುಳ್ಳು ಕಾರಣಗಳನ್ನು ಹೇಳಿ ವಿದ್ಯಾರ್ಥಿನಿಯರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಚಲಿಸುತ್ತಿರುವ ಕಾರಿನಲ್ಲಿ ಅವರೊಂದಿಗೆ ಅಯೋಗ್ಯವಾಗಿ ವರ್ತಿಸುತ್ತಿದ್ದರು.
4. ಯಾರಾದರೂ ಪೊಲೀಸರಿಗೆ ಅಥವಾ ಅವರ ಸಂಬಂಧಿಕರಿಗೆ ದೂರು ನೀಡಿದರೆ, ಅವರ ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಮಶಕೂರ ಅಲಿ ಬೆದರಿಕೆ ಹಾಕುತ್ತಿದ್ದನು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
5. ಈ ಭಯದಿಂದ ಯಾರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ. ವಿದ್ಯಾರ್ಥಿನಿಯರು ಮತ್ತು ಮಹಾವಿದ್ಯಾಲಯದ ಸಿಬ್ಬಂದಿಗಳು ಮಶಕೂರ ಅಲಿಯವರ ವಿರುದ್ಧ ಮಹಿಳಾ ಆಯೋಗ, ಮುಖ್ಯಮಂತ್ರಿಗಳು ಮತ್ತು ರಾಜಸ್ಥಾನ ಸಂಪರ್ಕ ಪೋರ್ಟಲ್ನಲ್ಲಿ ದೂರು ನೀಡಿದ್ದರು.
ಸಂಪಾದಕೀಯ ನಿಲುವು
|