Former ASI Director Statement : ಎಲ್ಲಾ ಮಸೀದಿಯಲ್ಲಿ ದೇವಸ್ಥಾನ ಹುಡುಕಿದರೆ, ಗೃಹಯುದ್ಧ ನಿಶ್ಚಿತ! – ಕೆ.ಕೆ. ಮಹಮ್ಮದ್

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಕೆ.ಕೆ. ಮಹಮ್ಮದ್ ಅವರ ಹೇಳಿಕೆ

ಉಜ್ಜಯಿನಿ (ಮಧ್ಯಪ್ರದೇಶ) – ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಕೆ.ಕೆ. ಮಹಮ್ಮದ ಇವರು ಸಂಭಲ್‌ನಲ್ಲಿನ ಉತ್ಖನನಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಅವರು ಮಾತನಾಡಿ, ಒಂದು ವೇಳೆ ನೀವು ಪ್ರತಿ ಮಸೀದಿಯಲ್ಲೂ ದೇವಸ್ಥಾನವನ್ನು ಹುಡುಕಲು ಪ್ರಯತ್ನಿಸಿದರೆ, ಗೃಹಯುದ್ಧ ಭುಗಿಲೆದ್ದೀತು ಮತ್ತು ಭಾರತದ ಪರಿಸ್ಥಿತಿ ಅಫ್ಘಾನಿಸ್ತಾನ ಮತ್ತು ಇಸ್ರೇಲ್‌ನಂತೆ ಆಗಬಹುದು ಎಂದು ಹೇಳಿದರು. ಇದು ದೇಶಕ್ಕೆ ಸರಿಯಾಗುವುದಿಲ್ಲ. ಮಹಮ್ಮದ ಇವರು ಉಜ್ಜಯಿನಿಯಲ್ಲಿ ನಡೆಯುತ್ತಿರುವ ‘ವಿಕ್ರಮ ಉತ್ಸವ’ದಲ್ಲಿ ಭಾಗವಹಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

1. ಕೆ.ಕೆ. ಮಹಮ್ಮದ ಮಾತನಾಡಿ, ದಾಖಲೆಗಳನ್ನು ನೋಡಿದಾಗ, ದೇವಸ್ಥಾನಗಳ ಮೇಲೆ ಅನೇಕ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ದಾಖಲೆಗಳು ಹಲವು ಬಾರಿ ಸಿಕ್ಕಿವೆ; ಆದರೆ ಇದರರ್ಥ ಪ್ರತಿ ಮಸೀದಿಯಲ್ಲೂ ದೇವಸ್ಥಾನವನ್ನು ಹುಡುಕಬೇಕು ಎಂದಲ್ಲ. ಹೀಗೆ ಮಾಡಿದರೆ, ಅದರಿಂದ ಸಂಘರ್ಷ ಮತ್ತು ಅಶಾಂತಿಯನ್ನು ಹೊರತುಪಡಿಸಿ ಬೇರೇನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ; ಆದ್ದರಿಂದ, ಒಟ್ಟಿಗೆ ಕುಳಿತು ಈ ವಿವಾದವನ್ನು ಪರಿಹರಿಸುವುದು ಮುಖ್ಯವಾಗಿದೆ.

2. ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮಹಮ್ಮದ ಇವರು ಕಾಶಿ-ಮಥುರಾದಲ್ಲಿ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಮುಸ್ಲಿಮರು ದೊಡ್ಡ ಹೃದಯವನ್ನು ತೋರಿಸಬೇಕು ಮತ್ತು ಕಾಶಿ-ಮಥುರಾವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು, ಎಂದು ಹೇಳಿದ್ದರು.

3. ಉತ್ತರ ಪ್ರದೇಶದ ಸಂಭಲನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು. ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಇದಾದ ನಂತರ, ಇಲ್ಲಿ ಸಮೀಕ್ಷೆ ಮತ್ತು ಉತ್ಖನನ ಪ್ರಕ್ರಿಯೆಯು ಪ್ರಾರಂಭವಾಯಿತು. ಅದಾದ ನಂತರ, ಅಲ್ಲಿ ಅನೇಕ ದೇವಾಲಯಗಳು ಮತ್ತು ಬಾವಿಗಳ ಬಗ್ಗೆ ಮಾಹಿತಿ ಸಿಕ್ಕಿತು. ಇಲ್ಲಿ ಹಲವಾರು ತಿಂಗಳುಗಳ ಕಾಲ ಉತ್ಖನನ ನಡೆಯುತ್ತಿತ್ತು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಗೃಹಯುದ್ಧ ಯಾರಿಂದ ಉಂಟಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ಮಾಡುತ್ತಿರುವುದರಿಂದಲೇ ದೇಶದಲ್ಲಿ ಅಶಾಂತಿ ಹಬ್ಬಿ ಅನೇಕ ‘ಶಾಹೀನ್ ಬಾಗ್’ಗಳ ಬೆದರಿಕೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ, ಕೆ.ಕೆ. ಮಹಮ್ಮದ ಇವರು ಗೃಹರ್ಯುದ್ಧದ ಸಾಧ್ಯತೆಯ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆಂದು ಗಮನಿಸಬೇಕು!