|
ಅಜಮೇರ (ರಾಜಸ್ಥಾನ) – ನಗರದ ಸೋಫಿಯಾ ಹಿರಿಯ ಮಾಧ್ಯಮಿಕ ಶಾಲೆಯು ವಿದ್ಯಾರ್ಥಿಗಳಿಗೆ ಹೋಳಿ ಆಚರಿಸುವುದನ್ನು ಮತ್ತು ಬಣ್ಣ ಹಚ್ಚುವುದನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿತ್ತು. ‘ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ವಿದ್ಯಾರ್ಥಿ ಬಣ್ಣದೊಂದಿಗೆ ಕಂಡುಬಂದರೆ, ಅವರನ್ನು ಪರೀಕ್ಷೆಗೆ ಕೂರಿಸಬಾರದು’ ಎಂದು ಶಾಲೆಯು ಆದೇಶಿಸಿತ್ತು.
ಈ ಬಗ್ಗೆ ರಾಜ್ಯದ ಭಾಜಪ ಸರಕಾರದ ಶಿಕ್ಷಣ ಸಚಿವ ಮದನ ದಿಲಾವರ್ ಅವರು, ‘ಹೋಳಿ ನಮ್ಮ ಸಾಂಸ್ಕೃತಿಕ ಗುರುತಿನ ಭಾಗವಾಗಿದೆ. ಅದರ ಮೇಲೆ ನಿಷೇಧ ಹೇರುವುದು ತಪ್ಪು. ಶಾಲೆಯ ಈ ನಿರ್ಧಾರದ ವಿರುದ್ಧ ನಾವು ಸಿ.ಬಿ.ಎಸ್.ಇ.ಗೆ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ದೂರು ನೀಡುತ್ತೇವೆ’ ಎಂದು ಹೇಳಿದ ನಂತರ ಶಾಲೆಯು ತನ್ನ ನಿರ್ಣಯವನ್ನು ಹಿಂಪಡೆಯಿತು.
ಭಾಜಪ ಶಾಸಕ ಸ್ವಾಮಿ ಬಾಲಮುಕುಂದ ಆಚಾರ್ಯ ಅವರು, ಸನಾತನದ ಹಬ್ಬಗಳ ಮೇಲೆ ಈ ರೀತಿ ನಿಷೇಧ ಹೇರುವುದು ಸರಿಯಲ್ಲ. ಶಾಲಾ ಆಡಳಿತ ಮಂಡಳಿಗೆ ಯಾವುದೇ ಅಧಿಕಾರವಿಲ್ಲ. ಹೋಳಿ ಆಡುವುದು ಮಕ್ಕಳ ಹಕ್ಕು ಮತ್ತು ಅವರು ಹೋಳಿ ಆಚರಿಸಬೇಕು ಎಂದಿದ್ದರು.
ಹಿಂದೂಗಳ ವಿರೋಧದ ನಂತರ ಶಾಲೆಯ ಸ್ಪಷ್ಟೀಕರಣಹಿಂದೂಗಳ ವಿರೋಧದ ನಂತರ ಸೋಫಿಯಾ ಶಾಲೆಯ ಪ್ರಾಂಶುಪಾಲರಾದ ಸಿಂಥಿಯಾ ಅವರು ಸ್ಪಷ್ಟೀಕರಣ ನೀಡುತ್ತಾ, ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಹೋಳಿ ಆಚರಿಸಲಾಗುವುದು. ಹೋಳಿ ಆಡಲು ಕೆಲವೊಮ್ಮೆ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ; ಆದರೆ ಶಾಲೆಯಲ್ಲಿ ಹೂವಿನ ಹೋಳಿಯನ್ನು ಆಯೋಜಿಸಲಾಗುವುದು. ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಲಾಗುವುದು ಎಂದು ಹೇಳಿದರು. (ಮೊದಲೇ ಈ ಉಪಾಯ ಹೊಳೆಯಲಿಲ್ಲ ಏಕೆ? – ಸಂಪಾದಕರು |
ಸಂಪದಕೀಯ ನಿಲುವುಶಿಕ್ಷಣ ಸಚಿವರು ಒಂದು ವೇಳೆ ವಿರೋಧಿಸದಿದ್ದರೆ ಈ ಮಿಷನರಿ ಶಾಲೆಯು ಹೋಳಿ ಆಟದ ನಿಷೇಧವನ್ನು ಕಾಯಂಗೊಳಿಸುತ್ತಿತ್ತು, ಇದನ್ನು ಗಮನದಲ್ಲಿರಿಸಿ ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಹಾಗೆಯೇ ಮತ್ತೆ ಯಾವ ಸಂಸ್ಥೆಯು ಕೂಡ ಇಂತಹ ವಿರೋಧ ಮಾಡಬಾರದೆಂದು ನಿಯಮಗಳನ್ನು ರೂಪಿಸಬೇಕು! |