ಭಾಜಪದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಂದ ಎಚ್ಚರಿಕೆ
ಮೈಸೂರು – ಮೈಸೂರಿನಲ್ಲಿ ಮಾರ್ಚ್ 2016 ರಲ್ಲಿ ಭಾಜಪ ಕಾರ್ಯಕರ್ತ ರಾಜು ಹತ್ಯೆಯಾದ ನಂತರ ಅಲ್ಲಿನ ಮಸೀದಿಯನ್ನು ಮುಚ್ಚಲಾಗಿತ್ತು. ಈಗ ಆ ಮಸೀದಿಯನ್ನು ಅಷ್ಟು ಸುಲಭವಾಗಿ ತೆರೆಯಲು ನಾನು ಬಿಡುವುದಿಲ್ಲ ಎಂದು ಭಾಜಪ ನಾಯಕ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ದೃಢನಿರ್ಧಾರವನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ.
ಪ್ರತಾಪ ಸಿಂಗ ಮಾತು ಮುಂದುವರೆಸಿ,
1. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುವುದಕ್ಕಿಂತ ಮೊದಲು, ಗಲಭೆಯಲ್ಲಿ ಭಾಗಿಯಾಗಿದ್ದ 1 ಸಾವಿರ 600 ಮತಾಂಧ ಮುಸ್ಲಿಂ ಗೂಂಡಾಗಳ ವಿರುದ್ಧ ದಾಖಲಾಗಿದ್ದ 175 ಪ್ರಕರಣಗಳ ತನಿಖೆಯನ್ನು ಅವರು ಮುಖ್ಯಮಂತ್ರಿಯಾದ ನಂತರ ಹಠಾತ್ತನೆ ಸ್ಥಗಿತಗೊಳಿಸಿದ್ದರು. ಈ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರು ತಾಲಿಬಾನ್ ರೀತಿಯ ಸರಕಾರವನ್ನು ನಡೆಸುತ್ತಿದ್ದಾರೆ.
2. ಕೊಡಗಿನಲ್ಲಿ ಕುಟ್ಟಪ್ಪನ ಕೊಲೆ (ನವೆಂಬರ್ 2015), ಮೈಸೂರಿನಲ್ಲಿ ರಾಜುವಿನ ಕೊಲೆ (ಮಾರ್ಚ್ 2016), ಬೆಂಗಳೂರಿನಲ್ಲಿ ರುದ್ರೇಶ ಕೊಲೆ (ಅಕ್ಟೋಬರ್ 2016) ಮುಂತಾದ ಹಿಂದುತ್ವನಿಷ್ಠರ ಹತ್ಯೆಯ ಘಟನೆಗಳು ನಡೆದಿವೆ. ರಾಜಾ ಹತ್ಯೆಯ ನಂತರ ಮೈಸೂರಿನ ವಿವಾದಾತ್ಮಕ ಮಸೀದಿಯನ್ನು ಮುಚ್ಚಲಾಗಿತ್ತು. ಈಗ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದ ನಂತರ, ಮುಚ್ಚಿದ ಮಸೀದಿಯನ್ನು ತೆರೆಯಲು ಪ್ರಯತ್ನಗಳು ನಡೆಯುತ್ತಿವೆ.
3. ಈ ಪ್ರಕರಣದ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ವಸತಿ ಸ್ಥಳದಲ್ಲಿ ಮಸೀದಿ ನಿರ್ಮಿಸುವುದು ತಪ್ಪು ಎಂದು ಹೇಳಿದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಟೀಕಿಸಿದರು. “ನೀವು ಮುಸ್ಲಿಮರ ಅಭಿಪ್ರಾಯಗಳನ್ನು ಮಾತ್ರ ಪರಿಗಣಿಸಲು ಬಯಸುತ್ತೀರಾ?” “ನಿಮಗೆ ಇತರರ ಅಭಿಪ್ರಾಯಗಳು ಬೇಡವೇ?” ಎಂದು ಪ್ರತಾಪ್ ಸಿಂಹ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದ್ದಾರೆ.