ವಾಷಿಂಗ್ಟನ್ – ಅಮೇರಿಕಾದಲ್ಲಿ ಮುಸ್ಲಿಮರ ಜನಸಂಖ್ಯೆ ದ್ವಿಗುಣಗೊಂಡಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ನ ಸಮೀಕ್ಷೆಯು ಬಹಿರಂಗಪಡಿಸಿದೆ. ಈ ಸಮೀಕ್ಷೆಯನ್ನು “ರಿಲಿಜಿಯಸ್ ಲ್ಯಾಂಡ್ಸ್ಕೇಪ್ ಸ್ಟಡಿ” ಮೂಲಕ ನಡೆಸಲಾಗಿದೆ. ಈ ಸಮೀಕ್ಷೆಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಅಮೇರಿಕಾದಲ್ಲಿ ಧಾರ್ಮಿಕ ನಂಬಿಕೆಯಲ್ಲಿ ಇಳಿಕೆಯಾಗಿತ್ತು; ಆದರೆ 2020 ರಿಂದ ಅದು ಸ್ಥಿರವಾಗಿದೆ.
1. 2007 ರಲ್ಲಿ ಅಮೇರಿಕಾದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 0.4 ರಷ್ಟು ಇತ್ತು, ಅದು 2014 ರಲ್ಲಿ ಶೇ.0.9 ರಷ್ಟು ಏರಿತು; ಆದರೆ 2023-24 ರಲ್ಲಿ ಜನಸಂಖ್ಯೆ ಶೇ. 1.2 ರಷ್ಟು ಆಗಿದೆ. ಇದರರ್ಥ ಕಳೆದ 16-17 ವರ್ಷಗಳಲ್ಲಿ ಅಮೇರಿಕಾದಲ್ಲಿ ಮುಸ್ಲಿಮರ ಜನಸಂಖ್ಯೆ ದ್ವಿಗುಣಗೊಂಡಿದೆ.
೨. ಅಮೇರಿಕಾದಲ್ಲಿ ಯಾವುದೇ ಧರ್ಮದಲ್ಲಿ ನಂಬಿಕೆ ಇಡದ ಜನರ ಸಂಖ್ಯೆ ಗಮನಾರ್ಹವಾಗಿದೆ. ಅಂತಹ ಜನರನ್ನು “ನನ್ಸ್” ಎಂದು ಕರೆಯುತ್ತಾರೆ. ನನ್ಸ್ ಎಂದರೆ ನಾಸ್ತಿಕರು. ಅಮೇರಿಕಾದ ಜನಸಂಖ್ಯೆಯ ಶೇ. 29 ರಷ್ಟು ಜನರು ಈ ನಾಸ್ತಿಕರ ವರ್ಗಕ್ಕೆ ಸೇರುತ್ತಾರೆ.
3. ಪ್ರಸ್ತುತ ಜಗತ್ತಿನ ಜನಸಂಖ್ಯೆ ಸುಮಾರು 800 ಕೋಟಿಯಾಗಿದೆ. ಅದರಲ್ಲಿ 200 ಕೋಟಿ ಜನರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳಾಗಿದ್ದರೆ ಇದರಲ್ಲಿಯೂ ಮುಸ್ಲಿಮರ ಜನಸಂಖ್ಯೆ ಸುಮಾರು 150 ಕೋಟಿ ಎಂದು ಹೇಳಲಾಗುತ್ತದೆ.