Love Jihad Case : ಗುಫ್ರಾನ್ ‘ಜಯಪ್ರಕಾಶ್’ ಹೆಸರಿಟ್ಟುಕೋಂಡು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸೆಳೆದ!

  • ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಮತ್ತೊಂದು ಪ್ರಕರಣ

  • ದೈಹಿಕ ಸಂಬಂಧ ಬೆಳೆಸಿ ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಡ!

ಬಲಿಯಾ (ಉತ್ತರ ಪ್ರದೇಶ) – ಜಿಲ್ಲೆಯ ಉಭಾಂವ್ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಗುಫ್ರಾನ್ ಅಹ್ಮದ್ ಹೆಸರಿನ ಮುಸ್ಲಿಂ ಯುವಕ ‘ಜಯಪ್ರಕಾಶ್’ ಎಂಬ ಹಿಂದೂ ಹೆಸರನ್ನು ಬಳಸಿ 22 ವರ್ಷದ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದನು. ತದನಂತರ ಗುಫ್ರಾನ್ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಅದರ ವಿಡಿಯೋಗಳನ್ನು ಮಾಡಿದನು. ವಿಡಿಯೋಗಳನ್ನು ಪ್ರಸಾರ ಮಾಡುವ ಬೆದರಿಕೆಯೊಡ್ಡಿ ಆಕೆಯನ್ನು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸತೊಡಗಿದನು. ಈ ಪ್ರಕರಣದಲ್ಲಿ ಪೊಲೀಸರು 3 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಮುಖ್ಯ ಆರೋಪಿ ಗುಫ್ರಾನ್ ಅಹ್ಮದ್‌ಅನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ಹುಡುಗಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ, ಗುಫ್ರಾನ್ ಅಹ್ಮದ್ ಸಾಮಾಜಿಕ ಮಾಧ್ಯಮದಲ್ಲಿ ‘ಜಯಪ್ರಕಾಶ್’ ಎಂಬ ನಕಲಿ ಹೆಸರನ್ನು ಬಳಸಿ ತನ್ನನ್ನು ಸಂಪರ್ಕಿಸಿದನೆಂದು ಹೇಳಿದ್ದಾಳೆ. ಪ್ರೀತಿಯ ಆಮಿಷ ತೋರಿಸಿ ತನ್ನನ್ನು ಬಲೆಯಲ್ಲಿ ಸಿಲುಕಿಸಿದನು. ಗುಫ್ರಾನ್ ತನ್ನ ಸ್ನೇಹಿತರಾದ ಅಶ್ರಫ್ ಮತ್ತು ಯಾಕೂಬ್ ಸಹಾಯದಿಂದ ಮಾರ್ಚ್ 2 ರಂದು ಸಲೇಂಪುರ ನಗರದ ದೇವಸ್ಥಾನದಲ್ಲಿ ನಕಲಿ ವಿವಾಹವಾದನು. ವಿವಾಹದ ನಂತರ ಗುಫ್ರಾನ್ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಅದರ ವಿಡಿಯೋಗಳನ್ನು ಮಾಡಿದನು. ನಂತರ ವಿಡಿಯೋಗಳನ್ನು ಪ್ರಸಾರ ಮಾಡುವ ಬೆದರಿಕೆಯೊಡ್ಡಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಅವಳ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದನು. ಅವನು ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿದನು. ನಂತರ ಸಂತ್ರಸ್ತೆ ಹುಡುಗಿ ಪೊಲೀಸರನ್ನು ಸಂಪರ್ಕಿಸಿದಳು. ಈ ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಲವ್ ಜಿಹಾದ್ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇದರಿಂದ ಮುಸ್ಲಿಂ ಯುವಕರಿಗೆ ಕಾನೂನಿನ ಭಯವೇ ಇಲ್ಲ ಎನ್ನುವುದು ಕಂಡು ಬರುತ್ತದೆ. ಇದಕ್ಕಾಗಿ ಈ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ ಲವ್ ಜಿಹಾದಿಗಳಿಗೆ ಗಲ್ಲು ಶಿಕ್ಷೆ ನೀಡುವುದು ಅವಶ್ಯಕವಾಗಿದೆ ಎಂದು ಕಾನೂನು ತಜ್ಞರು ಸಹ ಹೇಳುತ್ತಾರೆ ಎಂಬುದನ್ನು ಗಮನಿಸಬೇಕಾಗಿದೆ!