ಹಿಮಾಲಯದ ೫೧ ಶಕ್ತಿಪೀಠಗಳ ಸಂರಕ್ಷಣೆಗಾಗಿ ಮನವಿ

ಉತ್ತರಾಖಂಡ ಉಚ್ಚ ನ್ಯಾಯಾಲಯದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್

ಡೆಹರಾಡೂನ್ (ಉತ್ತರಖಂಡ) – ಹಿಮಾಲಯದಲ್ಲಿರುವ ೫೧ ಶಕ್ತಿ ಪೀಠಗಳ ಸಂರಕ್ಷಣೆಯ ಸಂದರ್ಭದಲ್ಲಿ ಮನವಿ ದಾಖಲಿಸಲಾಗಿರುವುದರ ವಿಚಾರಣೆ ನಡೆಸುವಾಗ ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಬರುವ ೬ ವಾರಗಳಲ್ಲಿ ಉತ್ತರ ನೀಡಲು ಹೇಳಲಾಗಿದೆ. ಈ ಮನವಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ಕಕ್ಷಿದಾರ ಮಾಡಲಾಗಿದೆ.

ಡೆಹರಾಡೂನಿನ ನಿವಾಸಿ ಪ್ರಭು ನಾರಾಯಣ ಇವರು ಈ ಮನವಿ ದಾಖಲಿಸಿದ್ದಾರೆ. ಇದರಲ್ಲಿ ಅವರು, ಹಿಮಾಲಯದಲ್ಲಿ ೫೧ ಶಕ್ತಿ ಪೀಠಗಳಿಗೆ ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ ಇದೆ. ಈ ಶಕ್ತಿಪೀಠಗಳು ವಾತಾವರಣದ ಸಮತೋಲನಕ್ಕೆ ಆವಶ್ಯಕವಾಗಿವೆ. ಇದರ ಪ್ರತ್ಯಕ್ಷ ಉದಾಹರಣೆ ರಾಜ್ಯದ ಶ್ರೀನಗರದಲ್ಲಿರುವ ಶ್ರೀಧಾರಾದೇವಿ ದೇವಸ್ಥಾನವನ್ನು ತೆರವುಗೊಳಿಸಿದ ನಂತರ ಕಂಡುಬಂದಿದೆ. ಶ್ರೀಧಾರಾದೇವಿ ಮಂದಿರ ಮೂಲ ಸ್ಥಾನದಿಂದ ತೆರವುಗೊಳಿಸಿದ ನಂತರ ಕೆವಲ ಒಂದು ಗಂಟೆಯಲ್ಲಿ ಕೇದಾರನಾಥದಲ್ಲಿ ಪ್ರಳಯವಾಯಿತು. ಶ್ರಿಧಾರಾ ದೇವಿ ಶಕ್ತಿ ಪೀಠದ ಸಂಪೂರ್ಣ ಮಾಹಿತಿ ಪಡೆಯದೆ ಅದನ್ನು ಅದರ ಮೂಲಸ್ಥಾನದಿಂದ ತೆರವುಗೊಳಿಸಲಾಗಿತ್ತು. ಈ ಮಂದಿರದಲ್ಲಿ ಸುಳಿ ಇದೆ. ಅದು ನೈಸರ್ಗಿಕವಾದ ಊರ್ಜಾ ಕೇಂದ್ರವಾಗಿದ್ದು ಅದು ವಿದ್ಯುತ್ ಚುಂಬಕೀಯ ಕ್ಷೇತ್ರ ನಿರ್ಮಾಣ ಮಾಡುತ್ತದೆ. ಇದರ ವೈಜ್ಞಾನಿಕ ಸಂಶೋಧನೆ ನಡೆಯಬೇಕು ಎಂದು ಕೋರಲಾಗಿದೆ.

ಸಂಪಾದಕಿಯ ನಿಲುವು

ಇಂತಹ ಬೇಡಿಕೆ ಸಲ್ಲಿಸುವ ಪರಿಸ್ಥಿತಿಯೇ ಬರಬಾರದಿತ್ತು ! ಕೇಂದ್ರ ಮತ್ತು ರಾಜ್ಯದಲ್ಲಿ ಭಾಜಪಾ ಸರಕಾರ ಇರುವಾಗ ಸರಕಾರ ತಾನಾಗಿ ಇದಕ್ಕಾಗಿ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ.

ಚೈತನ್ಯದ ಸ್ರೋತವಾಗಿರುವ ದೇಶದ ಪ್ರತಿಯೊಂದು ದೇವಸ್ಥಾನವನ್ನೂ ಹಿಂದೂ ರಾಷ್ಟ್ರದಲ್ಲಿ ಸಂರಕ್ಷಿಸಿ ಸಂವರ್ಧನೆ ಮಾಡಲಾಗುವುದು !