ಕರ್ಣಾವತಿ (ಗುಜರಾತ) – ಗುಜರಾತಿನ ಕರ್ಣಾವತಿಯ ಉಪನಗರವಾದ ಸಾನಂದದಲ್ಲಿ ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಪಠಣ ಮಾಡುತ್ತಿರುವುದರಿಂದ ಸ್ಥಳೀಯ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಸೀದಿಯು ಮೂರು ಅಂತಸ್ತನ್ನು ಹೊಂದಿದೆ, ಆದರೂ ಕೂಡ ಪ್ರತಿ ಶುಕ್ರವಾರ ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಪಠಣ ಮಾಡುತ್ತಾರೆ. ರಸ್ತೆ ತಡೆಯಿಂದ ಬೇಸತ್ತ ಸಾನಂದ ವ್ಯಾಪಾರಿಗಳು ಸರಕಾರಕ್ಕೆ ದೂರು ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
೧. ಮಾರ್ಚ್ 8, 2025 ರಂದು ಸಾನಂದದ ಹಿಂದೂ ನಾಯಕರು ಸರಕಾರ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಏಕೆಂದರೆ ಇದು ನಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
೨. ಸಾನಂದನ ಡಾಕ್ ಚೌಕ್ ಬಳಿ ಮೂರು ಅಂತಸ್ತಿನ ಎತ್ತರದ ಮಸೀದಿಯಿದೆ, ಅದರ ಹೊರಗಿನ ರಸ್ತೆ ಪ್ರತಿ ಶುಕ್ರವಾರ ಬಂದ್ ಮಾಡಿ ರಸ್ತೆಯಲ್ಲೇ ನಮಾಜ್ ಪಠಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು, ಪಾದಚಾರಿಗಳು ಮತ್ತು ಸಾಮಾನ್ಯ ನಾಗರಿಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಮಸೀದಿಯಲ್ಲಿ ಸಾಕಷ್ಟು ಸ್ಥಳವಿದ್ದರೂ ಕೂಡ ಸಾಮಾನ್ಯ ಜನರಿಗೆ ತೊಂದರೆ ನೀಡುವ ಉದ್ದೇಶದಿಂದ ರಸ್ತೆಯಲ್ಲಿ ನಮಾಜ ಪಠಣ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
೩. ಸಾನಂದ ನಗರ ಭಾಜಪ ಮಾಜಿ ಅಧ್ಯಕ್ಷ ಕಮಲೇಶ ವ್ಯಾಸ್ ಅವರು ಈ ಬಗ್ಗೆ ಮಾತನಾಡಿ, ಬಹಳ ಹಿಂದಿನಿಂದ ಸಾರ್ವಜನಿಕ ರಸ್ತೆಯಲ್ಲಿ ನಮಾಜ ಪಠಣ ಮಾಡಲಾಗುತ್ತಿದೆ. ಇದರಿಂದ ರಸ್ತೆ ಎರಡು ಗಂಟೆಗಳ ಕಾಲ ಬಂದ್ ಆಗುತ್ತದೆ. ಇದರಿಂದ ಸಂಚಾರ ಸ್ಥಗಿತಗೊಳ್ಳುತ್ತದೆ ಮತ್ತು ಅಲ್ಲಿನ ವ್ಯಾಪಾರವೂ ಸ್ಥಗಿತಗೊಳ್ಳುತ್ತದೆ ಎಂದರು.
“ನಮಾಜ್ ಪಠಣ ಮಾಡುವುದಕ್ಕೆ ಅಥವಾ ಯಾವುದೇ ಧರ್ಮದ ಬಗ್ಗೆ ನಮ್ಮ ಆಕ್ಷೇಪವಿಲ್ಲ; ಆದರೆ ಸಾರ್ವಜನಿಕ ರಸ್ತೆಗಳನ್ನು ತಡೆದು ನಮಾಜ್ ಪಠಣ ಮಾಡುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ” ಎಂದು ವ್ಯಾಸ್ ಹೇಳಿದರು.
ಸಂಪಾದಕೀಯ ನಿಲುವುಇಂತಹ ದೂರುಗಳನ್ನು ಏಕೆ ನೀಡಬೇಕಾಗುತ್ತದೆ? ಸರಕಾರ ಮತ್ತು ಪೊಲೀಸರಿಗೆ ಇದು ಕಾಣಿಸುವುದಿಲ್ಲವೇ? |