ಪ್ರತಿಯೊಂದು ಇಂಚು ಭೂಮಿಯನ್ನು ಮರಳಿ ಪಡೆಯುತ್ತೇವೆ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸಂಭಲ್‌ನ ಶ್ರೀ ಹರಿ ವಿಷ್ಣು ದೇವಾಲಯವನ್ನು ಕೆಡವಲಾಗಿದೆ ಎಂಬುದು ನಿಜ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. 5 ಸಾವಿರ ವರ್ಷಗಳ ಹಿಂದೆ ಪುರಾಣಗಳಲ್ಲಿ ‘ಭಗವಾನ್ ವಿಷ್ಣುವಿನ ಹತ್ತನೇ ಅವತಾರವು ಈ ಭೂಮಿಯ ಮೇಲೆ ಸಂಭಲ್‌ನಲ್ಲಿ ನಡೆಯುತ್ತದೆ’ ಎಂದು ಉಲ್ಲೇಖಿಸಲಾಗಿತ್ತು. ಯಾರಾದರೂ ಬಲವಂತವಾಗಿ ಶ್ರದ್ಧೆಯ ಮೇಲೆ ಆಘಾತ ಮಾಡಿದರೆ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇಸ್ಲಾಂ 1 ಸಾವಿರದ 400 ವರ್ಷಗಳ ಹಿಂದೆ ಸ್ಥಾಪನೆಯಾಯಿತು, ಆದರೆ ಸಂಭಲ್‌ನಲ್ಲಿರುವ ದೇವಾಲಯವನ್ನು 3 ಸಾವಿರದ 500 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ೧೫೨೬ ರಲ್ಲಿ, ಸಂಭಲ್‌ನ ಶ್ರೀ ಹರಿ ವಿಷ್ಣು ದೇವಾಲಯವನ್ನು ಕೆಡವಲಾಯಿತು ಮತ್ತು ನಂತರ ೧೫೨೮ ರಲ್ಲಿ, ಅಯೋಧ್ಯೆಯಲ್ಲಿನ ಶ್ರೀ ರಾಮ ದೇವಾಲಯವನ್ನು ಕೆಡವಲಾಯಿತು. ಎರಡೂ ದೇವಾಲಯಗಳನ್ನು ಮೀರ್ ಬಾಕಿ ಕೆಡವಿದನು. ಸಂಭಲ್ ವಿಶಿಷ್ಟವಾದ ಪೌರಾಣಿಕ ಮಹತ್ವವನ್ನು ಹೊಂದಿದೆ. 68 ತೀರ್ಥ ಕ್ಷೇತ್ರಗಳು ಮತ್ತು 19 ಬಾವಿಗಳು ಇದ್ದವು. ನಾವು 18 ಬಾವಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವುಯೋಗಿ ಆದಿತ್ಯನಾಥ್ ಅವರಂತಹ ನಾಯಕರು ನಿಜವಾಗಿಯೂ ಹಿಂದುತ್ವಕ್ಕಾಗಿ ಕೃತಿ ಮಾಡುತ್ತಿದ್ದಾರೆ. ಆದ್ದರಿಂದ, ಹಿಂದೂಗಳಿಗೆ ಅಂತಹ ಆಡಳಿತಗಾರರು ಬೇಕು ಎಂಬುದು ಸ್ಪಷ್ಟ! |