ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಮುಂಬೈ ಉಚ್ಚ ನ್ಯಾಯಾಲಯದ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ!

ಸೆಪ್ಟೆಂಬರ್ 2015 ರಲ್ಲಿ ವಿಶೇಷ ಮಕೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯವು ಈ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಆಗ ನ್ಯಾಯಾಲಯವು 5 ಆರೋಪಿಗಳಿಗೆ ಮರಣದಂಡನೆ ಮತ್ತು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಒಬ್ಬರನ್ನು ದೋಷಮುಕ್ತಗೊಳಿಸಿತ್ತು.

ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ

ಕಕ್ಕರ್ ಅವರು ಬೇಸತ್ತು ಸ್ವತಃ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಿಂದ ಮಾನಹಾನಿಯಾಗುತ್ತಿದೆ ಎಂದು ಆರೋಪಿಸಿ ಖಾನ್ ಮೊದಲು ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಉರೂಸ್ ನಿಮಿತ್ತ ವಿಶಾಲಗಡದಲ್ಲಿ ಪ್ರಾಣಿ ಬಲಿ ನೀಡಲು ನ್ಯಾಯಾಲಯದ ಅನುಮತಿ!

ಗುಂಪು ಸಂಖ್ಯೆ 19 ಕಸಾಯಿಖಾನೆಯಲ್ಲ. ಆದ್ದರಿಂದ ಅಲ್ಲಿ ಪಶುಬಲಿ ನೀಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಅಲ್ಲಿ ಸ್ವಚ್ಛತೆ ಕಾಪಾಡಲು ಅವರ ಬಳಿ ಯಾವುದೇ ಸಾಮಗ್ರಿಗಳಿಲ್ಲ, ವ್ಯವಸ್ಥೆಯೂ ಇಲ್ಲ.

ಬಾಂದ್ರಾದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ೧೦೦ ರಿಂದ ೧೫೦ ಜನರ ವಿರುದ್ಧ ಪ್ರಕರಣ ದಾಖಲು : ೧೬ ಜನರ ಬಂಧನ

ಬಾಂದ್ರಾ ಪೂರ್ವದ ಗರೀಬ್‌ನಗರದಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ೧೦೦ ರಿಂದ ೧೫೦ ಜನರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

‘ರಾಜಾ ಶಿವಾಜಿ” ಚಲನ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ! – Bombay HC on Raja Shivaji

ಚಲನ ಚಿತ್ರದ ಹೆಸರಿನಿಂದ ಛತ್ರಪತಿ ಪದವನ್ನು ಕೈಬಿಟ್ಟಿರುವುದರಿಂದ ಶಿವಾಜಿಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿ, ‘ರಾಜಾ ಶಿವಾಜಿ’ ಚಲನ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಫೌಂಡೇಶನ್’ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.

ಡಾ. ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಶರದ್ ಕಳಸ್ಕರ್ ಅವರಿಗೆ ಜಾಮೀನು ಮಂಜೂರು

ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸತ್ರ ನ್ಯಾಯಾಲಯದಿಂದ ದೋಷಿ ಎಂದು ತೀರ್ಮಾನಿಸಲ್ಪಟ್ಟಿದ್ದ ಶರದ್ ಕಳಸ್ಕರ್ ಅವರಿಗೆ ಮುಂಬೈ ಉಚ್ಚ ನ್ಯಾಯಾಲಯವು ಜಾಮೀನು ನೀಡಿದೆ. ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಾವು ಯಾವ ಅಂಶಗಳನ್ನು ಮಂಡಿಸಿದ್ದೆವೋ, ಅದೇ ಅಂಶಗಳನ್ನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿಯೂ ಮಂಡಿಸಿದ್ದೆವು.

೨೦೦೬ ರ ಬಾಂಬ್ ಸ್ಫೋಟದ ಪ್ರಕರಣವು ಸ್ಥಗಿತ ಸ್ಥಿತಿಯಲ್ಲಿದೆ ! – ಮುಂಬಯಿ ಉಚ್ಚ ನ್ಯಾಯಾಲಯ

ನ್ಯಾಯಾಲಯವು ನ್ಯಾಯಿಕ ವಿವೇಕವನ್ನು ಬಳಸಿಲ್ಲ. ಆರೋಪಿಗಳ ಮೇಲೆ ವಿಚಾರಣೆ ನಡೆಸಲು ಸಾಕಷ್ಟು ಪುರಾವೆಗಳೇ ಇಲ್ಲದಿರುವುದರಿಂದ ಆರೋಪ ಖಚಿತಪಡಿಸುವ ಆದೇಶವನ್ನು ರದ್ದುಗೊಳಿಸಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗುತ್ತಿದೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಾಲ್ವರು ಹಿಂದೂ ಆರೋಪಿಗಳು ಖುಲಾಸೆ!

“ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ. ಇದರಿಂದಾಗಿ ಆರೋಪಗಳ ತಳಹದಿಯೇ ದುರ್ಬಲವಾಗಿದೆ” ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.

ವ್ಯಕ್ತಿಯನ್ನು ವಿಚಾರಣೆಗೆ ಕರೆಸುವಾಗ ದೂರಿನ ಪ್ರತಿಯನ್ನು ನೀಡುವುದು ಕಡ್ಡಾಯ! – ಮುಂಬಯಿ ಉಚ್ಚ ನ್ಯಾಯಾಲಯ

ಸಂಸ್ಥೆಯೊಂದರ ವಿರುದ್ಧದ ಮೊಕದ್ದಮೆಯಲ್ಲಿ ವ್ಯಕ್ತಿಗೆ ನೋಟಿಸ್ ನೀಡುವಾಗ ದೂರಿನ ಪ್ರತಿಯನ್ನು ನೀಡಿರಲಿಲ್ಲ, ಹಾಗೆಯೇ ಸತತವಾಗಿ ಇತರ ಪ್ರಕರಣಗಳಲ್ಲೂ ಇದು ಗಮನಕ್ಕೆ ಬಂದಿದೆ ಎಂದು ನಮೂದಿಸಿ ಮುಂಬಯಿ ಉಚ್ಚ ನ್ಯಾಯಾಲಯವು ಮೇಲಿನ ಆದೇಶವನ್ನು ನೀಡಿದೆ.

ಅಬು ಸಲೇಂ ಬಿಡುಗಡೆಯ ಬೇಡಿಕೆಯನ್ನು ತಿರಸ್ಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ !

ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ ಜನರಲ್ ಅನಿಲ ಸಿಂಗ್ ಅವರು, ಸಲೇಂ ಸಲ್ಲಿಸಿರುವ ಅರ್ಜಿಯು ಅಯೋಗ್ಯವಾಗಿದ್ದು, ಅದನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ನ್ಯಾಯಾಲಯದಲ್ಲಿ ಮಂಡಿಸಿದರು.