
ಮುಂಬಯಿ, 29 ಏಪ್ರಿಲ್ (ವಾರ್ತೆ.) – ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ಆರೋಪಿ ಶ್ರೀ. ಶರದ್ ಕಳಸ್ಕರ್ ಅವರಿಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎ.ಎಸ್. ಗಡಕರಿ ಮತ್ತು ನ್ಯಾಯಮೂರ್ತಿ ರಣಜಿತ್‌ಸಿಂಹ ಭೋಸಲೆ ಅವರ ವಿಭಾಗೀಯ ಪೀಠವು 29 ಏಪ್ರಿಲ್ ರಂದು ಈ ನಿರ್ಧಾರವನ್ನು ನೀಡಿದೆ. ನ್ಯಾಯಮೂರ್ತಿ ರಣಜಿತ್‌ಸಿಂಹ ಭೋಸಲೆ ಅವರು ಆನ್‌ಲೈನ್‌ನಲ್ಲಿ ಉಪಸ್ಥಿತರಿದ್ದರು.
Justice prevails!
In the Narendra Dabholkar case, today’s bail granted to staunch Hindu Sharad Kalaskar raises a fundamental question: has the narrative of the past decade been driven by evidence, or by a preconceived agenda?
Crucially, the High Court granted bail noting that… pic.twitter.com/9v8ORuMZBX
— Sanatan Sanstha (@SanatanSanstha) April 29, 2026
ಆಗಸ್ಟ್ 2018 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಶ್ರೀ. ಶರದ್ ಕಳಸ್ಕರ್ ಅವರನ್ನು ಬಂಧಿಸಿತ್ತು. ಶ್ರೀ. ಶರದ್ ಕಳಸ್ಕರ್ ಅವರ ಪರವಾಗಿ ಹಿರಿಯ ವಕೀಲರಾದ ನಿತಿನ್ ಪ್ರಧಾನ್, ವಕೀಲೆ ಶುಭದಾ ಖೋತ್ ಮತ್ತು ವಕೀಲ ವೀರೇಂದ್ರ ಇಚಲಕರಂಜೀಕರ್ ಅವರು ಕಾರ್ಯನಿರ್ವಹಿಸಿದರು. ಈ ಪ್ರಕರಣದ ಆರೋಪಿಗಳ ಪರವಾಗಿ ವಕೀಲರಾದ ಸಿದ್ಧವಿದ್ಯಾ, ವಕೀಲ ಘನಶ್ಯಾಮ್ ಉಪಾಧ್ಯಾಯ, ವಕೀಲ ಸುಭಾಷ್ ಝಾ, ವಕೀಲೆ ಸುವರ್ಣಾ ಆವ್ಹಾಡ್-ವತ್ಸ್, ವಕೀಲ ಸಚಿನ್ ಕಣಸೆ ಅವರು ಹೋರಾಡುತ್ತಿದ್ದಾರೆ. ಶ್ರೀ. ಶರದ್ ಕಳಸ್ಕರ್ ಅವರ ಮೇಲೆ ಡಾ. ದಾಭೋಲ್ಕರ್ ಅವರ ಮೇಲೆ ಗುಂಡು ಹಾರಿಸಿದ ಆರೋಪವಿದೆ. 10 ಮೇ 2024 ರಂದು ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಡಾ. ವೀರೇಂದ್ರ ತಾವಡೆ, ವಕೀಲ ಸಂಜೀವ್ ಪುನಾಳೇಕರ್ ಮತ್ತು ಶ್ರೀ. ವಿಕ್ರಮ್ ಭಾವೆ ಅವರನ್ನು ಪುಣೆಯ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು; ಆದರೆ ಶ್ರೀ. ಶರದ್ ಕಳಸ್ಕರ್ ಮತ್ತು ಶ್ರೀ. ಸಚಿನ್ ಅಂದುರೆ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.
ದಾಭೋಳ್ಕರ್ ಅವರ ಸಂಬಂಧಿಕರು ಮತ್ತು ವಕೀಲರು ತನಿಖಾ ಸಂಸ್ಥೆಗೆ ಸರಿಯಾಗಿ ತನಿಖೆ ನಡೆಸಲು ಬಿಡಲಿಲ್ಲ! – ವಕೀಲ ನಿತಿನ್ ಪ್ರಧಾನ್

ಸನ್ಮಾನ್ಯ ಗಡ್ಕರಿ ಮತ್ತು ಭೋಸ್ಲೆ ಸಾಹೇಬರ ಪೀಠವು ಈ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದೆ ಎಂಬುದು ನನಗೆ ಸಮಾಧಾನ ತಂದಿದೆ. ಅವರಿಗೆ ಆಗಿದ್ದ ದೊಡ್ಡ ಅನ್ಯಾಯ, ಅಂದರೆ 10 ರಿಂದ 12 ವರ್ಷಗಳ ಕಾಲ ಅವರು ಸೆರೆವಾಸ ಅನುಭವಿಸಿದ್ದರು, ಅದರಿಂದ ಅವರಿಗೆ ಬಿಡುಗಡೆ ಅಥವಾ ಪರಿಹಾರ ನೀಡಿದ್ದಾರೆ. ನನಗಂತೂ ತನಿಖಾ ಸಂಸ್ಥೆಗೆ ಸರಿಯಾದ ರೀತಿಯಲ್ಲಿ ತನಿಖೆ ಮಾಡಲೇ ಬಿಟ್ಟಿಲ್ಲ ಎಂದು ಅನ್ನಿಸುತ್ತಿದೆ. ಇದಕ್ಕೆ ದಾಭೋಳ್ಕರ್ ಅವರ ಸಂಬಂಧಿಕರು ಹಾಗೂ ಅವರ ವಕೀಲರೇ ಕಾರಣರಾಗಿದ್ದಾರೆ. ತನಿಖೆಯ ಪ್ರತಿಯೊಂದು ಹಂತದಲ್ಲೂ ಅವರು ಹಸ್ತಕ್ಷೇಪ ಮಾಡಿದರು. ಅವರು ರಾಜಕೀಯ ಮತ್ತು ಇತರ ರೀತಿಯಲ್ಲಿ ದೊಡ್ಡ ಮಟ್ಟದ ಒತ್ತಡವನ್ನು ಹೇರಿದರು. ಇದರ ಪರಿಣಾಮ, ಇಡೀ ತನಿಖೆಯ ಪ್ರಕ್ರಿಯೆಯೇ ಸಂಪೂರ್ಣವಾಗಿ ಹದಗೆಟ್ಟಿತು.
“Dabholkar’s relatives and lawyers did not allow the investigating agencies to conduct a proper investigation!” – Adv. Nitin Pradhan.
In the Dabholkar case, the Bombay High Court has granted bail to one of the two men convicted in the 2013 murder.
Despite lack of substantive… pic.twitter.com/CmoweFPoSu
— Sanatan Prabhat (@SanatanPrabhat) April 29, 2026
ಇದರ ಪರಿಣಾಮವಾಗಿ, ಈ ಎಲ್ಲ ಗೊಂದಲಗಳ ದುಷ್ಪರಿಣಾಮ ಆರೋಪಿಯ ಮೇಲೆ ಆಯಿತು. ಯಾವುದೇ ಕಾರಣವಿಲ್ಲದೆ, ಯಾವುದೇ ಸಂಬಂಧವಿಲ್ಲದೆ ಅವರನ್ನು ಬಂಧಿಸಲಾಯಿತು. ಅವರು 8 ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು ಮತ್ತು ಆ ಬಗ್ಗೆ ಯಾರೂ ಯಾವುದೇ ವಿಷಾದವನ್ನು ವ್ಯಕ್ತಪಡಿಸಿದಂತೆ ಕಾಣಲಿಲ್ಲ; ಏಕೆಂದರೆ ಸಮಾಜದಲ್ಲಿ ಬಹಳ ದೊಡ್ಡದಾದ ಭೀಕರ ಕೊಲೆಯ ಅಪರಾಧ ನಡೆದಿದೆ ಮತ್ತು ಅದನ್ನು ಇವರೇ ಮಾಡಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಲಾಗಿತ್ತು. ಇದು ಅತ್ಯಂತ ಕೆಟ್ಟ ವಿಷಯವಾಗಿತ್ತು. ಕಾನೂನಿನ ದೃಷ್ಟಿಯಿಂದ ಗಂಭೀರವಾದ ವಿಷಯವೇನೆಂದರೆ, ಆರೋಪಿಗಳು ಕಾನೂನಿನ ಪ್ರಕಾರ ಸಂಪೂರ್ಣವಾಗಿ ದೋಷಿಗಳೆಂದು ಸಾಬೀತಾಗುವವರೆಗೆ ಅವರು ನಿರ್ದೋಷಿಗಳಾಗಿಯೇ ಇರುತ್ತಾರೆ. ಆದರೆ ಇಲ್ಲಿ ಉಲ್ಟಾ ಆಯಿತು, ಅವರು ಸಿಕ್ಕಿಬಿದ್ದಿದ್ದಾರೆ, ಅವರನ್ನು ಬಂಧಿಸಲಾಗಿದೆ, ಅಂದರೆ ಅವರೇ ದೋಷಿಗಳು ಎಂದು ಸಮಾಜವೇ ನಿರ್ಧರಿಸಿತು. ಅವರ ಮೇಲೆ ಯಾವ ರೀತಿಯಲ್ಲಿ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳಾದವೋ, ಆ ಬಗ್ಗೆ ಸಮಾಜ, ರಾಜಕೀಯ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಯೋಚಿಸಬೇಕಾಗಿದೆ’, ಎಂದು ಹೇಳಿದರು.
ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಾವು ಮಂಡಿಸಿದ ಅಂಶಗಳ ಆಧಾರದ ಮೇಲೆಯೇ ಉಚ್ಚ ನ್ಯಾಯಾಲಯವು ಜಾಮೀನು ನೀಡಿದೆ ! – ವಕೀಲ ವೀರೇಂದ್ರ ಇಚಲಕರಂಜಿಕರ್

ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸತ್ರ ನ್ಯಾಯಾಲಯದಿಂದ ದೋಷಿ ಎಂದು ತೀರ್ಮಾನಿಸಲ್ಪಟ್ಟಿದ್ದ ಶರದ್ ಕಳಸ್ಕರ್ ಅವರಿಗೆ ಮುಂಬೈ ಉಚ್ಚ ನ್ಯಾಯಾಲಯವು ಜಾಮೀನು ನೀಡಿದೆ. ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಾವು ಯಾವ ಅಂಶಗಳನ್ನು ಮಂಡಿಸಿದ್ದೆವೋ, ಅದೇ ಅಂಶಗಳನ್ನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿಯೂ ಮಂಡಿಸಿದ್ದೆವು. ವಿಶೇಷವೆಂದರೆ, ಜಿಲ್ಲಾ ಸತ್ರ ನ್ಯಾಯಾಲಯವು ಯಾವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲವೋ, ಅವುಗಳ ಆಧಾರದ ಮೇಲೆಯೇ ಉಚ್ಚ ನ್ಯಾಯಾಲಯವು ಜಾಮೀನು ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ