
ಮುಂಬಯಿ – ಯಾವುದೇ ವ್ಯಕ್ತಿಯನ್ನು ಪ್ರಾಥಮಿಕ ವಿಚಾರಣೆಗೆ ಕರೆಸುವಾಗ, ಹಾಗೆಯೇ ಅಪರಾಧ ದಾಖಲಿಸುವ ಮೊದಲು ಅಥವಾ ನಂತರ ಆ ವ್ಯಕ್ತಿಗೆ ನೋಟಿಸ್ ನೊಂದಿಗೆ ದೂರಿನ ಪ್ರತಿಯನ್ನು ನೀಡುವುದು ಕಡ್ಡಾಯವಾಗಿದೆ ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಪೊಲೀಸ್ ಆಡಳಿತಕ್ಕೆ ಆದೇಶ ನೀಡಿದೆ.
ಸಂಸ್ಥೆಯೊಂದರ ವಿರುದ್ಧದ ಮೊಕದ್ದಮೆಯಲ್ಲಿ ವ್ಯಕ್ತಿಗೆ ನೋಟಿಸ್ ನೀಡುವಾಗ ದೂರಿನ ಪ್ರತಿಯನ್ನು ನೀಡಿರಲಿಲ್ಲ, ಹಾಗೆಯೇ ಸತತವಾಗಿ ಇತರ ಪ್ರಕರಣಗಳಲ್ಲೂ ಇದು ಗಮನಕ್ಕೆ ಬಂದಿದೆ ಎಂದು ನಮೂದಿಸಿ ಮುಂಬಯಿ ಉಚ್ಚ ನ್ಯಾಯಾಲಯವು ಮೇಲಿನ ಆದೇಶವನ್ನು ನೀಡಿದೆ. (ಮೂಲತಃ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಇಂತಹ ಆದೇಶವನ್ನು ಏಕೆ ನೀಡಬೇಕಾಗುತ್ತದೆ? ಕಾನೂನಿನಲ್ಲಿ ಈ ಬಗ್ಗೆ ಅವಕಾಶವಿದ್ದರೂ ಪೊಲೀಸರು ಅದನ್ನು ಏಕೆ ಪಾಲಿಸುವುದಿಲ್ಲ? ಎಂಬುದರ ಕುರಿತೂ ಉಚ್ಚ ನ್ಯಾಯಾಲಯವು ವಿಚಾರಿಸಬೇಕು! ಇದರಿಂದಲೇ ಪೊಲೀಸರು ಕಾನೂನನ್ನು ಎಷ್ಟು ಪಾಲಿಸುತ್ತಿರಬಹುದು ಎಂಬುದು ಸ್ಪಷ್ಟವಾಗುತ್ತದೆ! – ಸಂಪಾದಕರು) ಪೊಲೀಸರಿಂದ ದೂರಿನ ವಿವರವನ್ನೂ ತಿಳಿಸಲಾಗುತ್ತಿಲ್ಲ, ಇದು ನ್ಯಾಯದ ತತ್ವದ ಉಲ್ಲಂಘನೆಯಾಗಿದೆ ಎಂದು ಹೇಳುತ್ತಾ ಮುಂಬಯಿ ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ಮೇಲಿನ ಆದೇಶವನ್ನು ನೀಡಿದೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram