ಚಲನ ಚಿತ್ರದ ಹೆಸರಿನಿಂದ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನವಾಗುತ್ತಿಲ್ಲ ಎಂದು ನ್ಯಾಯಾಲಯದ ಅಭಿಪ್ರಾಯ!

ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ‘ರಾಜಾ ಶಿವಾಜಿ’ ಚಲನ ಚಿತ್ರದ ಶೀರ್ಷಿಕೆಯಿಂದ ಛತ್ರಪತಿ ಶಿವಾಜಿ ಮಹಾರಾಜರಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುತ್ತಿಲ್ಲ ಅಥವಾ ಈ ಶೀರ್ಷಿಕೆಯು ಅವರಿಗೆ ಅವಮಾನ ಮಾಡುವಂತಿಲ್ಲ, ಎಂದು ಮುಂಬಯಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಚಲನ ಚಿತ್ರದ ಹೆಸರಿನಿಂದ ಛತ್ರಪತಿ ಪದವನ್ನು ಕೈಬಿಟ್ಟಿರುವುದರಿಂದ ಶಿವಾಜಿಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿ, ‘ರಾಜಾ ಶಿವಾಜಿ’ ಚಲನ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಫೌಂಡೇಶನ್’ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ ಅಖಂಡ ಅವರು ಈ ಅರ್ಜಿಯನ್ನು ವಜಾಗೊಳಿಸಿದ್ದು, ಈ ಅರ್ಜಿಯು ಕೇವಲ ಪ್ರಚಾರದ ಉದ್ದೇಶದಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'राजा शिवाजी’ चलचित्र के प्रदर्शन पर रोक लगाने से उच्च न्यायालय ने मना किया ।
चलचित्र के नाम से छत्रपति शिवाजी महाराज का अनादर नहीं होता – न्यायालय का निरीक्षण
पढ़े विस्तृत :https://t.co/HMVnMy3nsE #Mumbai
— Sanatan Prabhat (@SanatanPrabhat) May 2, 2026
ಕೇವಲ ‘ರಾಜಾ ಶಿವಾಜಿ’ ಎಂಬ ಹೆಸರಿನಿಂದಾಗಿ ಎಲ್ಲಾ ಶಿವಾಜಿ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು, ಇದರಿಂದ ಮಹಾರಾಜರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವು ಕಡಿಮೆಯಾಗುತ್ತಿದೆ. ಹಾಗಾಗಿ ಈ ಚಲನ ಚಿತ್ರದ ಹೆಸರನ್ನು ಬದಲಾಯಿಸಿ ಛತ್ರಪತಿ ‘ರಾಜಾ ಶಿವಾಜಿ’ ಎಂದು ಮಾಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಈ ವಿಚಾರಣೆಯ ವೇಳೆ ನಿರ್ಮಾಪಕರು ನ್ಯಾಯಾಲಯಕ್ಕೆ, ಈ ಚಲನ ಚಿತ್ರವು ಶಿವಾಜಿ ಮಹಾರಾಜರ ಪಟ್ಟಾಭಿಷೇಕಕ್ಕೂ ಮುನ್ನಿನ ಕಾಲಘಟ್ಟವನ್ನು ಆಧರಿಸಿದೆ. ಹಾಗಾಗಿ ತಾಂತ್ರಿಕವಾಗಿ ಅವರನ್ನು ‘ರಾಜಾ ಶಿವಾಜಿ’ ಎಂದೇ ಕರೆಯಲಾಗುತ್ತಿತ್ತು, ಜೊತೆಗೆ ಚಲನ ಚಿತ್ರದ ಆರಂಭದಲ್ಲಿ ಈ ಕುರಿತು ಸಂದೇಶ ನೀಡುವ ಪಠ್ಯವನ್ನು ಸಹ ಪ್ರಕಟಿಸಲಾಗಿದೆ. ಈ ಚಲನ ಚಿತ್ರಕ್ಕೆ ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿಯೂ ಅನುಮೋದನೆ ನೀಡಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”