
ಮುಂಬಯಿ – 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಅಪರಾಧಿ ಅಬು ಸಲೇಂ ತನ್ನನ್ನು ಬಿಡುಗಡೆ ಮಾಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 15 ರಂದು ಮುಂಬಯಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಮೂರ್ತಿ ಅಜಯ ಗಡಕರಿ ಮತ್ತು ನ್ಯಾಯಮೂರ್ತಿ ಕಮಲ ಖಾತಾ ಅವರ ಪೀಠದ ಮುಂದೆ ಈ ವಿಚಾರಣೆ ನಡೆಯಿತು.
ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ ಜನರಲ್ ಅನಿಲ ಸಿಂಗ್ ಅವರು, ಸಲೇಂ ಸಲ್ಲಿಸಿರುವ ಅರ್ಜಿಯು ಅಯೋಗ್ಯವಾಗಿದ್ದು, ಅದನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ನ್ಯಾಯಾಲಯದಲ್ಲಿ ಮಂಡಿಸಿದರು. ಈ ಹಿಂದೆ 2025 ರಲ್ಲಿ ಅಬು ಸಲೇಂ ಬಿಡುಗಡೆಯ ಅರ್ಜಿಯು ವಿಚಾರಣೆಗೆ ಬಂದಾಗ, ಈ ಅರ್ಜಿಯು ಸರಿಯೆಂದು ಅನಿಸದಿದ್ದರೂ, ವಿಚಾರಣೆಗಾಗಿ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ಮುಂಬಯಿ ಸರಣಿ ಬಾಂಬ್ ಸ್ಫೋಟದ ನಂತರ ಅಬು ಸಲೇಂ ವಿದೇಶಕ್ಕೆ ಪರಾರಿಯಾಗಿದ್ದನು. ನ್ಯಾಯಾಲಯವು ಅವನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. 2005 ರಲ್ಲಿ ಅಬು ಸಲೇಂನನ್ನು ಪೋರ್ಚುಗಲ್ ನಿಂದ ಹಸ್ತಾಂತರಿಸಲಾಯಿತು. ‘ಅಂತರರಾಷ್ಟ್ರೀಯ ಅಪರಾಧಿ ಒಪ್ಪಂದ’ದ ಪ್ರಕಾರ ಭಾರತ ಸರಕಾರವು ಅವನಿಗೆ 25 ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆ ನೀಡುವಂತಿಲ್ಲ. ತನ್ನ ಉತ್ತಮ ನಡವಳಿಕೆಯ ಕಾರಣ ನೀಡಿ ಶಿಕ್ಷೆಯಲ್ಲಿನ ರಿಯಾಯಿತಿ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ, ಫೆಬ್ರವರಿ 28, 2025 ರಂದು ಶಿಕ್ಷೆಯ ಅವಧಿ ಮುಕ್ತಾಯಗೊಳ್ಳುತ್ತದೆ ಎಂದು ಅಬು ಸಲೇಂ ಅರ್ಜಿಯಲ್ಲಿ ಉಲ್ಲೇಖಿಸಿದ್ದನು. ವಾಸ್ತವದಲ್ಲಿ ಅಬು ಸಲೇಂನ 25 ವರ್ಷಗಳ ಶಿಕ್ಷೆಯು ನವೆಂಬರ್ 10, 2030 ರಂದು ಪೂರ್ಣಗೊಳ್ಳಲಿದೆ. ಸಲೇಂ ಅಂತರರಾಷ್ಟ್ರೀಯ ಅಪರಾಧಿಯಾಗಿದ್ದು, ಅವನ ಮೇಲೆ ಭಯೋತ್ಪಾದನೆ, ಕೊಲೆ, ಸುಲಿಗೆಯಂತಹ ಅತ್ಯಂತ ಗಂಭೀರ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಅವನು ತಲೋಜಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !