ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್, ಜನವರಿ 30 (ಸುದ್ದಿ) – ನಾವು ದೇಶ, ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುತ್ತೇವೆ. ಯಾರ ಬಳಯೂ ಆಗ್ರಹಿಸುವುದಿಲ್ಲ, ಬದಲಾಗಿ ಘೋಷಿಸುತ್ತೇವೆ. ನಮ್ಮ ಧ್ವನಿ ದೇವರ ತನಕ ತಲುಪುತ್ತದೆ. ಭಾರತ ಹಿಂದೂ ರಾಷ್ಟ್ರವಾಗಬೇಕೆಂದು ನಾನು ಮೂರುವರೆ ವರ್ಷಗಳಿಂದ ಹೇಳುತ್ತಿದ್ದೇನೆ. ಈಶ್ವರ ಮತ್ತು ಋಷಿಮುನಿಗಳಿಂದ ನನಗೆ ದೊರೆತ ಸಂದೇಶವನ್ನು ನಾನು ಪ್ರಸಾರ ಮಾಡುತ್ತಿದ್ದೇನೆ ಎಂದು ಪುರಿ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಹೇಳಿದರು. ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ವತಿಯಿಂದ ಮಹಾಕುಂಭದಲ್ಲಿ ‘ಭಾರತ ಭವ್ಯ ಬನಾಯೆಂಗೆ, ಹಮ್ ಹಿಂದೂ ರಾಷ್ಟ್ರ ಬನಾಯೆಂಗೆ’, ಎಂಬ ಫಲಕಗಳನ್ನು ವಿವಿಧ ಸ್ಥಳಗಳಲ್ಲಿ ಹಾಕಲಾಗಿದೆ. ಈ ಕುರಿತು ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಗಳು ಕೇಳಿದಾಗ, ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಮೇಲಿನ ಉದ್ಘಾರವನ್ನು ತೆಗೆದರು.
ಈ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಮಾತನಾಡಿ, “ಭಾರತೀಯ ಸಂವಿಧಾನ ಇರುವವರೆಗೆ, ಭಾರತ ಹೇಗೆ ಹಿಂದೂ ರಾಷ್ಟ್ರವಾಗಲು ಸಾಧ್ಯ?”. ಸಂವಿಧಾನದ 25ನೇ ವಿಧಿಯನ್ನು ಗೌರವಿಸಿದ್ದರೆ, ಜೈನರು ಮತ್ತು ಸಿಖ್ಖರು ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುತ್ತಿದ್ದರು. “ಮೀಸಲಾತಿ ಪಡೆಯಲು ಯಾರೂ ತಮ್ಮನ್ನು ಅಲ್ಪಸಂಖ್ಯಾತರೆಂದು ಘೋಷಿಸಿಕೊಳ್ಳುತ್ತಿರಲಿಲ್ಲ.” ಎಂದು ಹೇಳಿದರು.
ಮಹಾಕುಂಭದಲ್ಲಿ, ಸಂತರು ಧರ್ಮ ಸಂಸತ್ತಿನಲ್ಲಿ ಸನಾತನ ಬೋರ್ಡ್ಅನ್ನು ಒತ್ತಾಯಿಸಿದ್ದಾರೆ ಮತ್ತು ಅದನ್ನು ನಡೆಸಲು ನಾಲ್ಕು ಪೀಠಗಳ ಶಂಕರಾಚಾರ್ಯರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ದೈನಿಕ ‘ಸನಾತನ ಪ್ರಭಾತ’ ಪ್ರತಿನಿಧಿಯೊಬ್ಬರು ಕೇಳಿದಾಗ, ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು, “ಶಂಕರಾಚಾರ್ಯರು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರಾಗಿರಬಾರದು” ಶಂಕರಾಚಾರ್ಯರು ಜಗತ್ತಿನ ನಾಲ್ಕು ಭಾಗಗಳಿಗೆ ಜವಾಬ್ದಾರರಾಗಿದ್ದು, ಅವರ ನೇತೃತ್ವದಲ್ಲಿ ಮಠಗಳು ಮತ್ತು ದೇವಾಲಯಗಳು ಸುರಕ್ಷಿತವಾಗಿವೆ. ನಾವು ಸನಾತನ ಬೋರ್ಡ್ಅನ್ನು ಆಗ್ರಹಿಸುತ್ತಿಲ್ಲ. ಶಂಕರಾಚಾರ್ಯರು ಪ್ರಾಮಾಣಿಕವಾಗಿ ಕಾರ್ಯ ಮಾಡಬೇಕು’, ಎಂದು ಹೇಳಿದರು.
ಸಭೆಯಲ್ಲಿ ಹಿಂದೂ ರಾಷ್ಟ್ರ ಘೋಷಣೆ!
ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಸ್ವಯಂಪ್ರೇರಿತವಾಗಿ ‘ಹಮ್ ಹಿಂದೂ ರಾಷ್ಟ್ರ ಬನಾಯೆಂಗೆ, ಭಾರತ ಭವ್ಯ ಬನಾಯೆಂಗೆ’, ‘ಧರ್ಮದ ಜಯವಾಗಲಿ, ಅಧರ್ಮ ನಾಶವಾಗಲಿ’ ಮುಂತಾದ ಘೋಷಣೆಗಳನ್ನು ಕೂಗಿದರು.
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!