ಪ್ರಯಾಗರಾಜ ಕುಂಭಮೇಳ 2025
ಸನಾತನ ಪಂಚಾಗ್ 2025 ರ ಪ್ರಕಾಶನ

ಪ್ರಯಾಗರಾಜ್, ಜನವರಿ 30 (ಸುದ್ದಿ.) – ಸನಾತನದ ‘ನಾಮಜಪ ಕೌನಸಾ ಕರೇ’ ಹಿಂದಿ ಭಾಷೆಯ ಗ್ರಂಥ, ಹಾಗೆಯೇ ಸನಾತನ ಪಂಚಾಂಗ 2025 ಅನ್ನು ಜಗದ್ಗುರು ವಿದ್ಯಾಭಾಸ್ಕರಜಿ ಸ್ವಾಮಿಗಳ ಹಸ್ತದಿಂದ ‘ಶ್ರೀ ತ್ರಿದಂಡಿದೇವ ಸೇವಾಶ್ರಮ ಟ್ರಸ್ಟ್’ ಶಿಬಿರದಲ್ಲಿ ಪ್ರಕಾಶನಗೊಳಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಉಪಸ್ಥಿತರಿದ್ದರು.

ಶ್ರೀ. ಚೇತನ ರಾಜಹಂಸ ಇವರು ಜಗದ್ಗುರು ವಿದ್ಯಾಭಾಸ್ಕರಜಿ ಸ್ವಾಮೀಜಿ ಅವರಿಗೆ ಈ ಗ್ರಂಥದ ಬಗ್ಗೆ, ಹಾಗೆಯೇ ಸನಾತನ ಸಂಸ್ಥೆಯ ಕಾರ್ಯ ಮತ್ತು ಆಶ್ರಮದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಈ ಬಗ್ಗೆ ಮಹಾರಾಜರು ಗೋವಾದ ಸನಾತನದ ಆಶ್ರಮಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಶ್ರೀ. ಚೇತನ ರಾಜಹಂಸ ಅವರ ಸತ್ಕಾರ ಮಾಡಿದರು.