ಕುಂಭಕ್ಷೇತ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಸಂತ-ಮಹಂತರ ಭೇಟಿ

ಸಮಿತಿಯ ಕಾರ್ಯಕ್ಕೆ ಅನೇಕ ಆಶೀರ್ವಾದಗಳು

ಮಹಂತ ರಾಜು ದಾಸಜಿ ಮಹಾರಾಜರೊಂದಿಗೆ ಚರ್ಚಿಸುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ (ಎಡಕ್ಕೆ)

ಪ್ರಯಾಗರಾಜ, ಫೆಬ್ರುವರಿ ೯(ವಾರ್ತೆ) – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಹಾಗೂ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯದ ಸಂಘಟಕರಾದ ಶ್ರೀ. ಸುನಿಲ ಘನವಟರವರು ಮಹಾಕುಂಭಕ್ಷೇತ್ರದಲ್ಲಿ ವಿವಿಧ ಸಂತ-ಮಹಂತರನ್ನು ಭೇಟಿಯಾಗಿ ಅವರನ್ನು ಗೌರವಿಸಿದರು. ಈ ಸಮಯದಲ್ಲಿ ಸಂತ – ಮಹಂತರು ಸಮಿತಿಯ ಕಾರ್ಯಕ್ಕೆ ಅನೇಕ ಆಶೀರ್ವಾದ ನೀಡಿದರು.

ಸಂತ ಮಹಂತರು ವ್ಯಕ್ತಪಡಿಸಿರುವ ಅಭಿಪ್ರಾಯ !

೧. ಮಹಂತ ಶ್ರೀ ರಾಜು ದಾಸ ಮಹಾರಾಜಜೀ, ಸಿದ್ದಪೀಠ ಹನುಮಾನ ಗಡಿ ಮಂದಿರ, ಅಯೋಧ್ಯಾ ಧಾಮ, ರಾಷ್ಟ್ರೀಯ ಅಧ್ಯಕ್ಷರು, `ಹಿಂದೂ ಸುರಕ್ಷಾ ಸೇವಾ ಟ್ರಸ್ಟ್’

‘ಹಿಂದೆ ೮ ಇಸ್ಲಾಮಿ ರಾಷ್ಟ್ರಗಳಿದ್ದ ಈ ವಿಶ್ವದಲ್ಲಿ ಇಂದು ೫೭ ಇಸ್ಲಾಮಿ ರಾಷ್ಟ್ರಗಳಿವೆ. ನಮ್ಮ ಪೂರ್ವಜರು ಧರ್ಮಕ್ಕಾಗಿ ಬಲಿದಾನ ನೀಡಿದರು, ಆದುದರಿಂದಲೇ ನಮ್ಮ ಸನಾತನ ಹಿಂದೂ ಸಂಸ್ಕೃತಿ ಜೀವಂತವಾಗಿದೆ. ಹಿಂದೂ ರಾಷ್ಟ್ರಕ್ಕಾಗಿ ಎಲ್ಲೆಡೆ ಹಿಂದೂಗಳು ಕಾರ್ಯ ಮಾಡಬೇಕು. ಈಗ ಮಾಡದಿದ್ದರೆ, ಎಂದಿಗೂ ಮಾಡಲಾಗದು !

೨. ಮಹಾಮಂಡಲೇಶ್ವರ ಗಿರಿಧರಜೀ ಮಹಾರಾಜರು, ಸೂರತ ಬಂಗಲಾ, ಹರಿದ್ವಾರ ‘ ಹಿಂದುತ್ವದ ಕಾರ್ಯದಲ್ಲಿ ಬರುವ ಅಡಚಣೆಗಳನ್ನು ಸ್ಪಷ್ಟವಾಗಿ ಮಂಡಿಸುವ ಸಮಯ ಬಂದಿದೆ !’

ಮಹಾಮಂಡಲೇಶ್ವರ ಗಿರಿಧರಜಿ ಮಹಾರಾಜ ಇವರಿಗೆ ಉಡುಗೊರೆ ನೀಡುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ (ಬಲಕ್ಕೆ)

೩. ರಾವತಪುರಾ ಸರಕಾರ ಮಹಾರಾಜರು, ಚಂಬಲ, ಮಧ್ಯಪ್ರದೇಶ ‘ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಿಗೆ ಖಂಡಿತವಾಗಿ ಭೇಟಿ ನೀಡುವೆವು !’

ರಾವತಪುರಾ ಸರಕಾರ ಮಹಾರಾಜರವರ ಆಶೀರ್ವಾದ ಪಡೆಯುತ್ತಿರುವ ಎಡದಿಂದ ಶ್ರೀ. ಸುನಿಲ ಘನವಟ ಮತ್ತು ಶ್ರೀ. ಚೇತನ ರಾಜಹಂಸ

೪. ಪೀಠಾಧೀಶ್ವರ ಶ್ರೀಮದ್ ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ರಾಜೇಶ್ವರ ಮಾವುಲಿ ಸರಕಾರ, ಶ್ರೀ ರುಕ್ಮಿಣಿ ವಿಧರ್ಭಪೀಠ, ಅಂಬಿಕಾಪುರ ಕೊಡಣ್ಯಪುರ (ಮಹಾರಾಷ್ಟ್ರ) ಇವರೂ ಕೂಡ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ತುಂಬಿತುಂಬಿ ಆಶೀರ್ವಾದ ನೀಡಿದರು.

ಶ್ರೀಮದ್ ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ರಾಜೇಶ್ವರ ಮಾವುಲಿ ಸರಕಾರ ಇವರೊಂದಿಗೆ ಚರ್ಚಿಸುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ (ಮಧ್ಯದಲ್ಲಿ) ಮತ್ತು ಸದ್ಗುರು ನೀಲೇಶ ಸಿಂಗಬಾಳ (ನಿಂತಿರುವವರು)

೫ . ಕರಾಡ, ಸಾತಾರಾದಿಂದ ಬಂದಿರುವ ಶ್ರೀಶಿವಪ್ರತಿಷ್ಠಾನ, ಹಿಂದೂಸ್ಥಾನದ ಕಾರ್ಯಕರ್ತ ಶ್ರೀ. ಸಚಿನ ಪಾಟೀಲ ಮತ್ತು ಇತರ ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಭೇಟಿ ಮಾಡಲಾಯಿತು.

ಕರಾಡ, ಸಾತಾರಾದಿಂದ ಬಂದಿರುವ
ಶ್ರೀಶಿವಪ್ರತಿಷ್ಠಾನ, ಹಿಂದೂಸ್ಥಾನದ ಕಾರ್ಯಕರ್ತರಾದ ಶ್ರೀ. ಸಚಿನ ಪಾಟೀಲ ಮತ್ತು ಇತರ ಹಿಂದುತ್ವನಿಷ್ಠ ಕಾರ್ಯಕರ್ತರ ಭೇಟಿಯ ಸಮಯದಲ್ಲಿ !