ಸನಾತನ ಧರ್ಮದವರು ಸಂಘಟಿತರಾದರೇ ಧರ್ಮವು ಶಕ್ತಿಶಾಲಿ ಆಗಬಹುದು ! – ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾರಾಜ, ಶೃಂಗೇರಿ ಶಾರದಾ ಪೀಠ

ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾರಾಜ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ ಶೃಂಗೇರಿಯ ದಕ್ಷಿಣಾಮ್ನಯ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾರಾಜರು ಆಶೀರ್ವಚನ ಸಂದೇಶ ಕಳುಹಿಸಿದ್ದಾರೆ.

ಈ ಸಂದೇಶದಲ್ಲಿ ಅವರು, ‘ಸನಾತನ ಧರ್ಮ ಸರ್ವಶ್ರೇಷ್ಠವಾಗಿದ್ದು, ಅದರ ಜ್ಞಾನವನ್ನು ಪಡೆದುಕೊಳ್ಳಬೇಕು ಹಾಗೂ ಸನಾತನ ಧರ್ಮದ ರಕ್ಷಣೆಗೆ ಎಲ್ಲರೂ ಸಂಘಟಿತರಾಗಬೇಕು’, ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರು ನೀಡಿದ ಸಂದೇಶವನ್ನು ಸದ್ಗುರು ಸತ್ಯವಾನ ಕದಮ್ ಇವರು ಓದಿದರು. ‘ಸರ್ವಸ್ವದ ತ್ಯಾಗವೇ ಹಿಂದೂ ರಾಷ್ಟ್ರ ಸ್ಥಾಪನೆಗೆ ಬುನಾದಿಯಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಧರ್ಮಸಂಸ್ಥಾಪನೆಯ ಮಹತ್ಕಾರ್ಯವನ್ನು ಮಾಡಿ’, ಎಂದು ಅವರು ಸಂದೇಶದ ಮೂಲಕ ಕರೆ ನೀಡಿದರು.