ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆರ್ಟ್ ಆಫ್ ಲಿವಿಂಗ್’ ನ ಶ್ರೀ ಶ್ರೀ ರವಿಶಂಕರ್ ಇವರ ಸತ್ಕಾರ !

ಪ್ರಯಾಗರಾಜ ಕುಂಭಮೇಳ 2025

ಎಡದಿಂದ ಸುನಿಲ್ ಘನವಟ, ಸದ್ಗುರು ನೀಲೇಶ ಸಿಂಗಬಾಳ, ಗುರುದೇವ ಶ್ರೀ ಶ್ರೀ ರವಿಶಂಕರ, ಚೇತನ ರಾಜಹಂಸ

ಪ್ರಯಾಗರಾಜ, ಫೆಬ್ರುವರಿ ೬ (ವಾರ್ತೆ) : ‘ಆರ್ಟ್ ಆಫ್ ಲಿವಿಂಗ್’ ಈ ಆಧ್ಯಾತ್ಮಿಕ ಸಂಸ್ಥೆಯ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಇವರಿಗೆ ಮಹಾಕುಂಭ ಕ್ಷೇತ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನಿಲೇಶ ಸಿಂಗಬಾಳ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ್ ಸಮನ್ವಯಕ ಶ್ರೀ. ಸುನೀಲ ಘನವಟ, ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಭೇಟಿ ಮಾಡಿದರು. ಆ ಸಮಯದಲ್ಲಿ ಸಮಿತಿಯ ವತಿಯಿಂದ ಪುಷ್ಪಹಾರ ಹಾಕಿ ಶಾಲು ನೀಡಿ ಗುರುದೇವ ಶ್ರೀ ಶ್ರೀ ರವಿಶಂಕರ ಇವರನ್ನು ಗೌರವಿಸಿದರು.

ಸದ್ಗುರು ನಿಲೇಶ ಸಿಂಗಬಾಳ ಇವರು ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಬಗ್ಗೆ ಗುರುದೇವ ಶ್ರೀ ಶ್ರೀ ರವಿಶಂಕರ ಇವರಿಗೆ ಮಾಹಿತಿ ನೀಡಿದರು. ಗುರುದೇವ ಶ್ರೀ ಶ್ರೀ ರವೀಶಂಕರ ಇವರು ‘ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ, ಸಮಿತಿಯ ಕಾರ್ಯದ ಬಗ್ಗೆ ನನಗೆ ತಿಳಿದಿದೆ, ಎಂದು ಹೇಳಿ ಕಾರ್ಯಕ್ಕೆ ಆಶೀರ್ವಾದ ನೀಡಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಕೂಡ ಈ ಸಮಯದಲ್ಲಿ ಉಪಸ್ಥಿತರಿದ್ದರು. ಗುರುದೇವ ಶ್ರೀ ಶ್ರೀ ರವಿಶಂಕರ್ ಇವರು ಇವರೆಲ್ಲರಿಗೂ ಗೌರವ ವಸ್ತ್ರ ನೀಡಿ ಸತ್ಕರಿಸಿದರು.