Sanatan Sanstha Felicitated : ಗುಜರಾತ್‌ನ ‘ಕರ್ಣಾವತಿ ಸಿನರ್ಜಿ ಪರಿವಾರ್ ಗುಜರಾತ್’ ಸಂಸ್ಥೆಯಿಂದ ಉತ್ತಮ ಧರ್ಮಪ್ರಸಾರ ಕಾರ್ಯಕ್ಕಾಗಿ ಗುಜರಾತ್ ಮುಖ್ಯಮಂತ್ರಿಯಿಂದ ಸನಾತನ ಸಂಸ್ಥೆಗೆ ಸತ್ಕಾರ !

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರ ಹಸ್ತದಿಂದ ಸನಾತನ ಸಂಸ್ಥೆಯ ಶ್ರೀ. ಚಂದ್ರಶೇಖರ ಕದ್ರೆಕರ್ ಸನ್ಮಾನ ಸ್ವೀಕರಿಸಿದರು

ಪ್ರಶಸ್ತಿ ಸ್ವೀಕರಿಸುವಾಗ ಎಡದಿಂದ ಸನಾತನ ಸಂಸ್ಥೆಯ ಶ್ರೀ. ಚಂದ್ರಶೇಖರ ಕದ್ರೆಕರ್, ಪ.ಪೂ. ಶ್ರೀ ಬಾಲಯೋಗಿ ಉಮೇಶನಾಥಜಿ ಮಹಾರಾಜ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್

ಕರ್ಣಾವತಿ (ಗುಜರಾತ್) – ‘ಸಮನ್ವಯ ಪರಿವಾರ ಗುಜರಾತ್’ ವತಿಯಿಂದ ‘ಪೂರ್ವ ಶಂಕರಾಚಾರ್ಯ ಶ್ರೀ ಭಾರತಮಾತಾ ಮಂದಿರ, ಹರಿದ್ವಾರ’ದ ಎರಡನೇ ಸಂಸ್ಥಾಪಕ ಪ.ಪೂ. ಬ್ರಹ್ಮಲೀನ್ ಪದ್ಮಶ್ರೀ ಸ್ವಾಮಿ ಶ್ರೀ ಸತ್ಯಮಿತ್ರಾನಂದ ಗಿರಿಜಿ ಮಹಾರಾಜ್ ಅವರ 93 ನೇ ಜನ್ಮ ವಾರ್ಷಿಕೋತ್ಸವ ನಿಮಿತ್ತ ಸೆಪ್ಟೆಂಬರ್ 19 ರಂದು ಪ.ಪೂ. ವಾಲ್ಮೀಕಿ ಸಂತ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ, ಸನಾತನ ಸಂಸ್ಥೆಯ ಉತ್ತಮ ಧರ್ಮಪ್ರಸಾರ ಕಾರ್ಯಕ್ಕಾಗಿ ಭಾಜಪ ಆಡಳಿತದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರ ಹಸ್ತದಿಂದ ಸತ್ಕಾರ ಮಾಡಲಾಯಿತು. ಮುಖ್ಯಮಂತ್ರಿಗಳು ಸನಾತನ ಸಂಸ್ಥೆಯ ಗುಜರಾತ ಸಾಧಕ ಶ್ರೀ. ಚಂದ್ರಶೇಖರ ಕದ್ರೆಕರ ಅವರನ್ನು ಶಾಲು ಹೊದಿಸಿ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.

ಈ ಸಮ್ಮೇಳನದಲ್ಲಿ ಆಧ್ಯಾತ್ಮ, ಧರ್ಮ ಮತ್ತು ರಾಷ್ಟ್ರದ ಆಧಾರದ ಮೇಲೆ ರಾಷ್ಟ್ರ ಸೇವೆ ಮಾಡುತ್ತಿರುವ ಸೇವಾ ಸಂಸ್ಥೆಗಳನ್ನು ಸನ್ಮಾನಿಸಲಾಯಿತು, ಜೊತೆಗೆ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದಂತೆ ಸಂತರು ಮತ್ತು ಅತಿಥಿಗಳಿಂದ ಮಾರ್ಗದರ್ಶನ ನೀಡಲಾಯಿತು. ಸಮ್ಮೇಳನದ ಆರಂಭದಲ್ಲಿ ಸಂತರು ಹಾಗೂ ಗಣ್ಯರು ದೀಪ ಬೆಳಗಿಸಿ,ಶ್ಲೋಕಗಳೊಂದಿಗೆ ಸಭೆ ಆರಂಭವಾಯಿತು. ಆ ನಂತರ ಗುಜರಾತ್ ಮುಖ್ಯಮಂತ್ರಿ ಶ್ರೀ. ಭೂಪೇಂದ್ರಭಾಯಿ ಪಟೇಲ್ ಅವರ ಹಸ್ತದಿಂದ ರಾಷ್ಟ್ರ ಮತ್ತು ಧರ್ಮಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯ ಮಾಡುತ್ತಿರುವ ಸಂಸ್ಥೆಗಳನ್ನು ಸನ್ಮಾನಿಸಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಮಾತನಾಡಿ, ‘ಸಾಧು-ಸಂತರು ಸನಾತನ ಚಿಂತನೆಗಳಿಂದಲೇ ಧರ್ಮಚೇತನ ಜಾಗೃತವಾಗಿ ರಾಷ್ಟ್ರ ನಿರ್ಮಾಣದ ಕಾರ್ಯ ನಡೆಯಲಿದೆ’ ಎಂದರು. ಸಂತರ ಆಶೀರ್ವಾದದಿಂದ ಭಾರತ ಧರ್ಮ ಶಕ್ತಿ ಸೃಷ್ಟಿಸಿ ಅಭಿವೃದ್ಧಿ ಹೊಂದಿದ ದೇಶವಾಗಲಿದೆ.” ಎಂದು ಹೇಳಿದರು.

ಪ.ಪೂ. ಬಾಲಯೋಗಿ ಮಹಾರಾಜರು ಮಾರ್ಗದರ್ಶನ ನೀಡುತ್ತಾ, “ಆಧ್ಯಾತ್ಮಿಕ ಶಕ್ತಿಯಿಂದ ದೇಶದ ಉನ್ನತಿ ಆಗುತ್ತದೆ ಮತ್ತು ಭಾರತವು ವಿಶ್ವಗುರು ಸ್ಥಾನಮಾನವನ್ನು ಪಡೆಯುತ್ತದೆ; ಹಾಗಾಗಿ ನಮಗೆ ಧರ್ಮದ ಜತೆಗೆ ದೇಶ ಸೇವೆಯನ್ನೂ ಮಾಡಬೇಕು.” ಎಂದು ಹೇಳಿದರು. ಈ ಸಮಯದಲ್ಲಿ ಬಾಲಯೋಗಿ ಉಮೇಶ ನಾಥಜಿ ಮಹಾರಾಜ(ಪೀಠಾಧಿಶ್ವರ ಶ್ರೀ ಕ್ಷೇತ್ರ ವಾಲ್ಮಿಕ ಧಾಮ್, ಉಜ್ಜೈನಿ ಹಾಗೂ ರಾಜ್ಯಸಭಾ ಸದಸ್ಯ) ಪ.ಪೂ. ನಿಖಿಲೇಶ್ವರಾನಂದಜಿ ಮಹಾರಾಜ್ (ಪೀಠಾಧೀಶ್ವರ ಶ್ರೀ ರಾಮಕೃಷ್ಣ ಆಶ್ರಮ, ರಾಜಕೋಟ್), ಡಾ. ಜಯಂತಿಭಾಯಿ ಭದೇಶಿಯ (ರಾ.ಸ್ವ.ಸಂಘ), ಶ್ರೀ. ಅಶ್ವಿನಭಾಯಿ ಜಾನಿ (ಗಾಯತ್ರಿ ಪರಿವಾರ), ಶಾಸಕಿ ಶ್ರೀಮತಿ ದರ್ಶನಾಬೆನ ವಘೇಲಾ ಮತ್ತು ‘ವಾಲ್ಮೀಕಿ ಸಮಾಜ ಗುಜರಾತ್’ನ 161 ಸಂತರು ಉಪಸ್ಥಿತರಿದ್ದರು.