Sanatan Ashram Ramnathi : ಸನಾತನ ಆಶ್ರಮವನ್ನು ನೋಡಿದಾಗ, ನಿಜವಾದ ಅರ್ಥದಲ್ಲಿ ಗೋವಾ ದರ್ಶನವಾಯಿತು ! – ಹಿರಿಯ ಕೀರ್ತನಕಾರ ಹ.ಭ.ಪ. ಬಂಡಾತಾತ್ಯಾ ಕರಡಕರ್

ಹ.ಭ.ಪ. ಬಂಡಾತಾತ್ಯಾ ಕರಾಡಕರ್ ಅವರನ್ನು ಸನ್ಮಾನಿಸುತ್ತಿರುವಾಗ ಪೂ. ಪೃಥ್ವಿರಾಜ ಹಜಾರೆ, ಜೊತೆಗೆ ಶ್ರೀ. ದೀಪಕ ಜಾಧವ್

ಅಮಾನತಿ (ಗೋವಾ) – ಸನಾತನದ ಕಾರ್ಯವು ತುಂಬಾ ಒಳ್ಳೆಯದಿದೆ. ಈ ಕಾರ್ಯ ಹಿಂದೆ ಬಹಳ ದೂರದಿಂದ ನೋಡುತ್ತಿದ್ದೆ. ಆಶ್ರಮವು ಶಿಸ್ತುಬದ್ಧವಾಗಿದೆ ಮತ್ತು ಬಹಳಷ್ಟು ಕಲಿಯಲು ಸಿಕ್ಕಿತು. ಆಶ್ರಮದಲ್ಲಿ ಕಲಿತದ್ದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ. ಇಲ್ಲಿಗೆ ಬಂದು ಸಾರ್ಥಕವಾಯಿತು. ಗೋವಾದ ದೇವಸ್ಥಾನಗಳನ್ನು ನೋಡುತ್ತಾ ನೋಡುತ್ತಾ ಸನಾತನ ಆಶ್ರಮವನ್ನು ನೋಡಿದಾಗ ನನಗೆ ನಿಜವಾದ ಗೋವಾ ದರ್ಶನವಾಯಿತು.

1. ಹ.ಭ.ಪ. ಬಂಡಾತಾತ್ಯಾ ಕರಾಡಕರ್ ಇವರಿಗೆ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಕುರಿತು ಮಾಹಿತಿ ತಿಳಿಸುವಾಗ ೨. ಶ್ರೀ. ಅವಿನಾಶ ಜಾಧವ್ ಜೊತೆಗೆ 3. ಶ್ರೀ. ರಾಜೇಶ್ ಘಾಡಗೆ ಮತ್ತು 4. ಸನಾತನದ ಸಾಧಕ ಶ್ರೀ. ಅನಂತ ಪಾಟೀಲ್

ಆಶ್ರಮದಲ್ಲಿ ಕಲಿತದ್ದನ್ನು ಮುಂದೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ. ಎಂದು ವಾರಕರಿ ಸಂಪ್ರದಾಯದ ಹಿರಿಯ ಕೀರ್ತನಕಾರ ಮತ್ತು ಅರ್ಧವ್ಯೂ ಹ.ಭ.ಪ. ಬಂಡಾತಾತ್ಯಾ ಇವರು ಉದ್ಘರಿಸಿದರು. ಅವರು 24 ರಿಂದ 30 ರವರೆಗೆ ಗೋವಾದ ರಾಮನಾಥಿಯ ವಿದ್ಯಾಧಿರಾಜ್ ಸಭಾಂಗಣದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಗೋವಾಕ್ಕೆ ಬಂದಿದ್ದರು. ಜೂನ್ 24ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. ಪೃಥ್ವಿರಾಜ್ ಹಜಾರೆ ಇವರು ಅವರರಿಗೆ ಶಾಲು ಹೊದಿಸಿ, ಶ್ರೀಫಲ ನೀಡಿ ಗೌರವಿಸಿದರು.