ಭಾರತ ಈಗ ‘ಹಿಂದೂ ರಾಷ್ಟ್ರ’ ಆಗುವುದು ಖಚಿತ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಪ.ಪೂ. ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವ

ಆಳಂದಿ (ಪುಣೆ ಜಿಲ್ಲೆ), ಫೆಬ್ರವರಿ 8 (ಸುದ್ದಿ.) – ಆಳಂದಿಯಲ್ಲಿ, ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ದರ್ಶನ ಮಾಡುವ ಭಾಗ್ಯ ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವದ ಸಂದರ್ಭದಲ್ಲಿ ನನಗೆ ಸಿಕ್ಕಿತು. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದಲ್ಲಿ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು. ಇದರಲ್ಲಿ ರಾಜಮಾತಾ ಜಿಜಾವು ಪ್ರಮುಖ ಪಾತ್ರ ವಹಿಸಿದ್ದರು. ಪ.ಪೂ. ಗೋವಿಂದದೇವ ಗಿರಿ ಮಹಾರಾಜರ ಮಾರ್ಗದರ್ಶನದಲ್ಲಿ ರಾಮಲಲಾ ಅಯೋಧ್ಯೆಯಲ್ಲಿ ವಿರಾಜಮಾನರಾದರು. ಆದ್ದರಿಂದ ಭಾರತವು ತ್ರೇತಾಯುಗದಲ್ಲಿ ವಾಸಿಸುತ್ತಿದೆ. ಈಗ ಭಾರತ ಹಿಂದೂ ರಾಷ್ಟ್ರವಾಗುವುದು ನಿಶ್ಚಿತ ! ಇಂದು ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ಪುಣ್ಯಭೂಮಿಯಲ್ಲಿ ಕಥಾ ಮಾಡುವ ಸಂಕಲ್ಪ ಮಾಡುತ್ತಿದ್ದೇನೆ ಎಂದು ಬಾಗೇಶ್ವರ ಧಾಮ ಪೀಠದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಪ್ರತಿಪಾದಿಸಿದರು. ಪ.ಪೂ. ಗೋವಿಂದದೇವ ಗಿರಿ ಮಹಾರಾಜರ ಅಮೃತ ಮಹೋತ್ಸವದ ನಿಮಿತ್ತ ಫೆ.4ರಿಂದ 11ರವರೆಗೆ ಶ್ರೀ ಕ್ಷೇತ್ರ ಆಳಂದಿಯಲ್ಲಿ ‘ಗೀತಾ ಭಕ್ತಿ ಮಹೋತ್ಸವ’ ಆಯೋಜಿಸಲಾಗಿದೆ. ಈ ಮಹೋತ್ಸವದ ಐದನೇ ದಿನ ಅಂದರೆ ಫೆಬ್ರವರಿ 8 ರಂದು ಭಗವತ್ ಕಥಾ ಸಮಯದಲ್ಲಿ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಆಗಮಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಸನಾತನ ಸಂಸ್ಥೆಯ ವತಿಯಿಂದ ಪ.ಪೂ. ಗೋವಿಂದದೇವ ಗಿರಿ ಮಹಾರಾಜರ ಸನ್ಮಾನ !

ಪ.ಪೂ. ಗೋವಿಂದದೇವ ಗಿರಿ ಮಹಾರಾಜರಿಗೆ ಶ್ರೀರಾಮನ ಭಾವಚಿತ್ರವನ್ನು ನೀಡುತ್ತಿರುವ ಸನಾತನ ಸಂಸ್ಥೆಯ ಪ್ರಾ. ವಿಠ್ಠಲ್ ಜಾಧವ್

ಈ ಮಹೋತ್ಸವದ ಐದನೇ ದಿನ ಅಂದರೆ ಫೆಬ್ರವರಿ 8ರ ಗುರುವಾರದಂದು ಸನಾತನ ಸಂಸ್ಥೆಯ ವತಿಯಿಂದ ಪ.ಪೂ. ಗೋವಿಂದದೇವ ಗಿರಿ ಮಹಾರಾಜರನ್ನು ಸನ್ಮಾನಿಸಲಾಯಿತು. ಸನಾತನ ಸಂಸ್ಥೆಯ ಸಾಧಕ ಪ್ರಾ. ವಿಠ್ಠಲ್ ಜಾಧವ್ ಅವರಿಂದ ಗೋವಿಂದದೇವ ಗಿರಿ ಮಹಾರಾಜರಿಗೆ ಮಾಲಾರ್ಪಣೆ ಮಾಡಿ ಶ್ರೀರಾಮನ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು.