ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಅವರ ‘ರಥೋತ್ಸವವನ್ನು ಆಚರಿಸುವುದರ ಸಂದರ್ಭದಲ್ಲಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿರುವ ಮಾರ್ಗದರ್ಶನ !

ಗುರುದೇವರ ರಥೋತ್ಸವದಲ್ಲಿ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಆಧ್ಯಾತ್ಮಿಕ ಆಸನದ ಎದುರಿಗೆ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಎಡಬದಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಆಸನಸ್ಥರಾಗಬೇಕು.

‘ಗುರುಗಾಥಾ ಸತ್ಸಂಗ’ ಸಮಾರಂಭದಲ್ಲಿ ಶ್ರೀಸತ್‌ಶಕ್ತಿ(ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಸಾಧನೆಯನ್ನು ಮಾಡುತ್ತಿರುವಾಗ ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ಮನೋಲಯದ ಕಡೆಗೆ ಕರೆದುಕೊಂಡು ಹೋಗುತ್ತಿರುತ್ತದೆ; ಆದರೆ ಪ್ರಸಂಗಗಳ ಕಡೆಗೆ ಬಹಿರ್ಮುಖತೆಯಿಂದ ನೋಡಿ ನಾವು ಮನೋಲಯದ ಪ್ರಕ್ರಿಯೆಯನ್ನು ತಡೆಯುತ್ತೇವೆ.

ಸಾಧಕರೇ, ದಾಸ್ಯಭಾವದ ಪ್ರತೀಕವಾದ ರಾಮಭಕ್ತ ಹನುಮಂತನಂತೆ ಆಂತರ್ಯದಲ್ಲಿ ಸೇವಕಭಾವವನ್ನು ನಿರ್ಮಿಸಿ ತನ್ನ ಅಹಂನ ನಿರ್ಮೂಲನೆಗೆ ಪ್ರಯತ್ನಿಸಿ !

ಇದರಿಂದಾಗಿ ಅವರಲ್ಲಿ ನಮ್ರತೆ, ಲೀನತೆ, ಗುರುನಿಷ್ಠೆ, ಗುರುಗಳ ಮನಸ್ಸನ್ನು ಗೆಲ್ಲಲು ಆಂತರಿಕ ತಳಮಳ ಮುಂತಾದ ಗುಣಗಳು ಹೆಚ್ಚಾಗಿ ಅಹಂ ನಿರ್ಮೂಲನೆಯಾಗುವುದು ಮತ್ತು ಸಾಧಕರಿಗಾಗಿ ಈಶ್ವರಪ್ರಾಪ್ತಿಯ ಮಾರ್ಗವು ಸುಗಮವಾಗುವುದು !

ಭಕ್ತಿಮಯ ವಾತಾವರಣದಲ್ಲಿ ನೆರವೇರಿದ ಶ್ರೀವಿಷ್ಣು ರೂಪದಲ್ಲಿನ ಪರಾತ್ಪರ ಗುರು ಡಾ. ಆಠವಲೆ ಇವರ ಚೈತನ್ಯಮಯ ‘ರಥೋತ್ಸವ’ !

ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವವು ಸಾಧಕರಿಗಾಗಿ ಆನಂದದ ಹಾಗೂ ಭಕ್ತಿಭಾವದ ಹಬ್ಬವೇ ಆಗಿರುತ್ತದೆ ! ವೈಶಾಖ ಕೃಷ್ಣ ಸಪ್ತಮಿ, ಅಂದರೆ ಮೇ ೨೨, ೨೦೨೨ ರ ಮಂಗಲಕರ ದಿನದಂದು ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವವನ್ನು ಆಚರಿಸಲಾಯಿತು.

ಆಪತ್ಕಾಲವೂ ಭಗವಂತನ ಒಂದು ಲೀಲೆಯಾಗಿದ್ದು ಪರಾತ್ಪರ ಗುರು ಡಾಕ್ಟರರು, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಶರಣಾಗಿ ಆಪತ್ಕಾಲವನ್ನು ಎದುರಿಸೋಣ !

ಇಂತಹ ಆಪತ್ಕಾಲದಲ್ಲಿ ‘ನಾನು ಜೀವಂತ ಇರುವನೇ ?’, ಎಂಬ ವಿಚಾರವು ಎಲ್ಲರ ಮನಸ್ಸಿನಲ್ಲಿರುವಾಗ ‘ಶ್ರದ್ಧೆ’ ಮತ್ತು ‘ಶರಣಾಗತಿ’ ಇವೇ ನಮ್ಮ ಸ್ನೇಹಿತರಾಗಿರುವರು. ಆಪತ್ಕಾಲದಲ್ಲಿ ಈಶ್ವರನು ಸನಾತನದ ಮೂವರು ಗುರುಗಳ ಮಾಧ್ಯಮದಿಂದ ಸಾಧಕರ ಪರೀಕ್ಷೆಯನ್ನು ತೆಗೆದುಕೊಳ್ಳುವನು.

ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾದ ಛಾಯಾಚಿತ್ರಗಳ ಮಾಧ್ಯಮದಿಂದ ಈಶ್ವರನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಏಕರೂಪತೆಯ ಬಗ್ಗೆ ನೀಡಿದ ಅನುಭೂತಿ !

ಇದುವರೆಗೆ ಆದಿಶಕ್ತಿಯ ಅಂಶಾವತಾರವಾಗಿರುವ ಕಾರ್ತಿಕಪುತ್ರಿ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಮತ್ತು ಉತ್ತರಾಪುತ್ರಿ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ) ಇವರು ಪ್ರತಿಯೊಂದು ಜನ್ಮದಲ್ಲಿ ಒಟ್ಟಿಗೆ ಜನ್ಮ ತಾಳಿದ್ದಾರೆ ಮತ್ತು ಈ ಮುಂದೆಯೂ ಅವರು ಶ್ರೀ ಗುರುಗಳ ಕಾರ್ಯಕ್ಕಾಗಿ ಮತ್ತೊಮ್ಮೆ ಜನ್ಮ ತಾಳುವವರಿದ್ದಾರೆ

ಸಾಧಕರೇ, ‘ಸತತ ನಕಾರಾತ್ಮಕ ವಿಚಾರ ಮಾಡಿದರೆ ಮತ್ತು ಆ ಬಗ್ಗೆ ಇತರರೊಂದಿಗೆ ಪುನಃ ಪುನಃ ಮಾತನಾಡಿದರೆ ಮನಸ್ಸಿನ ಮೇಲೆ ನಕಾರಾತ್ಮಕತೆಯ ಸಂಸ್ಕಾರವಾಗುತ್ತದೆ’, ಇದನ್ನು ಗಮನದಲ್ಲಿಟ್ಟು ಯೋಗ್ಯ ಮಾರ್ಗದರ್ಶನ ಪಡೆದು ಮತ್ತು ಸ್ವಯಂಸೂಚನೆ ನೀಡಿ !

ಇಂತಹ ಸಮಯದಲ್ಲಿ ಸಾಧಕರ ಮನಸ್ಸು ಈ ವಸ್ತುಸ್ಥಿತಿಯನ್ನು (ಸತ್ಯವನ್ನು) ಸ್ವೀಕರಿಸುವುದಿಲ್ಲ. ಅದನ್ನು ಸ್ವೀಕರಿಸಲು ಸಾಧ್ಯವಾಗಬೇಕೆಂದು ಹಾಗೂ ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸಲು ಸಾಧಕರು ಈ ಮುಂದಿನಂತೆ ಸ್ವಯಂಸೂಚನೆಗಳನ್ನು ನೀಡಬೇಕು.

ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ತಮ್ಮ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆದು ಅದರಿಂದ ಅಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆಯಬೇಕು !

ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳಾಗಬಹುದು, ಈಶ್ವರಿ ಚೈತನ್ಯವು ಗ್ರಹಣವಾಗಿ ಸಹಸ್ರಾರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುವುದರಿಂದ ಕುಂಡಲಿನಿಚಕ್ರವು ಜಾಗೃತವಾಗಲು ಸಹಾಯವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ‘ತೇಜಸ್ವೀ ವಿಚಾರ’ವನ್ನು ‘ಸನಾತನ ಪ್ರಭಾತ’ದಲ್ಲಿ ಓದಿ ನನಗೆ ‘ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸಬೇಕು’ ಎಂಬುವುದರ ಮಾರ್ಗದರ್ಶನ ಸಿಗುತ್ತದೆ ! – ಸೌ. ಸರಸ್ವತಿ ಶಂಖವಾಳಕರ, (ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ ಪರ್ರೀಕರ ಇವರ ಸಹೋದರಿ)

‘ದೈನಿಕ ‘ಸನಾತನ ಪ್ರಭಾತ’ ಇದು ನನಗೆ ಎಲ್ಲಕ್ಕಿಂತ ನೆಚ್ಚಿನ ದೈನಿಕವಾಗಿದೆ ಮತ್ತು ನಾನು ಪ್ರತಿದಿನ ಅದನ್ನು ಓದುತ್ತೇನೆ. ದೈನಿಕದ ಮೊದಲನೇ ಪುಟದಲ್ಲಿನ ಗುರುವರ್ಯರ (ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ) ‘ತೇಜಸ್ವೀ ವಿಚಾರ’ ಈ ಮಾಲಿಕೆಯನ್ನು ನಾನು ಮೊದಲು ಓದುತ್ತೇನೆ.

ಪರಾತ್ಪರ ಗುರು ಡಾ. ಆಠವಲೆಯವರು ರಚಿಸಿದ ಸನಾತನದ ಜ್ಞಾನದಾಯಕ ಮತ್ತು ಚೈತನ್ಯದಾಯಕ ಗ್ರಂಥಗಳ ಸ್ತವನ !

ಈ ಗ್ರಂಥಗಳನ್ನು ಓದಿದ ನಂತರ, ಅನೇಕರು ತಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಅನುಭವಿಸಿದ್ದಾರೆ. ಈ ಗ್ರಂಥಗಳ ಮೂಲಕ, ನಮ್ಮ ಜೀವನಕ್ಕೆ ಗುರುಭಕ್ತಿ ಮತ್ತು ಈಶ್ವರಭಕ್ತಿಗಳ ಸ್ಪರ್ಶಶಿಲೆಯ ಸ್ಪರ್ಶವಾಗುತ್ತದೆ ಮತ್ತು ಅವು ನಮ್ಮ ಜೀವನವನ್ನು ಬೆಳಗಿಸುತ್ತವೆ.