ಸಾಧಕರೇ, ದಾಸ್ಯಭಾವದ ಪ್ರತೀಕವಾದ ರಾಮಭಕ್ತ ಹನುಮಂತನಂತೆ ಆಂತರ್ಯದಲ್ಲಿ ಸೇವಕಭಾವವನ್ನು ನಿರ್ಮಿಸಿ ತನ್ನ ಅಹಂನ ನಿರ್ಮೂಲನೆಗೆ ಪ್ರಯತ್ನಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಅಧ್ಯಾತ್ಮದಲ್ಲಿ ಸೇವಕಭಾವಕ್ಕೆ ಅಸಾಧಾರಣ ಮಹತ್ವವಿದೆ ಹನುಮಂತನು ಯುಗಾನುಯುಗಗಳಲ್ಲಿ ದಾಸ್ಯಭಕ್ತಿಯ ಸರ್ವೋತ್ಕೃಷ್ಟ ಆದರ್ಶವನ್ನು ಎಲ್ಲರ ಮುಂದೆ ಇಟ್ಟಿದ್ದಾನೆ. ಅವನು ತನ್ನ ಪ್ರಭುವಿಗಾಗಿ (ಶ್ರೀರಾಮನಿಗಾಗಿ) ಪ್ರಾಣವನ್ನು ಅರ್ಪಿಸಲು ಸದಾ ಸಿದ್ಧನಾಗಿರುತ್ತಿದ್ದನು. ಶ್ರೀರಾಮನ ಸೇವೆಯ ಮುಂದೆ ಅವನಿಗೆ ಎಲ್ಲವೂ ಕ್ಷುಲ್ಲಕವೆನಿಸುತ್ತಿತ್ತು. ಎಲ್ಲ ಸಾಧಕರು ತಮ್ಮಲ್ಲಿ ಹನುಮಂತನಂತೆ ಸೇವಕಭಾವ (ದಾಸ್ಯಭಾವ) ವನ್ನು ನಿರ್ಮಾಣ ಮಾಡಲು ಪ್ರಯತ್ನಿಸಬೇಕು. ಇದರಿಂದಾಗಿ ಅವರಲ್ಲಿ ನಮ್ರತೆ, ಲೀನತೆ, ಗುರುನಿಷ್ಠೆ, ಗುರುಗಳ ಮನಸ್ಸನ್ನು ಗೆಲ್ಲಲು ಆಂತರಿಕ ತಳಮಳ ಮುಂತಾದ ಗುಣಗಳು ಹೆಚ್ಚಾಗಿ ಅಹಂ ನಿರ್ಮೂಲನೆಯಾಗುವುದು ಮತ್ತು ಸಾಧಕರಿಗಾಗಿ ಈಶ್ವರಪ್ರಾಪ್ತಿಯ ಮಾರ್ಗವು ಸುಗಮವಾಗುವುದು !

ಸಾಧಕರೇ, ಪ್ರಭು ಶ್ರೀರಾಮಚಂದ್ರನ ರಾಮ ರಾಜ್ಯದ ಸ್ಥಾಪನೆಯ ಕಾರ್ಯದೊಂದಿಗೆ ಸಂಪೂರ್ಣ ಏಕರೂಪವಾಗಿರುವ ಹನುಮಂತನ ಆದರ್ಶವನ್ನು ಕಣ್ಮುಂದೆ ಇಟ್ಟುಕೊಳ್ಳಿ ಮತ್ತು ಪರಾತ್ಪರ ಗುರು ಡಾಕ್ಟರರ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಳ್ಳಿರಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೫.೨೦೨೨)

ಆಸ್ತಿಕರು ಹೆಚ್ಚು ಕಾಲ ಬದುಕುತ್ತಾರೆ – ಅಮೇರಿಕ ಸಂಶೋಧನೆ

‘ಆಸ್ತಿಕರು ನಾಸ್ತಿಕರಿಗಿಂತ ಸರಾಸರಿ ೪ ವರ್ಷ ಹೆಚ್ಚು ಕಾಲ ಬದುಕುತ್ತಾರೆ, ಎಂದು ಅಮೇರಿಕದ ‘ಸೋಶಿಯಲ್ ಸೈಕಾಲಜಿಕಲ್ ಆಂಡ್ ಪರ್ಸನಾಲಿಟಿ ಸೈನ್ಸ್’ ನಿಯತಕಾಲಿಕೆಯಲ್ಲಿ ಸಂಶೋಧನೆಯು ಪ್ರಕಟವಾಗಿದೆ.