‘ಮನುಷ್ಯನೆಂದ ಮೇಲೆ ‘ನಾನು’ ಬಂದೇ ಬರುತ್ತದೆ; ಆದರೆ ‘ನಾನು ಅಂದರೆ ಯಾರು ?’, ಎಂಬುದು ಮಾತ್ರ ಯಾರಿಗೂ ತಿಳಿಯುವುದಿಲ್ಲ. ಈಗ ಪ್ರಾರಂಭವಾಗಿರುವ ಆಪತ್ಕಾಲದಲ್ಲಿ ಸಾಧಕರಿಗೆ ಅನೇಕ ಸ್ತರಗಳಲ್ಲಿ ಹೋರಾಡಬೇಕಾಗುತ್ತಿದೆ. ಕೆಲವರಿಗೆ ಕೌಟುಂಬಿಕ, ಕೆಲವರಿಗೆ ಸಾಮಾಜಿಕ, ಕೆಲವರಿಗೆ ಆರ್ಥಿಕ, ಕೆಲವರಿಗೆ ಶಾರೀರಿಕ, ಕೆಲವರಿಗೆ ಮಾನಸಿಕವಾಗಿದ್ದರೆ, ಇನ್ನೂ ಕೆಲವರಿಗೆ ಬೌದ್ಧಿಕ ! ಆಪತ್ಕಾಲವೆಂದರೆ ಭಗವಂತನು ಪರೀಕ್ಷೆಯನ್ನು ಮಾಡುವ ಕಾಲವಾಗಿದೆ. ಈ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಬೇಕಾಗಿದೆ ಮತ್ತು ಶ್ರೀಮನ್ನಾರಾಯಣಸ್ವರೂಪ ಗುರುದೇವರ ಕೃಪೆಗೆ ಪಾತ್ರರಾಗಬೇಕಾಗಿದೆ. ನಮಗೆ ಶ್ರೀರಾಮನ ವಾನರರು ಮತ್ತು ಶ್ರೀಕೃಷ್ಣನ ಪಾಂಡವರಾಗಬೇಕಾಗಿದೆ. ಆಪತ್ಕಾಲವು ನಮ್ಮೆಲ್ಲರಿಗಾಗಿ ಒಂದು ಯುದ್ಧವೇ ಆಗಿದೆ. ಅದನ್ನು ಎದುರಿಸುವುದೂ, ಸಾಧನೆಯೇ ಆಗಿದೆ. ಶ್ರೀವಿಷ್ಣುವಿನ ಈ ಪರೀಕ್ಷೆಯು ನಮ್ಮ ಪ್ರಾರಬ್ಧ ಮತ್ತು ಸಂಚಿತ ಇವುಗಳ ಪರೀಕ್ಷೆಯಾಗಿದ್ದು, ಇದು ನಮ್ಮಲ್ಲಿರುವ ಗುರುನಿಷ್ಠೆಯ ಮತ್ತು ಶ್ರದ್ಧೆಯ ಪರೀಕ್ಷೆಯೇ ಆಗಿದೆ. ಈ ಪರೀಕ್ಷೆಯು ಎಷ್ಟು ಕಠಿಣವಾಗಿದೆಯೋ, ಅಷ್ಟೇ ಈ ಪರೀಕ್ಷೆಯ ಅಂತ್ಯವು ಅತ್ಯಂತ ಉತ್ತಮವಾಗಿರಲಿಕ್ಕಿದೆ; ಆದುದರಿಂದ ‘ಸನಾತನದ ಮೂವರು ಗುರುಗಳು ಮತ್ತು ಸಾಧಕರು ಇವರ ನಡುವಿನ ಸಂಬಂಧವೇನು ?’, ಎಂಬುದನ್ನು ತಿಳಿದುಕೊಳ್ಳೋಣ.
೧. ‘ಶ್ರೀವಿಷ್ಣುವಿನ ಲೀಲೆಯನ್ನು ತಿಳಿದುಕೊಳ್ಳಬಲ್ಲವರು’, ಈ ಜಗತ್ತಿನಲ್ಲಿ ಯಾರೂ ಇಲ್ಲ !
ಚರಾಚರ ಸೃಷ್ಟಿಯ ಪಾಲಕನಾಗಿರುವ ವೈಕುಂಠಪತಿ ಶ್ರೀವಿಷ್ಣುವು ಶ್ರೀಕೃಷ್ಣಾವತಾರವನ್ನು ತಾಳಿದ್ದಾಗ ಅರ್ಜುನನಿಗೆ ಹೀಗೆಂದಿದ್ದರು.
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ |
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೨
ಅರ್ಥ : ನನ್ನ ಉತ್ಪತ್ತಿಯು ಅಂದರೆ ‘ಲೀಲೆಯಿಂದ ಪ್ರಕಟವಾಗುವುದು’, ದೇವರಿಗೂ ತಿಳಿಯದು, ಮಹರ್ಷಿಗಳಿಗೂ ತಿಳಿಯದು; ಏಕೆಂದರೆ ನಾನು ಎಲ್ಲ ರೀತಿಯಿಂದಲೂ ದೇವತೆಗಳ ಮತ್ತು ಮಹರ್ಷಿಗಳ ಆದಿಕಾರಣನಾಗಿದ್ದೇನೆ.
೧ ಅ. ಕಲಿಯುಗದಲ್ಲಿ ‘ಶ್ರೀವಿಷ್ಣುವಿನ ಅವತಾರವಾಗಿರುವ ಪರಾತ್ಪರ ಗುರು ಡಾಕ್ಟರರ ದೈವೀ ಕಾರ್ಯವನ್ನು ತಿಳಿದುಕೊಳ್ಳಬಲ್ಲವರು’, ಯಾರೂ ಇಲ್ಲ, ‘ಜಗತ್ತಿನಾದ್ಯಂತ ಭೀಕರ ಆಪತ್ಕಾಲ ಆರಂಭವಾಗುವುದೂ’ ಭಗವಂತನ ಲೀಲೆಯೇ ಆಗಿದೆ : ‘ಭಗವಂತನ ಲೀಲೆಯನ್ನು ಅರಿತುಕೊಳ್ಳಬಲ್ಲವರು, ಯಾರೂ ಇಲ್ಲ. ಅದೇ ರೀತಿ ಕಲಿಯುಗದಲ್ಲಿ ‘ಶ್ರೀವಿಷ್ಣುವಿನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ದೈವಿ ಕಾರ್ಯವನ್ನು ತಿಳಿದುಕೊಳ್ಳುವವರು’ ಕೂಡ ಯಾರೂ ಇಲ್ಲ. ದೇವ-ದೇವತೆಗಳು, ಋಷಿ-ಮುನಿಗಳು ಮತ್ತು ಭಗವದ್ಭಕ್ತ-ಸಂತರಿಗೆ ಇದು ಗೊತ್ತಿರುವುದರಿಂದ ಅವರು ‘ಭಗವಂತನ ಮುಂದಿನ ಲೀಲೆ ಏನಿರಬಹುದು ?’, ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸದೇ ಕೇವಲ ಅವನ ಲೀಲೆಯನ್ನು ಆನಂದದಿಂದ ಅನುಭವಿಸುತ್ತಿರುತ್ತಾರೆ ಮತ್ತು ಅದರ ಅನುಭೂತಿಯನ್ನು ಪಡೆಯುತ್ತಾರೆ. ‘ಸಂಪೂರ್ಣ ಜಗತ್ತಿನಲ್ಲಿ ಭೀಕರ ಆಪತ್ಕಾಲ ಆರಂಭವಾಗುವುದು’, ಇದು ಸಹ ಭಗವಂತನ ಒಂದು ಲೀಲೆಯೇ ಆಗಿದೆ.
೧ ಆ. ಸನಾತನದ ಪ್ರಾರಂಭದಿಂದ ಇಂದಿನ ತನಕ ಘಟಿಸಿದ ಎಲ್ಲ ಘಟನೆಗಳು ಮತ್ತು ಗುರುದೇವರು ಮಾಡಿಸಿಕೊಂಡ ಧರ್ಮಪ್ರಸಾರವೆಂದರೆ ಶ್ರೀಮನ್ನಾರಾಯಣನ ಲೀಲೆಯೇ ಆಗಿದೆ : ಸನಾತನದ ಕಾರ್ಯವು ಪ್ರಾರಂಭವಾಗಿ ಈಗ ೩೧ ವರ್ಷಗಳಾದವು. ಸನಾತನ ಸಂಸ್ಥೆಯ ಭಾರತದ ಪಶ್ಚಿಮ ಭಾಗದಲ್ಲಿ ಸ್ಥಾಪನೆಯಾಗುವುದು, ಗುರುದೇವರು ಒಬ್ಬೊಬ್ಬ ಸಾಧಕನನ್ನು ಹುಡುಕಿ ಅವರನ್ನು ಸಿದ್ಧಪಡಿಸುವುದು, ಕಾಲಕ್ಕನುಸಾರ ಮತ್ತು ಹಂತಹಂತವಾಗಿ ಸಾಧನೆಯನ್ನು ಕಲಿಸುವುದು, ಗ್ರಂಥಗಳನ್ನು ಬರೆಯುವುದು, ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳನ್ನು ಪ್ರಕಟಿಸುವುದು, ಊರೂರುಗಳಿಗೆ ಹೋಗಿ ಪ್ರವಚನ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುವುದು, ೧ ಸಾವಿರಕ್ಕಿಂತಲೂ ಹೆಚ್ಚು ಹಿಂದೂ ಧರ್ಮಜಾಗೃತಿ ಸಭೆಗಳನ್ನು ಆಯೋಜಿಸುವುದು, ಧರ್ಮಜಾಗೃತಿ ಅಭಿಯಾನವನ್ನು ನಡೆಸುವುದು, ಜಾಲತಾಣಗಳ ಮೂಲಕ ಪ್ರಸಾರ ಮಾಡುವುದು, ವಿದೇಶಗಳಲ್ಲಿ ಪ್ರಸಾರ ಮಾಡುವುದು, ಹಾಗೆಯೇ ಹಿಂದೂ ರಾಷ್ಟ್ರ ಅಧಿವೇಶನಗಳನ್ನು ಆಯೋಜಿಸುವುದು, ಇದೆಲ್ಲವೂ ಶ್ರೀಮನ್ನಾರಾಯಣನ ಲೀಲೆಯೇ ಆಗಿದೆ.
೨. ಭಗವಾನ ಶ್ರೀವಿಷ್ಣು ಮತ್ತು ಅವನ ಎರಡು ಶಕ್ತಿಗಳಾದ ‘ಶ್ರೀಚಿತ್‌ಶಕ್ತಿ’ ಮತ್ತು ‘ಶ್ರೀಸತ್‌ಶಕ್ತಿ’ ಅವರ ಕಾರ್ಯ !
೨ ಅ. ಗುರುದೇವರ ಅನುಸಂಧಾನವನ್ನು ಸಾಧಿಸಲು ಪ್ರತಿಯೊಬ್ಬರ ಅಂತರಾತ್ಮಕ್ಕಾದ ಈಶ್ವರೀ ಪ್ರೇರಣೆ, ಎಂದರೆ ‘ಶ್ರೀಚಿತ್‌ಶಕ್ತಿ’ ಮತ್ತು ಅಂತರಾತ್ಮದಲ್ಲಿ ಗುರುಗಳ ಬಗ್ಗೆ ಯಾವ ಶ್ರದ್ಧೆ ನಿರ್ಮಾಣವಾಯಿತೋ, ಅದೆಂದರೆ ‘ಶ್ರೀಸತ್‌ಶಕ್ತಿ’ ! : ಭಗವಾನ ಶ್ರೀವಿಷ್ಣುವಿನ ಶಕ್ತಿಯ ಇನ್ನೊಂದು ಹೆಸರೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ! ಈ ಇಬ್ಬರೂ ತತ್ತ್ವರೂಪದಲ್ಲಿನ ‘ಶ್ರೀಚಿತ್‌ಶಕ್ತಿ’ ಮತ್ತು ‘ಶ್ರೀಸತ್‌ಶಕ್ತಿ’ಯೇ ಆಗಿದ್ದಾರೆ. ನಾವೆಲ್ಲ ಸಾಧಕರು ಸಾಧನೆಯಲ್ಲಿ ಬಂದೆವು. ಸಾಧನೆಯಲ್ಲಿ ಬರಲು ಯಾವುದೋ ಒಂದು ನಿಮಿತ್ತದಿಂದ ನಾವು ಗುರುದೇವರೊಂದಿಗೆ ಜೋಡಿಸಲ್ಪಟ್ಟೆವು. ಗುರುದೇವರೊಂದಿಗೆ ಜೊತೆಗೂಡಲು, ನಮ್ಮ ಪ್ರತಿಯೊಬ್ಬರ ಅಂತರಾತ್ಮಕ್ಕಾದ ಈಶ್ವರೀ ಪ್ರೇರಣೆ, ಎಂದರೆ ‘ಶ್ರೀಚಿತ್‌ಶಕ್ತಿ’ ! ಗುರುದೇವರೊಂದಿಗೆ ಜೊತೆಗೂಡಿದ ನಂತರ ಅಲ್ಪಾವಧಿಯಲ್ಲಿ ನಮ್ಮ ಪ್ರತಿಯೊಬ್ಬರ ಅಂತರಾತ್ಮದಲ್ಲಿ ಗುರುದೇವರ ಬಗ್ಗೆ ಯಾವ ಶ್ರದ್ಧೆ ನಿರ್ಮಾಣವಾಯಿತೋ ಅದೆಂದರೆ ‘ಶ್ರೀಸತ್‌ಶಕ್ತಿ’ !
೨ ಅ. ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಹೋಗುವ ಪ್ರೇರಣೆ ಎಂದರೆ ‘ಶ್ರೀಚಿತ್‌ಶಕ್ತಿ’ ಮತ್ತು ಪ್ರವಚನವನ್ನು ಕೇಳಿ ಧರ್ಮದ ಬಗ್ಗೆ ಏನಾದರೂ ಮಾಡಬೇಕೆಂಬ ವಿಚಾರ ಮೂಡುವುದೋ ಅದುವೇ ‘ಶ್ರೀಸತ್‌ಶಕ್ತಿ’ ! : ನಾವು ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಇಂತಿಷ್ಟು ಸಾವಿರ ಜನರು ಬಂದರು. ಗುರುದೇವರು ಆ ಜನರಿಗೆ ಸಭೆಗೆ ಹೋಗಲು ಪ್ರೇರಣೆಯನ್ನು ನೀಡಿರುವುದರಿಂದ ಅವರು ಬಂದರು ಎಂದು ಹೇಳುತ್ತೇವೆ. ಆ ಪ್ರೇರಣೆ ಎಂದರೆ ಶ್ರೀಚಿತ್‌ಶಕ್ತಿ. ಆ ಪ್ರೇರಣೆಯಿಂದ ಬಂದಿರುವ ಜನರು ಅನೇಕ ಗಂಟೆಗಳ ವರೆಗೆ ಕುಳಿತುಕೊಂಡು ಪ್ರವಚನವನ್ನು ಕೇಳಿದರು ಮತ್ತು ಅವರಲ್ಲಿ ಧರ್ಮದ ಬಗ್ಗೆ ಏನಾದರೂ ಮಾಡುವ ವಿಚಾರ ಮೂಡಿತು ಆ ವಿಚಾರವೇ ಶ್ರೀಸತ್‌ಶಕ್ತಿ.
೨ ಇ. ಗುರುದೇವರು ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿ ಇವರ ಮಾಧ್ಯಮದಿಂದ ಸಮಾಜದಲ್ಲಿನ ಜಿಜ್ಞಾಸುಗಳಿಂದ ಸೇವೆಯನ್ನು ಮಾಡಿಸಿಕೊಳ್ಳುವುದು : ಸತ್ಸಂಗವಿರಲಿ ಅಥವಾ ಭಾವಸತ್ಸಂಗವಿರಲಿ, ಸಮಾಜದಲ್ಲಿನ ಹಿತಚಿಂತಕರಿರಲಿ ಅಥವಾ ಜಾಹೀರಾತುದಾರರಿರಲಿ, ನ್ಯಾಯಾಲಯಗಳಲ್ಲಿ ಹೋರಾಡುವಾಗ ನಮ್ಮ ಪಕ್ಷವನ್ನು ಮಂಡಿಸುವ ನ್ಯಾಯವಾದಿಗಳಾಗಿರಲಿ ಅಥವಾ ಧರ್ಮರಕ್ಷಣೆಗಾಗಿ ಕಾರ್ಯವನ್ನು ಮಾಡುವ ಧರ್ಮಸೇವಕರಾಗಿರಲಿ, ಇವರೆಲ್ಲರಿಂದ ಗುರುದೇವರು ಶ್ರೀಚಿತ್‌ಶಕ್ತಿ ಮತ್ತು ಶ್ರೀಸತ್‌ಶಕ್ತಿ ಇವರ ಮಾಧ್ಯಮದಿಂದ ಸೇವೆಯನ್ನು ಮಾಡಿಸಿಕೊಂಡರು. ನಾವೆಲ್ಲ ಸಾಧಕರು ಶ್ರೀಮನ್ನಾರಾಣಸ್ವರೂಪ ಗುರುದೇವರು, ಹಾಗೆಯೇ ಶ್ರೀಚಿತ್‌ಶಕ್ತಿ ಮತ್ತು ಶ್ರೀಸತ್‌ಶಕ್ತಿ ಇವರ ಮಾಧ್ಯಮವಾಗಿದ್ದೇವೆ. ನಿಜ ಹೇಳಬೇಕೆಂದರೆ ನಮಗೆ ತಿಳಿಯದೇ ಸನಾತನದ ಮೂವರು ಗುರುಗಳು ಎಲ್ಲ ಸಾಧಕರಿಂದ ಧರ್ಮಸಂಸ್ಥಾಪನೆಯ ಕಾರ್ಯವನ್ನು ಸಹಜವಾಗಿ ಮಾಡಿಸಿಕೊಂಡರು ಮತ್ತು ಇನ್ನು ಮುಂದೆಯೂ ಅವರು ಮಾಡಿಸಿಕೊಳ್ಳುವವರಿದ್ದಾರೆ.
೩. ‘ಆಪತ್ಕಾಲ ಬರುವುದು’, ಭಗವಂತನ ಲೀಲೆಯೇ ಆಗಿದೆ !
ಸದ್ಯ ಪೃಥ್ವಿಯ ಮೇಲೆ ಎಲ್ಲೆಡೆ ಭೀಕರ ಆಪತ್ಕಾಲ ಪ್ರಾರಂಭವಾಗಿದ್ದು ಈ ಆಪತ್ಕಾಲವು ಹಂತಹಂತವಾಗಿ ಹೆಚ್ಚಾಗುತ್ತಾ ಹೋಗಲಿದೆ. ಆಪತ್ಕಾಲವೂ ಭಗವಂತನ ಲೀಲೆಯೇ ಆಗಿದೆ. ‘ಆಪತ್ಕಾಲ ಬರುವುದಿದ್ದರೆ, ‘ನಾನು ಪಟ್ಟಣವನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕೋ ಬೇಡ ?’, ‘ನಾನು ಇದನ್ನು ಮಾಡಲಾ ಅಥವಾ ಅದನ್ನು ಮಾಡಲಾ ?’, ನಾನು ನನ್ನ ಮನಸ್ಸು ಹೇಳುವುದನ್ನು ಕೇಳಲೇ ಅಥವಾ ಸಂತರು ಹೇಳುವುದನ್ನು ಕೇಳಲೇ ?, ಈ ರೀತಿ ದ್ವಂದ್ವದ ಮನಃಸ್ಥಿತಿಯಂತೂ ಇರಲಿಕ್ಕಿದೆ. ಭಗವಾನ ಶ್ರೀವಿಷ್ಣುವು ತನ್ನ ಯೋಗಮಾಯೆಯಿಂದ ಸಾಧಕರ ಜೀವನದಲ್ಲಿ ಇಂತಹ ಅನೇಕ ಪ್ರಸಂಗಗಳನ್ನು ತಂದು ಅದರ ಮೂಲಕ ತನ್ನ ಭಕ್ತರಾಗಿರುವ ಸನಾತನದ ಸಾಧಕರ ಪರೀಕ್ಷೆ ಆಗಲಿಕ್ಕಿದೆ. ಇಂತಹ ಸಮಯದಲ್ಲಿ ಯಾವ ಸಾಧಕರು ಆಪತ್ಕಾಲಕ್ಕೆ ಭಯಪಡದೇ ಶ್ರೀವಿಷ್ಣುಸ್ವರೂಪ ಗುರುದೇವರ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮೇಲೆ ದೃಢ ಶ್ರದ್ಧೆಯನ್ನಿಟ್ಟು ಅವರು ಹೇಳಿದಂತೆ ಪ್ರತಿಯೊಂದು ಹೆಜ್ಜೆಯನ್ನಿಡುವರೋ, ಆ ಎಲ್ಲ ಸಾಧಕರ ಎಲ್ಲ ಕಾಳಜಿಯನ್ನು ಈಶ್ವರನು ತೆಗೆದುಕೊಳ್ಳುವವನಿದ್ದಾನೆ ಮತ್ತು ಇದುವೇ ಸತ್ಯವಾಗಿದೆ.
೪. ಆಪತ್ಕಾಲದಲ್ಲಿ ‘ವಿಕಲ್ಪ’ ಮತ್ತು ‘ನಕಾರಾತ್ಮಕ ವಿಚಾರ’ ಇವು ಸಾಧಕರ ಶತ್ರುಗಳಾಗಿರಲಿವೆ !
ಈಗ ಕಾಲ ಹೇಗೆ ಬಂದಿದೆ ಎಂದರೆ ಈ ಕಾಲದಲ್ಲಿ, ‘ವಿಕಲ್ಪ’ ಮತ್ತು ‘ನಕಾರಾತ್ಮಕ ವಿಚಾರ’ ಈ ಎರಡು ವಿಷಯಗಳಿಗೆ ಸ್ಥಾನವೇ ಇಲ್ಲ. ಇವು ನಮ್ಮ ಶತ್ರುಗಳಾಗಿವೆ. ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂನಿಂದಾಗಿ ಅವು ನಮ್ಮೊಳಗೆ ನುಗ್ಗುತ್ತವೆ ಮತ್ತು ಮನೆ ಮಾಡಿಕೊಂಡು ಕುಳಿತುಕೊಳ್ಳುತ್ತವೆ. ಒಂದು ವೇಳೆ ಈ ಶತ್ರುಗಳನ್ನು ನಾವು ಹೊರಗೆ ಹಾಕದಿದ್ದರೆ, ಯಾವಾಗ ಪ್ರತ್ಯಕ್ಷ ಪ್ರಸಂಗ ಬರುತ್ತದೋ, ಆಗ ಈ ಇಬ್ಬರೂ ನಮ್ಮ ಮೇಲೆಯೇ ಆವರಣವನ್ನು ತರುತ್ತಾರೆ. ಆಗ, ‘ನಮಗೆ ಬೆಳಕು ಏಕೆ ಕಾಣಿಸುತ್ತಿಲ್ಲ ? ಮಾರ್ಗ ಏಕೆ ಸಿಗುತ್ತಿಲ್ಲ ?’, ಎಂದೆನಿಸುತ್ತದೆ; ಆದರೆ ನಾವು ಆಗಲೂ ವಿಕಲ್ಪ ಮತ್ತು ನಕಾರಾತ್ಮಕ ವಿಚಾರ ಮಾಡುವುದನ್ನು ಬಿಡುವುದಿಲ್ಲ.
೫. ಆಪತ್ಕಾಲದಲ್ಲಿ ‘ಶ್ರದ್ಧೆ’ ಮತ್ತು ‘ಶರಣಾಗತಿ’, ಇವೇ ಸಾಧಕರ ಸ್ನೇಹಿತರಾಗಿರುವರು
ಈ ಆಪತ್ಕಾಲದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ವಿಚಾರ ಮಾಡಿ ಇಡುವ ಮಹತ್ವ ಗಮನಕ್ಕೆ ಬರುತ್ತದೆ; ಆದರೆ ನಿಜ ಹೇಳಬೇಕೆಂದರೆ ಈಗ ವಿಚಾರ ಮಾಡಲು ಸಮಯವೇ ಇಲ್ಲ. ಈ ಮೊದಲು ಕಾಲದ ವೇಗವು ಪ್ರತಿದಿನ ಬದಲಾಗುತ್ತಿತ್ತು; ಆದರೆ ಈಗ ಅದು ಪ್ರತಿ ಗಂಟೆಗೆ ಬದಲಾಗುತ್ತಿದೆ. ಇಂತಹ ಆಪತ್ಕಾಲದಲ್ಲಿ ‘ನಾನು ಜೀವಂತ ಇರುವನೇ ?’, ಎಂಬ ವಿಚಾರವು ಎಲ್ಲರ ಮನಸ್ಸಿನಲ್ಲಿರುವಾಗ ‘ಶ್ರದ್ಧೆ’ ಮತ್ತು ‘ಶರಣಾಗತಿ’ ಇವೇ ನಮ್ಮ ಸ್ನೇಹಿತರಾಗಿರುವರು. ಆಪತ್ಕಾಲದಲ್ಲಿ ಈಶ್ವರನು ಸನಾತನದ ಮೂವರು ಗುರುಗಳ ಮಾಧ್ಯಮದಿಂದ ಸಾಧಕರ ಪರೀಕ್ಷೆಯನ್ನು ತೆಗೆದುಕೊಳ್ಳುವನು. ಗುರುಗಳು ಶಿಷ್ಯನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವನಿಗೆ ಉತ್ತೀರ್ಣನಾಗುವ ಮಾರ್ಗವನ್ನೂ ತೋರಿಸುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಮೂವರು ಗುರುಗಳೇ ಸಾಧಕರಿಗೆ ‘ಶ್ರದ್ಧೆ’ ಮತ್ತು ‘ಶರಣಾಗತಿ’ ಈ ಮಾರ್ಗವನ್ನು ತೋರಿಸಿದ್ದಾರೆ.
೬. ಆಪತ್ಕಾಲವನ್ನು ಎದುರಿಸಲು ‘ಗುರುದೇವರಿಗೆ ಶರಣಾಗುವುದು’, ಇದೊಂದೇ ಪರಿಹಾರೋಪಾಯವಾಗಿದೆ
ಶ್ರೀವಿಷ್ಣುವಿನ ಕೈಯಿಂದ ಸುದರ್ಶನಚಕ್ರವು ಹೊರಗೆ ಬಂದು, ಅವನು ಅದಕ್ಕೆ ಕೊಟ್ಟಿರುವ ಕಾರ್ಯವನ್ನು ಪೂರ್ಣ ಮಾಡಿದ ನಂತರವೇ ಅದು ಮರಳಿ ಶ್ರೀವಿಷ್ಣುವಿನ ಕಿರುಬೆರಳಿನಲ್ಲಿ ಬರುತ್ತದೆ. ಆಪತ್ಕಾಲವು ಶ್ರೀವಿಷ್ಣುಸ್ವರೂಪ ಗುರುದೇವರ ಸುದರ್ಶನಚಕ್ರವಾಗಿದೆ. ಈ ಆಪತ್ಕಾಲದಲ್ಲಿ ಶರಣಾಗುವುದನ್ನು ಬಿಟ್ಟು ನಮ್ಮ ಬಳಿ ಬೇರೆ ಯಾವುದೇ ದಾರಿಯಿಲ್ಲ. ಅರ್ಜುನನು ಶ್ರೀಕೃಷ್ಣನ ಚರಣಗಳಲ್ಲಿ ನತಮಸ್ತಕನಾದ ಮೇಲೆಯೇ ಅವನಿಗೆ ಅವನ ಮಾರ್ಗವು ಕಾಣಿಸಿತು ಮತ್ತು ಅವನು ಎಲ್ಲ ಭಯ ಮತ್ತು ನಕಾರಾತ್ಮಕ ವಿಚಾರಗಳನ್ನು ಬಿಟ್ಟು ಯುದ್ಧವನ್ನು ಮಾಡಿದನು. ‘ಗುರುದೇವರಿಗೆ ಶರಣಾಗುವುದೊಂದೇ’, ನಮ್ಮ ಬಳಿ ಇರುವ ಪರ್ಯಾಯವಾಗಿದೆ. ‘ಅವರು ಸಾಧಕರನ್ನು ಯಾವ ಪ್ರವಾಹದಲ್ಲಿ ನೂಕಿದ್ದಾರೆಯೋ, ಆ ಪ್ರವಾಹದಲ್ಲಿನ ಮಾರ್ಗವನ್ನೂ ಅವರೇ ತೋರಿಸಲಿದ್ದಾರೆ’, ಎಂಬ ಶ್ರದ್ಧೆಯನ್ನಿಟ್ಟು ಅವರ ಚರಣಗಳಿಗೆ ಶರಣಾಗಿ ಆಪತ್ಕಾಲವನ್ನು ಎದುರಿಸೋಣ.
೭. ಸನಾತನದ ಮೂವರು ಗುರುಗಳ ಚರಣಗಳಲ್ಲಿ ಪ್ರಾರ್ಥನೆ !
ಹೇ ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆ, ಹೇ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಹೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಈ ಆಪತ್ಕಾಲದಲ್ಲಿ ನಮ್ಮೆಲ್ಲ ಸಾಧಕ-ಜೀವಗಳಿಗೆ ಸಾಧನೆಯ ಬಲದಿಂದ ಪಾರಾಗುವ ಮಾರ್ಗವನ್ನು ನೀವೇ ತೋರಿಸಬೇಕು. ನಾವು ಅಜ್ಞಾನಿ ಮತ್ತು ಮೂರ್ಖರಾಗಿದ್ದೇವೆ. ನಮಗೆ ಏನೂ ತಿಳಿಯುವುದಿಲ್ಲ. ನೀವೇ ನಮ್ಮಿಂದ ಸಾಧನೆಯನ್ನು ಮಾಡಿಸಿಕೊಳ್ಳಿರಿ. ನಾವೆಲ್ಲ ಸಾಧಕರು ತಮ್ಮ ಚರಣಗಳಲ್ಲಿ ಶರಣಾಗಿದ್ದೇವೆ. ಮಾರ್ಗವೂ ನೀವೇ, ಧ್ಯೇಯವೂ ನೀವೇ ಮತ್ತು ಮಹಾಕಾಲವೂ ನೀವೇ ಆಗಿದ್ದೀರಿ. ‘ನಮ್ಮೆಲ್ಲ ಸಾಧಕರ ಪ್ರಾರ್ಥನೆಯನ್ನು ಸ್ವೀಕರಿಸಿ ನಮ್ಮೆಲ್ಲರನ್ನು ಆಪತ್ಕಾಲದಿಂದ ಹಿಂದೂ ರಾಷ್ಟ್ರದೆಡೆಗೆ ಕರೆದೊಯ್ಯಬೇಕು’, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆಯಾಗಿದೆ.
– ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ.