‘ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಏಕರೂಪತೆಯ ಸಂದರ್ಭದಲ್ಲಿ ಸಾಧಕರಿಗೆ ಅನೇಕ ಬಾರಿ ಅನುಭೂತಿಗಳು ಬರುತ್ತಿರುತ್ತವೆ. ಸದ್ಗುರುದ್ವಯರ ಏಕರೂಪತೆಯ ಅನುಭೂತಿಯನ್ನು ಭಗವಂತನೇ ಮತ್ತೊಮ್ಮೆ ಒಂದು ವೈಶಿಷ್ಟ್ಯಪೂರ್ಣ ಅನುಭೂತಿಯ ಮಾಧ್ಯಮದಿಂದ ನೀಡಿದನು. ಅದನ್ನು ಮುಂದೆ ಕೊಡಲಾಗಿದೆ. ಭಗವಂತನ ಈ ಸುಂದರ ಲೀಲೆಯನ್ನು ಸನಾತನದ ಸದ್ಗುರು ರಾಜೇಂದ್ರ ಶಿಂದೆಯವರಿಗೆ ಓರ್ವ ಸಾಧಕನು ಗಮನಕ್ಕೆ ತಂದುಕೊಟ್ಟನು.
ದೈನಿಕ ‘ಸನಾತನ ಪ್ರಭಾತ’ವನ್ನು ಬಿಸಿಲಿನ ದಿಶೆಯಲ್ಲಿ ಹಿಡಿದು ನೋಡಿದಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಛಾಯಾಚಿತ್ರದ ಜಾಗದಲ್ಲಿ ಮುಂದಿನ ಪುಟದಲ್ಲಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರದ ಜಾಗದಲ್ಲಿ ಹಿಂದಿನ ಪುಟದಲ್ಲಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಛಾಯಾಚಿತ್ರ ಕಾಣಿಸುವುದು
ಪರಾತ್ಪರ ಗುರು ಡಾ. ಆಠವಲೆಯವರ ೭೯ ನೇಯ ಜನ್ಮೋತ್ಸವದ ನಿಮಿತ್ತ ೯.೫.೨೦೨೧ ರಂದು ಮರಾಠಿ ದೈನಿಕ ‘ಸನಾತನ ಪ್ರಭಾತ’ದ ‘ಸನಾತನದ ದೈವೀ ಗುರುಪರಂಪರೆ’ ಎಂಬ ಬಣ್ಣದ ವಿಶೇಷಾಂಕದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರತ್ವದ ಲೇಖನವನ್ನು ಪ್ರಕಾಶಿಸಲಾಗಿತ್ತು. ದೈನಿಕದ ‘ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭ’ ಈ ಆವೃತ್ತಿಯ ವಿಶೇಷಾಂಕದಲ್ಲಿ ಪುಟ ೫ ಮತ್ತು ೬ ರಲ್ಲಿ ಪ್ರಕಟಿಸಲಾದ ಛಾಯಾಚಿತ್ರಗಳ ಕುರಿತು ಒಂದು ವೈಶಿಷ್ಟ್ಯಪೂರ್ಣ ಅಂಶವು ಗಮನಕ್ಕೆ ಬಂದಿತು.
‘ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೆಲ್ಲರೂ ಜೊತೆಯಲ್ಲಿರುವ ಒಂದು ಭಾವಮುದ್ರೆಯಲ್ಲಿನ ಛಾಯಾಚಿತ್ರವನ್ನು ಪುಟ ೫ ರಲ್ಲಿ ಮತ್ತು ಇವರೆಲ್ಲರೂ ಜೊತೆಯಲ್ಲಿರುವ ಇನ್ನೊಂದು ಭಾವಮುದ್ರೆಯಲ್ಲಿನ ಛಾಯಾಚಿತ್ರವನ್ನು ಪುಟ ೬ ರಲ್ಲಿ ಪ್ರಕಾಶಿಲಾಗಿತ್ತು. ಪುಟ ೬ ಅನ್ನು ಬಿಸಿಲಿನ ಕಡೆಗೆ ಹಿಡಿದು ನೋಡಿದಾಗ ಹಿಂದಿನ ಪುಟ ೫ ರ ಮೇಲಿನ ಛಾಯಾಚಿತ್ರದ ಸ್ವಲ್ಪ ಭಾಗವು ಕಾಣಿಸುತ್ತದೆ. ಅದು ಹೇಗೆ ಕಾಣಿಸುತ್ತದೆ ಎಂದರೆ, ಪುಟ ೬ ರ ಮೇಲಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಛಾಯಾಚಿತ್ರದ ಜಾಗದಲ್ಲಿ ಹಿಂದಿನ ಪುಟ ೫ ರ ಮೇಲಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರವು ಕಾಣಿಸುತ್ತದೆ ಮತ್ತು ಪುಟ ೬ ರಲ್ಲಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರದ ಜಾಗದಲ್ಲಿ ಹಿಂದಿನ ಪುಟ ೫ ರಲ್ಲಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಛಾಯಾಚಿತ್ರ ಕಾಣಿಸುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಮಧ್ಯದಲ್ಲಿರುವುದರಿಂದ ಅವರು ಈ ಎರಡೂ ಛಾಯಾಚಿತ್ರಗಳಲ್ಲಿ ಒಂದೇ ರೀತಿ ಕಾಣಿಸುತ್ತಾರೆ. ಇದರಿಂದ ‘ಇಬ್ಬರೂ ಸದ್ಗುರುಗಳು ಪರಸ್ಪರರಲ್ಲಿ ಏಕರೂಪವಾಗಿದ್ದಾರೆ’, ಎಂದೆನಿಸುತ್ತದೆ.
ಸಪ್ತರ್ಷಿಗಳು ವರ್ಣಿಸಿದಂತಹ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಏಕರೂಪತೆ !
ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರತ್ವದ ಮಹತ್ವದ ಬಗ್ಗೆ ‘ಅವರಿಬ್ಬರೂ ಬೇರೆಯಲ್ಲ; ಒಂದೇ ಆಗಿದ್ದಾರೆ’, ಎಂದು ಮಹರ್ಷಿಗಳು ಪುನಃ ಪುನಃ ಹೇಳಿದ್ದಾರೆ. ಇದರ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.
ಅ. ಪ್ರತಿಯೊಂದು ಜನ್ಮದಲ್ಲಿ ಒಟ್ಟಿಗೆ ಜನ್ಮ ತಾಳುವ ಕಾರ್ತಿಕಪುತ್ರಿ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಮತ್ತು ಉತ್ತರಾಪುತ್ರಿ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ) ! : ‘ಇದುವರೆಗೆ ಆದಿಶಕ್ತಿಯ ಅಂಶಾವತಾರವಾಗಿರುವ ಕಾರ್ತಿಕಪುತ್ರಿ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಮತ್ತು ಉತ್ತರಾಪುತ್ರಿ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ) ಇವರು ಪ್ರತಿಯೊಂದು ಜನ್ಮದಲ್ಲಿ ಒಟ್ಟಿಗೆ ಜನ್ಮ ತಾಳಿದ್ದಾರೆ ಮತ್ತು ಈ ಮುಂದೆಯೂ ಅವರು ಶ್ರೀ ಗುರುಗಳ ಕಾರ್ಯಕ್ಕಾಗಿ ಮತ್ತೊಮ್ಮೆ ಜನ್ಮ ತಾಳುವವರಿದ್ದಾರೆ.’ – ಸಪ್ತರ್ಷಿಗಳು (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೪೯ (೧.೧೦.೨೦೨೦))
ಆ. ಉತ್ತರಾಪುತ್ರಿ ಅಂದರೆ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿನ ಮೂರ್ತಿಯಾಗಿದ್ದರೆ, ಕಾರ್ತಿಕ ಪುತ್ರಿಯು ಎಲ್ಲೆಡೆ ಸಂಚರಿಸುವ ದೇವಸ್ಥಾನದಲ್ಲಿನ ಉತ್ಸವಮೂರ್ತಿಯಾಗಿದ್ದಾರೆ ! : ಕಾರ್ತಿಕಪುತ್ರಿ ಮತ್ತು ಉತ್ತರಾಪುತ್ರಿ ಈ ಇಬ್ಬರೂ ಒಂದೇ ಆಗಿದ್ದಾರೆ. ಉತ್ತರಾಪುತ್ರಿಯು ಗರ್ಭಗುಡಿಯ ದೇವತೆಯಂತೆ ರಾಮನಾಥಿ ಆಶ್ರಮ ಸ್ವರೂಪ ದೇವಸ್ಥಾನದಲ್ಲಿದ್ದು ಮತ್ತು ಕಾರ್ತಿಕಪುತ್ರಿಯು ಉತ್ಸವಕ್ಕಾಗಿ ಎಲ್ಲೆಡೆ ಹೋಗುವ ದೇವಸ್ಥಾನದ ಉತ್ಸವಮೂರ್ತಿಯಂತಿದ್ದಾರೆ. – ಸಪ್ತರ್ಷಿ (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೪೯ (೧.೧೦.೨೦೨೦)
ಇ. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೆಂದರೆ ಆದಿಶಕ್ತಿಯ ೨ ರೂಪಗಳು’ : ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರು ಆದಿಶಕ್ತಿಯ ೨ ರೂಪಗಳೇ ಆಗಿದ್ದಾರೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ನಿಮ್ಮನ್ನು (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಹುಡುಕಿ ಅವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ಗಳೆಂದು ನೇಮಿಸಿದ್ದಾರೆ’. (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರ. ೧೪೯ (೧.೧೦.೨೦೨೦))
ಯಾರ ಏಕರೂಪತೆಯ ಅನುಭೂತಿ ಕೊಡಲು ಸ್ವಯಂ ಈಶ್ವರನು ವಿವಿಧ ಲೇಲೆಗಳನ್ನು ಮಾಡುತ್ತಾನೋ ಅಂತಹ ಆದಿಶಕ್ತಿ ಜಗದಂಬೆಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಅವರನ್ನು ತಯಾರು ಮಾಡುವ ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೃತಿಗಳಿಂದ ಅರಿವಾದ ಅವರಲ್ಲಿನ ಏಕರೂಪತೆ‘ಸದ್ಗುರುಗಳ ಮಾತು ಅಥವಾ ಅವರಿಗೆ ಯಾವುದೇ ವಾರ್ತೆ ತಿಳಿದಾಗ ಅವರು ಒಂದೇ ರೀತಿಯ ಉದ್ಗಾರವನ್ನು ತೆಗೆಯುತ್ತಾರೆ. ಸದ್ಗುರುದ್ವಯರು ಒಟ್ಟಿಗಿದ್ದಾಗ ಸಾಧಕನು ಒಂದು ಸಂದೇಶ ನೀಡಿದರೆ ಇಬ್ಬರು ಸದ್ಗುರುಗಳು ಆ ಸಾಧಕನಿಗೆ ಏಕಕಾಲದಲ್ಲಿ ಒಂದೇ ರೀತಿಯ ಉತ್ತರ ಕೊಡುತ್ತಾರೆ, ಹೀಗೆ ಅನೇಕ ಬಾರಿ ಗಮನಕ್ಕೆ ಬಂದಿದೆ. ಇದರಿಂದ ‘ಇಬ್ಬರು ಸದ್ಗುರುಗಳು ನೋಡಲು ಬೇರೆಯಾಗಿ ಕಾಣಿಸಿದರೂ, ಒಳಗಿನಿಂದ ಒಂದೇ ಇದ್ದಾರೆ’, ಎಂಬ ಅನುಭವವು ಬರುತ್ತದೆ. ಅನೇಕ ಸಾಧಕರಿಗೆ, ಸದ್ಗುರುದ್ವಯರು ಪೂಜಾವಿಧಿಯ ಕೃತಿ ಮತ್ತು ವಿಧಿ ಮುಗಿದ ನಂತರ ನಮಸ್ಕಾರದ ಮುದ್ರೆಯನ್ನು ಏಕಕಾಲದಲ್ಲಿ ಒಂದೇ ರೀತಿಯಲ್ಲಿ ಮಾಡುತ್ತಾರೆ ಎಂಬ ಅನುಭೂತಿ ಬಂದಿದೆ. – ಶ್ರೀ. ವಿನಾಯಕ ಶಾನಭಾಗ (೧೦.೭.೨೦೨೧) |