‘ಕೆಲವೊಮ್ಮೆ ಸಾಧಕರು ಕೆಲವು ಶಾರೀರಿಕ ರೋಗಗಳನ್ನು ಅಥವಾ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ‘ಉಪಚಾರ ನಡೆಯುವಾಗ ಅಥವಾ ಉಪಚಾರದಿಂದ ಅಪೇಕ್ಷಿತ ಲಾಭವಾಗದೇ ಇದ್ದಾಗ ಸಾಧಕರು ಅದರ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಮಾಡುತ್ತಿರುತ್ತಾರೆ. ಹಾಗೆಯೇ, ಸಾಧಕರು ಇದರ ಬಗ್ಗೆ ಇತರರಿಗೆ ಪುನಃ ಪುನಃ ಹೇಳುತ್ತಾರೆ. ತಮ್ಮ ಸಮಸ್ಯೆಯ ಬಗ್ಗೆ ವಿಚಾರ ಮಾಡುತ್ತಿರುವುದು, ಅದೇ ರೀತಿ ಇದರ ಬಗ್ಗೆ ಇತರರಿಗೆ ಸತತವಾಗಿ ಹೇಳುವುದರಿಂದ ಮನಸ್ಸಿನ ಮೇಲೆ ನಕಾರಾತ್ಮಕ ಸ್ವಯಂಸೂಚನೆಗಳನ್ನು ನೀಡಿದಂತಾಗುತ್ತದೆ. ಇದರಿಂದ ಮನಸ್ಸಿನಲ್ಲಿನ ನಕಾರಾತ್ಮಕ ವಿಚಾರಗಳ ಪೋಷಣೆಯಾಗಿ ಮನಸ್ಸಿನ ಅಸ್ಥಿರತೆ ಹೆಚ್ಚಾಗುತ್ತದೆ ಮತ್ತು ಕಾರ್ಯಕ್ಷಮತೆ ಕಡಿಮೆಯಾಗುತ್ತದೆ’.
೧. ಸಾಧಕರಿಗೆ ತಮ್ಮ ರೋಗಗಳ ಬಗ್ಗೆ ಅಥವಾ ಇತರ ಸಮಸ್ಯೆಗಳ ಬಗ್ಗೆ ಯಾರಿಗಾದರೂ ಹೇಳುವುದಿದ್ದರೆ, ಅವರು ಆಧುನಿಕ ವೈದ್ಯ ಅಥವಾ ಮಾನಸೋಪಚಾರ ತಜ್ಞರಿಗೆ ಹೇಳಬೇಕು. ಇದರಿಂದ ಅವರಿಗೆ ಯೋಗ್ಯ ಪರಿಹಾರ ಸಿಗಬಹುದು.
೨. ಇದರೊಂದಿಗೆ ಸಾಧಕರು ಆಧ್ಯಾತ್ಮಿಕ ಉಪಾಯಗಳನ್ನೂ ಮಾಡಬೇಕು, ಉದಾ. ಮನಸ್ಸಿನಲ್ಲಿ ಬರುವ ಎಲ್ಲ ನಕಾರಾತ್ಮಕ ವಿಚಾರಗಳನ್ನು ಕಾಗದದಲ್ಲಿ ಬರೆದು ಅದರ ಸುತ್ತಲು ನಾಮಜಪದ ಮಂಡಲವನ್ನು ಹಾಕಬೇಕು.
೩. ಸಾಧಕರು ತಮ್ಮ ಸಮಸ್ಯೆಗಳಿಗಾಗಿ ಮಾರ್ಗದರ್ಶನ ಪಡೆಯುವುದರೊಂದಿಗೆ ವಸ್ತುಸ್ಥಿತಿಯನ್ನೂ (ಸತ್ಯವನ್ನು) ಸ್ವೀಕರಿಸಲು ಸಾಧ್ಯವಾಗಲು ಮನಸ್ಸಿಗೆ ಸ್ವಯಂಸೂಚನೆಗಳನ್ನು ನೀಡುವುದೂ ಅಷ್ಟೇ ಆವಶ್ಯಕವಾಗಿದೆ. ಕೆಲವೊಂದು ಸಲ ಸಾಧಕರಿಗೆ ಆಧುನಿಕ ವೈದ್ಯರಿಂದ ತಮ್ಮ ರೋಗ (ಉದಾ. ಮೊಣಕಾಲು ನೋವು/ ಬೆನ್ನು ನೋವು) ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಸಾಧಕರ ಮನಸ್ಸು ಈ ವಸ್ತುಸ್ಥಿತಿಯನ್ನು (ಸತ್ಯವನ್ನು) ಸ್ವೀಕರಿಸುವುದಿಲ್ಲ. ಅದನ್ನು ಸ್ವೀಕರಿಸಲು ಸಾಧ್ಯವಾಗಬೇಕೆಂದು ಹಾಗೂ ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸಲು ಸಾಧಕರು ಈ ಮುಂದಿನಂತೆ ಸ್ವಯಂಸೂಚನೆಗಳನ್ನು ನೀಡಬೇಕು.
‘ಯಾವಾಗ ನಾನು ನನ್ನ …. ಸಮಸ್ಯೆಯ ಬಗ್ಗೆ ಕುಟುಂಬದಲ್ಲಿನ ಸದಸ್ಯರೊಂದಿಗೆ/ ಸಾಧಕರೊಂದಿಗೆ/ ಜವಾಬ್ದಾರ ಸಾಧಕರೊಂದಿಗೆ ಪುನಃ ಪುನಃ ಮಾತನಾಡುತ್ತಿರುತ್ತೇನೆಯೋ, ಆಗ ನನಗೆ ನನ್ನ ಮನಸ್ಸಿನ ನಕಾರಾತ್ಮಕತೆ ಮತ್ತು ಅಸ್ವಸ್ಥತೆ ಹೆಚ್ಚಾಗುತ್ತಿದೆ ಮತ್ತು ಇತರರ ಶಕ್ತಿ ಹಾಗೂ ಸಮಯವೂ ಹಾಳಾಗುತ್ತಿದೆ’, ಎಂಬುದು ಅರಿವಾಗುವುದು. ಆದುದರಿಂದ ನಾನು ಯೋಗ್ಯ ತಜ್ಞರ ಸಹಾಯ ಪಡೆಯುವೆನು ಹಾಗೂ ಅವರ ಮಾರ್ಗದರ್ಶನಕ್ಕನುಸಾರ ಪ್ರಯತ್ನ ಮಾಡುವೆನು’.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೯.೩.೨೦೨೨)