ನವರಾತ್ರ್ಯುತ್ಸವದ ನಿಮಿತ್ತ ಸನಾತನ ಪ್ರಕಾಶನ ಮಾಡಿದ ವಿವಿಧ ಗ್ರಂಥ, ಕಿರುಗ್ರಂಥ ಹಾಗೂ ದೇವತೆಗಳ ಚಿತ್ರಗಳನ್ನು ಮತ್ತು ನಾಮಜಪ-ಪಟ್ಟಿಗಳನ್ನು ಸಮಾಜಕ್ಕೆ ತಲುಪಿಸಲು ಪ್ರಯತ್ನಿಸಿರಿ !

ಸನಾತನ-ನಿರ್ಮಿತ ದುರ್ಗಾದೇವಿಯ ಸಾತ್ತ್ವಿಕ ಚಿತ್ರದಲ್ಲಿ ಶೇ. ೩೦.೫ ರಷ್ಟು ಶಕ್ತಿತತ್ತ್ವ ಬಂದಿದೆ. (ಕಲಿಯುಗದಲ್ಲಿ ಮೂರ್ತಿ ಅಥವಾ ಚಿತ್ರಗಳಲ್ಲಿ ಹೆಚ್ಚೆಂದರೆ ಶೇ. ೩೦ ರಷ್ಟು ಪ್ರಮಾಣದಲ್ಲಿ ದೇವತೆಯ ತತ್ತ್ವ ಬರಲು ಸಾಧ್ಯವಿದೆ. ಇತರೆಡೆ ಲಭ್ಯವಿರುವ ದೇವತೆಯ ಚಿತ್ರಗಳಲ್ಲಿ ಈ ತತ್ತ್ವ ಸರಾಸರಿ ಶೇ. ೨-೩ ರಷ್ಟಿರುತ್ತದೆ.)

ಪೂರ್ವಜರಿಂದಾಗುವ ತೊಂದರೆಗಳು ದೂರವಾಗಲು ಪಿತೃಪಕ್ಷದ ಸಮಯದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೧೦ ರಿಂದ ೨೫, ೨೦೨೨) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ |’ ಈ ಜಪವನ್ನು ಕಡಿಮೆ ಪಕ್ಷ ೧ ಗಂಟೆ ಮಾಡಬೇಕು.

ಸನಾತನದ ಆಶ್ರಮಗಳಿಗಾಗಿ ಸೋಲಾಪುರ ಚಾದರ, ಪ್ಲೇನ್ (ನಕ್ಷಿ ಇಲ್ಲದ) ಬೆಡ್‌ಶೀಟ್ಸ್ ಮತ್ತು ಟರ್ಕಿಶ್ ಟವೆಲ್ಸ್ ಅವಶ್ಯಕತೆ !

ಸನಾತನ ಸಂಸ್ಥೆಯ ಆಶ್ರಮಗಳಲ್ಲಿ ಪೂರ್ಣಾವಧಿಯ ಸಾಧಕರು, ಹಿತಚಿಂತಕರು, ವಾಚಕರು, ಅತಿಥಿಗಳು ಮತ್ತು ಹಿಂದುತ್ವನಿಷ್ಠರು ವಾಸಿಸಲು ಬರುತ್ತಾರೆ ಮತ್ತು ಆಶ್ರಮದಲ್ಲಿ ರಾಮರಾಜ್ಯವನ್ನು ಅನುಭವಿಸಲು ಪ್ರಯತ್ನಿಸುತ್ತಾರೆ. ಇವರೆಲ್ಲರಿಗೆ ಸೌಲಭ್ಯಗಳನ್ನು ಒದಗಿಸಲು ಈ ಕೋಷ್ಟಕದಲ್ಲಿ ಕೊಟ್ಟ ಸಾಮಗ್ರಿಗಳು ಬೇಕಾಗಿವೆ.

ವಾಹನದ ಅಪಘಾತವಾಗಬಾರದೆಂದು ಸಾಧಕರು ವಹಿಸಬೇಕಾದ ದಕ್ಷತೆ ಮತ್ತು ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ !

ಸದ್ಯ ಆಪತ್ಕಾಲದ ತೀವ್ರತೆ ಮತ್ತು ಕೆಟ್ಟ ಶಕ್ತಿಗಳ ಆಕ್ರಮಣಗಳು ಹೆಚ್ಚಾಗುತ್ತಲೇ ಇವೆ. ಆದುದರಿಂದ ಸಾಧಕರ ಸಂದರ್ಭದಲ್ಲಿ ವಾಹನದ ಅಪಘಾತಗಳಾಗುವ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಇದಕ್ಕಾಗಿ ಸಾಧಕರು ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳನ್ನು ನಡೆಸುವಾಗ ಮುಂದಿನಂತೆ ಅಗತ್ಯ ಕಾಳಜಿ ವಹಿಸಬೇಕು.

ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕಣ್ಣುಗಳಿಗೆ ಆವರಣ ಬರುವುದರಿಂದ ನಮ್ಮ ತೊಂದರೆಗಳು ಹೆಚ್ಚಾಗಬಾರದೆಂದು ಅದನ್ನು ತಕ್ಷಣ ದೂರ ಮಾಡಿ !

ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳಲ್ಲಿ ವಾತಾವರಣದಲ್ಲಿ ತೊಂದರೆದಾಯಕ ಶಕ್ತಿಗಳ ಪ್ರಮಾಣವು ಹೆಚ್ಚಾಗಿರುವುದರಿಂದ ನಮ್ಮ ಕಣ್ಣುಗಳು ಆ ಸೂಕ್ಷ್ಮದಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ಯುಕ್ತವಾಗುತ್ತವೆ, ಅಂದರೆ ಅವುಗಳ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವು ಬರುತ್ತದೆ.

ಧರ್ಮಕಾರ್ಯಕ್ಕಾಗಿ ಸಿಗುವ ಅರ್ಪಣೆಯನ್ನು ಅಪಹರಿಸುವವರಿಂದ ಎಚ್ಚರದಿಂದಿರಿ ಹಾಗೂ ಇಂತಹ ಕೃತ್ಯಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಗೆ ಕೂಡಲೇ ತಿಳಿಸಿ !

ಧರ್ಮಪ್ರೇಮಿಗಳು ಧರ್ಮಕಾರ್ಯಕ್ಕಾಗಿ ಅರ್ಪಣೆಯೆಂದು ಕೊಟ್ಟ ನಿಧಿ ಅಥವಾ ವಸ್ತುಗಳನ್ನು ಯಾರಾದರೂ ದುರುಪಯೋಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದರೆ ಅದರ ಬಗ್ಗೆ ಈ ವಿಳಾಸಕ್ಕೆ ತಿಳಿಸಬೇಕು.

ಸಾಧಕರೇ, ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆಗೆ ಹೋಗಿ ಮಾತನಾಡುವ ಮೊದಲು ಮತ್ತು ಮಾತನಾಡಿದ ನಂತರ ವೇದಿಕೆಯ ಮೇಲೆ ಉಪಸ್ಥಿತರಿರುವ ಸಂತರು, ಗಣ್ಯರು ಮತ್ತು ಎದುರಿಗೆ ಇರುವ ಶ್ರೋತೃಗಳಿಗೆ ನಮಸ್ಕಾರ ಮಾಡಿ !

ಸಂತರಿಗೆ ಮತ್ತು ಗಣ್ಯರಿಗೆ ನಮಸ್ಕಾರವನ್ನು ಮಾಡುವಾಗ ಸಾಧಕರು ಎದುರಿಗೆ ಕುಳಿತಿರುವ ಶ್ರೋತೃಗಳಿಗೆ, ಸಾಧಕರಿಗೆ ಮುಂತಾದವರಿಗೆ ನಮಸ್ಕಾರವನ್ನು ಮಾಡಬೇಕು ಅನಂತರ ತಮ್ಮ ಅನುಭವವನ್ನು ಹೇಳಲು ಆರಂಭಿಸಬೇಕು.

ಸರಕಾರಿ ವಾಚನಾಲಯಗಳಲ್ಲಿ, ಹಾಗೆಯೇ ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯಗಳಲ್ಲಿ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಇಡಲು ಪ್ರಯತ್ನಿಸಿರಿ !

ಸಾಧಕರೇ, ವಾಚಕರಿಗೆ ಎಲ್ಲ ರೀತಿಯ ಜ್ಞಾನಭಂಡಾರವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಹೆಚ್ಚೆಚ್ಚು ವಾಚನಾಲಯಗಳವರೆಗೆ ತಲುಪಿಸಿ ಗುರುಕಾರ್ಯದ ಪ್ರಸಾರವನ್ನು ಮಾಡಿರಿ !

ಪರಾತ್ಪರ ಗುರು ಡಾ. ಆಠವಲೆಯವರ ಯಾವ ಬೋಧನೆಯಿಂದ ಆಧ್ಯಾತ್ಮಿಕ ಪ್ರಗತಿಯಾಯಿತು, ಈ ಬಗೆಗಿನ ಲೇಖನವನ್ನು ಕಳುಹಿಸಿ !

ಈ ಎರಡೂ ಉದ್ದೇಶಗಳನ್ನು ಗಮನದಲ್ಲಿಟ್ಟು ಸಂತರು ಮತ್ತು ಸಾಧಕರು ತಮ್ಮ ಇಲ್ಲಿಯವರೆಗಿನ ಸಾಧನೆಯ ಮತ್ತು ಮುಂದಿನ ಪ್ರಗತಿಯ ಬರವಣಿಗೆಯನ್ನು ನಿಯಮಿತವಾಗಿ ಬರೆದು ಕಳುಹಿಸಬೇಕು.

ಅಧ್ಯಾತ್ಮಪ್ರಸಾರದ ಕಾರ್ಯಕ್ಕಾಗಿ ಪ್ರವಾಸ ಮಾಡುವ ಸಾಧಕರಿಗೆ ತಮ್ಮ ಪರಿಚಿತರಲ್ಲಿ ನಿವಾಸ ಮತ್ತು ಭೋಜನದ ವ್ಯವಸ್ಥೆ ಆಗಬಹುದಿದ್ದರೆ ಅದರ ಮಾಹಿತಿ ತಿಳಿಸಿರಿ !

ಈ ಪ್ರವಾಸದ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಅಧ್ಯಾತ್ಮಪ್ರೇಮಿ ಜಿಜ್ಞಾಸುಗಳು ಹಾಗೂ ಹಿಂದೂ ರಾಷ್ಟ್ರಪ್ರೇಮಿಗಳನ್ನು ಭೇಟಿಯಾಗುವುದು; ಪ್ರವಚನಗಳು, ಸಭೆಗಳು, ಚರ್ಚೆ, ಶಿಬಿರಗಳು ಇತ್ಯಾದಿಗಳ ಆಯೋಜನೆ ಮಾಡುವುದು ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.