ಗಣಕಯಂತ್ರಗಳ (ಕಂಪ್ಯೂಟರ್‌ಗಳ) ದುರುಸ್ತಿ ಅಂತರ್ಗತ ಈ ಕೆಳಗಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಗಣಕಯಂತ್ರದ ಕ್ಷೇತ್ರದಲ್ಲಿನ ತಜ್ಞರಿಗೆ ಸೇವೆಯ ಅಮೂಲ್ಯ ಅವಕಾಶ !

 

‘ಹಿಂದೂ ರಾಷ್ಟ್ರದ ಸ್ಥಾಪನೆ’ಯ ಗುರಿ ಶೀಘ್ರಗತಿಯಲ್ಲಿ ಸಾಕಾರವಾಗಲು ಸನಾತನ ಸಂಸ್ಥೆಯು ಗ್ರಂಥ, ಸಾತ್ತ್ವಿಕ ಉತ್ಪನ್ನಗಳು ಮತ್ತು ಸನಾತನ ಪ್ರಭಾತ ನಿಯತಕಾಲಿಕೆಗಳ ಮಾಧ್ಯಮಗಳಿಂದ ಜನಸಾಮಾನ್ಯರಲ್ಲಿ ರಾಷ್ಟ್ರ ಮತ್ತು ಧರ್ಮ ಜಾಗೃತಿಯನ್ನು ಮಾಡಲಾಗುತ್ತದೆ. ರಾಷ್ಟ್ರ ಮತ್ತು ಧರ್ಮ ಕಾರ್ಯದ ಅಂತರ್ಗತ ವಿವಿಧ ಸೇವೆಗಳಿಗಾಗಿ ಗಣಕಯಂತ್ರದಲ್ಲಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಸದ್ಯ ಗಣಕಯಂತ್ರಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ಸಾಧಕರು ಕಡಿಮೆ ಬೀಳುತ್ತಿದ್ದಾರೆ.

ಮುಂದಿನ ಸೇವೆಗಳಿಗಾಗಿ ರಾಮನಾಥಿ (ಗೋವಾ)ಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಸಾಧಕರ ಆವಶ್ಯಕತೆ ಇದೆ.

೧.  ಸೇವೆಯ ಸ್ವರೂಪ

ಗಣಕಯಂತ್ರಗಳ ದುರಸ್ತಿ ಸೇವೆಗಳಲ್ಲಿ ಟೆಕ್ನಿಕಲ್ (ತಾಂತ್ರಿಕ) ಮತ್ತು ನಾನ್-ಟೆಕ್ನಿಕಲ್ (ತಾಂತ್ರಿಕೇತರ) ಹೀಗೆ ಎರಡೂ ಸ್ವರೂಪದ ಸೇವೆಗಳಿವೆ.

೧ ಅ. ತಾಂತ್ರಿಕ (ಟೆಕ್ನಿಕಲ್) ಸೇವೆ

೧. ಗಣಕಯಂತ್ರಗಳಲ್ಲಿ Windows, MAC OS. ಹಾಗೆಯೇ ಇತರ Software ಗಳನ್ನು install ಮಾಡುವುದು

೨. ಕೆಟ್ಟು ಹೋದ ಗಣಕಯಂತ್ರ (Computer), ಸಂಚಾರಿಗಣಕ ಯಂತ್ರ (Laptop) ಮತ್ತು ಸಂಚಾರವಾಣಿ (Mobile) ಗಳನ್ನು ದುರಸ್ತಿ ಮಾಡುವುದು

೩. A4 ಪ್ರಿಂಟರ್, ಫೋಟೋಕಾಪಿ (ಝೇರಾಕ್ಸ್) ಮಶೀನ, ಟೆಲಿಫೋನ್, ಮೌಸ್, ಸ್ಪೀಕರ್, ‘ಸ್ಪೈಕ್ ಗಾರ್ಡ್’, ‘ಮೋಡೆಮ್’, ‘ವೈ-ಫೈ ರೌಟರ್’, ‘ಪಾವರ್ ಅಡಾಪ್ಟರ್’, ಯು.ಪಿ.ಎಸ್ (600VA/1KVA) ಇತ್ಯಾದಿ ಇಲೆಕ್ಟ್ರಾನಿಕ್ ವಸ್ತುಗಳ ದುರಸ್ತಿಯನ್ನು ಮಾಡುವುದು.

೪. ನೆಟ್ವರ್ಕ್ ಕೇಬಲ್ಲಿಂಗ್ (ಇದರ ಅಂತರ್ಗತ Cable pulling, Punching, Crimping ಮಾಡುವುದು ಇತ್ಯಾದಿ ಸೇವೆಗಳಿರುತ್ತವೆ. (ಇದಕ್ಕಾಗಿ  ‘ನೆಟವರ್ಕಿಂಗ್’ ಮತ್ತು ಎಲೆಕ್ಟ್ರಾನಿಕ್ಸ್‌ನ ಜ್ಞಾನ ಬೇಕು).

೧ ಅ. ತಾಂತ್ರಿಕ ಭಾಗವಿಲ್ಲದ (Non-Technical) ಸೇವೆಗಳು :

ಗಣಕಯಂತ್ರಗಳು ಹಾಗೆಯೇ ಇತರ ವಸ್ತುಗಳ ಬರು-ಹೋಗುವುದನ್ನು ನೋಡುವುದು, ಹಾಗೆಯೇ ಅವುಗಳ ಲೆಕ್ಕವನ್ನು ಇಡುವುದು ಮತ್ತು ಅವುಗಳ ನೋಂದಣಿಯನ್ನು ಮಾಡಿ ಅವುಗಳ ಪರಿಶೀಲನೆ (Checking) ಮಾಡುವುದು. ಈ ಸೇವೆಗೆ ಕೇವಲ ಗಣಕಯಂತ್ರಗಳ ಜ್ಞಾನ ಇರುವುದು ಆವಶ್ಯಕ.

ಮೇಲಿನ ಎಲ್ಲಾ ಸೇವೆಗಳಿಗೆ ಗಣಕಯಂತ್ರಗಳನ್ನು ಉಪಯೋಗಿಸುವ ಜ್ಞಾನ ಇರುವುದು ಆವಶ್ಯಕವಾಗಿದೆ. ಗಣಕಯಂತ್ರಗಳ ದುರಸ್ತಿಯ (ರಿಪೇರಿ) ಜ್ಞಾನ ಅಥವಾ ಅನುಭವವಿರುವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಆಶ್ರಮಕ್ಕೆ ಸ್ವಲ್ಪ ಸಮಯಕ್ಕಾಗಿ ಅಥವಾ ಪೂರ್ಣ ಕಾಲಕ್ಕಾಗಿ ಆಶ್ರಮದಲ್ಲಿದ್ದು ಈ ಸೇವೆಯನ್ನು ಮಾಡಬಹುದು. ಸೇವೆಯನ್ನು ಮಾಡುವ ಇಚ್ಛೆಯಿದ್ದವರು ಜಿಲ್ಲಾಸೇವಕರ ಮಾಧ್ಯಮದಿಂದ ತಮ್ಮ ಮಾಹಿತಿಯನ್ನು ಈ ಕೆಳಗಿನ ಕೋಷ್ಟಕ್ಕನುಸಾರ ಕಳುಹಿಸಬೇಕು.

ಅದನ್ನು  ಸೌ. ಭಾಗ್ಯಶ್ರೀ ಸಾವಂತ ಇವರ ಹೆಸರಿನಲ್ಲಿ ಕೆಳಗಿನ ವಿ-ಅಂಚೆ ವಿಳಾಸಕ್ಕೆ [email protected] ಅಥವಾ ಕೆಳಗಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಈ ಸೇವೆಯನ್ನು ಕಲಿತು ಸೇವೆಯನ್ನು ಮಾಡಲು ಇಚ್ಛಿಸುವವರಿಗೆ ತರಬೇತಿಯನ್ನು ನೀಡಲಾಗುವುದು.

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ ೪೦೩೪೦೧.  (೧೨.೯.೨೦೨೨)

ಸನಾತನದ ಆಶ್ರಮಗಳಲ್ಲಿನ ಈ ಮುಂದಿನ ಸೇವೆಗಳಲ್ಲಿಯೂ ತಾವು ಭಾಗವಹಿಸಬಹುದು !

ಸನಾತನ ಆಶ್ರಮಗಳಲ್ಲಿ ಈ ಮುಂದಿನ ಸೇವೆಗಳಿಗಾಗಿಯೂ ಸಾಧಕರ ಆವಶ್ಯಕತೆಯಿದೆ – ಗ್ರಂಥ, ಕಲೆ, ದೈನಿಕ / ಸಾಪ್ತಾಹಿಕ ಸನಾತನ ಪ್ರಭಾತ, ಜಾಲತಾಣ, ಧ್ವನಿ-ಚಿತ್ರೀಕರಣ, ವೈದ್ಯಕೀಯ, ಕಟ್ಟಡ, ಧಾನ್ಯಗಳು, ಅಡುಗೆಮನೆ ಮತ್ತು ಬೇಕರಿ.

 ಈ ಸೇವೆಗಳ ಬಗೆಗಿನ ವಿವರವಾದ ಮಾಹಿತಿಯನ್ನು ಆಯಾ ಸಮಯಕ್ಕೆ ‘ಸಾಪ್ತಾಹಿಕ ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಮೇಲಿನ ಸೇವೆಗಳಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ತಮ್ಮ ಮಾಹಿತಿಯನ್ನು [email protected] ಈ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಏನಾದರೂ ಸಂದೇಹಗಳಿದ್ದಲ್ಲಿ, ಸೌ. ಭಾಗ್ಯಶ್ರೀ ಸಾವಂತ ಇವರನ್ನು ೭೦೫೮೮೮೫೬೧೦ ಈ ಕ್ರಮಾಂಕದಲ್ಲಿ ಸಂಪರ್ಕಿಸಬಹುದು.