ಸನಾತನದ ಗ್ರಂಥ ‘ಈ-ಬುಕ್’ ಸ್ವರೂಪದಲ್ಲಿ ಲಭ್ಯಗೊಳಿಸುವ ಸೇವೆಯಲ್ಲಿ ಯೋಗದಾನ ನೀಡಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

ಕಾಲಾನುಸಾರ ವ್ಯಷ್ಟಿ ಸಾಧನೆಗಿಂತಲು ಸಮಷ್ಟಿ ಸಾಧನೆಗೆ ಹೆಚ್ಚಿನ ಮಹತ್ವ ಇದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರು ಸಂಕಲನ ಮಾಡುತ್ತಿರುವ ಸನಾತನದ ಗ್ರಂಥದ ಸೇವೆಯಲ್ಲಿ ಸಹಭಾಗಿ ಆಗುವುದು, ಇದು ಸಮಷ್ಟಿ ಸಾಧನೆ ಆಗಿದೆ. ಪ್ರಸ್ತುತ ಸಮಾಜದಲ್ಲಿ ಗಣಕಯಂತ್ರ, ಸಂಚಾರವಾಣಿ ಇತ್ಯಾದಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದ ಸನಾತನದ ಗ್ರಂಥಗಳನ್ನು ಸಮಾಜಕ್ಕೆ ‘ಈ-ಬುಕ್’ ಸ್ವರೂಪದಲ್ಲಿ ಉಪಲಬ್ಧ ಮಾಡಿಕೊಡುವ ದೊಡ್ಡ ಸೇವೆ ಲಭ್ಯವಾಗಿದೆ. (‘ಈ-ಬುಕ್ : ಯಾವುದಾದರೂ ಪುಸ್ತಕದ ‘ಡಿಜಿಟಲ್’ ಅಥವಾ ‘ಎಲೆಕ್ಟ್ರಾನಿಕ್’ ಸ್ವರೂಪದಲ್ಲಿ ರೂಪಾಂತರ!) ಈ ಸೇವೆಗಾಗಿ ಈ ಕ್ಷೇತ್ರದಲ್ಲಿನ ಅನುಭವಿ ವ್ಯಕ್ತಿ ಮತ್ತು ಸಾಧಕರ ಅವಶ್ಯಕತೆ ಇದೆ. ಇದರ ಅಂತರ್ಗತ ಮುಂದಿನ ಕೆಲವು ಸೇವೆ ಉಪಲಬ್ದ ಇದೆ.

೧. ‘ಇನ್ ಡಿಸೈನ್’, ‘ಫೋಟೋಶಾಪ್’ ಈ ಗಣಕೀಯ ತಂತ್ರಾಂಶದ ಮೂಲಕ ಗ್ರಂಥದ ಸಂರಚನೆ ಮಾಡುವುದು.

೨. ಇತರ ‘ಈ-ಬುಕ್ಸ್’ ದ ಪದ್ಧತಿಯ ಅಭ್ಯಾಸ ಮಾಡುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ‘ಈ-ಬುಕ್’ನ ಪ್ರಸಾರ ಮಾಡುವುದು.

೩. ತಾಂತ್ರಿಕ: ಸಾಫ್ಟೆವರ್ ಡೆವಲಪ್‌ಮೆಂಟ್‌ನ ಅಂತರ್ಗತ Java Script Programming ಮಾಡುವುದು.

೪. ಇದಕ್ಕೆ ಸಂಬಂಧಿತ ಸೇವೆ ಮಾಡುವುದಕ್ಕಾಗಿ ಜವಾಬ್ದಾರಿವಹಿಸಿ ಸಮನ್ವಯ ಮುಂತಾದ ಸೇವೆ ಮಾಡುವುದು.

ಮೇಲಿನ ಸೇವೆಗಳಲ್ಲಿ ಯೋಗದಾನ ನೀಡಲು ಹಿಂದೂ ರಾಷ್ಟ್ರ ಸ್ಥಾಪನೆಯ ಧರ್ಮಕಾರ್ಯದಲ್ಲಿ ಸಹಭಾಗಿ ಆಗುವುದರ ಮೂಲಕ ಮನುಷ್ಯಜನ್ಮದ ಸಾರ್ಥಕತೆ ಮಾಡಿಕೊಳ್ಳಿ. ಈ ಸೇವೆಯಲ್ಲಿ ಸಹಭಾಗಿ ಆಗಲು ಬಯಸುವವರು ಪಕ್ಕದಲ್ಲಿ ನೀಡಿರುವ ಕೋಷ್ಟಕದಲ್ಲಿರುವಂತೆ ನಿಮ್ಮ ಮಾಹಿತಿ ತಿಳಿಸಿರಿ.

ಯಾವ ಸಾಧಕರಿಗೆ ಈ ಸೇವೆಯ ಸಂಬಂಧಿತ ಜ್ಞಾನ ಇದೆ ಮತ್ತು ಈ ಸೇವೆ ಮಾಡುವ ಆಸಕ್ತಿ ಇದೆ, ಅವರು ಅಥವಾ ಯಾರು ಕಲಿತು ಮಾಡಲು ಸಾಧ್ಯವಿದೆ ಅಷ್ಟು ಸಮಯ ಮನೆಯಲ್ಲಿದ್ದು ಸೇವೆ ಮಾಡಬಹುದು, ಅಂತಹವರು ಮುಂದಿನ ವಿಳಾಸಕ್ಕೆ ಸಂಪರ್ಕ ಮಾಡಬಹುದು.

ಹೆಸರು ಮತ್ತು ಸಂಪರ್ಕ ಕ್ರಮಾಂಕ

ಸೌ . ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಛಿ/o ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ – ೪೦೩೪೦೧ (೨೭.೧೦.೨೦೨೨)