ನವರಾತ್ರ್ಯುತ್ಸವದ ನಿಮಿತ್ತ ಸನಾತನ ಪ್ರಕಾಶನ ಮಾಡಿದ ವಿವಿಧ ಗ್ರಂಥ, ಕಿರುಗ್ರಂಥ ಹಾಗೂ ದೇವತೆಗಳ ಚಿತ್ರಗಳನ್ನು ಮತ್ತು ನಾಮಜಪ-ಪಟ್ಟಿಗಳನ್ನು ಸಮಾಜಕ್ಕೆ ತಲುಪಿಸಲು ಪ್ರಯತ್ನಿಸಿರಿ !

ಎಲ್ಲ ಸಾಧಕರಿಗೆ ಸೂಚನೆ !

೨೬.೯.೨೦೨೨  ರಿಂದ ನವರಾತ್ರ್ಯುತ್ಸವ ಆರಂಭವಾಗುತ್ತಿದೆ. ಈ ಅವಧಿಯಲ್ಲಿ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಸನಾತನ ಸಂಸ್ಥೆಯು ದೇವಿಯ ವಿಷಯದ ಅಧ್ಯಾತ್ಮ ಶಾಸ್ತ್ರೀಯ ಜ್ಞಾನವನ್ನು ನೀಡುವ ಗ್ರಂಥ, ಕಿರುಗ್ರಂಥ ಹಾಗೂ ದೇವಿತತ್ತ್ವದ ಅನುಭೂತಿಯನ್ನು ನೀಡುವ ಚಿತ್ರಗಳು ಮತ್ತು ನಾಮಜಪ-ಪಟ್ಟಿಗಳನ್ನು ತಯಾರಿಸಿದೆ. ಭಕ್ತರಿಗೆ ನವರಾತ್ರಿಯ ಸಮಯದಲ್ಲಿ ದೇವಿಯ ಆರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಲು ಸಾಧ್ಯವಾಗಿ ಅವರಿಗೆ ದೇವಿತತ್ತ್ವದ ಹೆಚ್ಚೆಚ್ಚು ಲಾಭವಾಗಬೇಕೆಂಬ ದೃಷ್ಟಿಯಿಂದ ಈ ಗ್ರಂಥಗಳನ್ನು ಮತ್ತು ಉತ್ಪಾದನೆಗಳನ್ನು ಸಮಾಜಕ್ಕೆ ತಲುಪಿಸುವುದು ಆವಶ್ಯಕವಾಗಿದೆ.

೧. ದೇವಿಗೆ ಸಂಬಂಧಿಸಿದ ಗ್ರಂಥಗಳು ಮತ್ತು ಕಿರುಗ್ರಂಥಗಳು

೧ ಅ. ‘ಶಕ್ತಿ’ಯ ಉಪಾಸನೆ ಹೇಗೆ ಮಾಡಬೇಕು ? ಎಂಬುದರ ಮಾಹಿತಿಯನ್ನು ನೀಡುವ ‘ಶಕ್ತಿಯ ಪ್ರಾಸ್ತಾವಿಕ ವಿವೇಚನೆ’ ಮತ್ತು ‘ಶಕ್ತಿಯ ಉಪಾಸನೆ’ ಈ ಗ್ರಂಥ ! : ಈ ೨ ಗ್ರಂಥಗಳಲ್ಲಿ ಶಕ್ತಿಯ ವಿವಿಧ ಹೆಸರುಗಳು, ಅವುಗಳ ವಿಧಗಳು ಮತ್ತು ಕಾರ್ಯ, ದೇವಿಯ ಉಪಾಸನೆಯ ವೈಶಿಷ್ಟ್ಯಗಳು ಹಾಗೂ ಮೂರ್ತಿವಿಜ್ಞಾನ ಇವುಗಳನ್ನು ವಿವರಿಸಲಾಗಿದೆ. ಇದರೊಂದಿಗೆ ‘ಯಾವ ರಂಗೋಲಿಯನ್ನು ಬಿಡಿಸಿದರೆ ಶಕ್ತಿತತ್ತ್ವವು ಆಕರ್ಷಿತವಾಗುತ್ತದೆ ? ಕಾಲಾನುಸಾರ ಯಾವ ದೇವಿಯ ಉಪಾಸನೆ ಮಾಡಬೇಕು ಹಾಗೂ ಅದನ್ನು ಹೇಗೆ ಮಾಡಬೇಕು ? ನವರಾತ್ರ್ಯುತ್ಸವವನ್ನು ಹೇಗೆ ಆಚರಿಸಬೇಕು ?’ ಇತ್ಯಾದಿ ವಿಷಯಗಳ ಅಮೂಲ್ಯವಾದ ಮಾಹಿತಿಯನ್ನು ಇವುಗಳಲ್ಲಿ ನೀಡಲಾಗಿದೆ. (ಈ ವಿಷಯದ ಕಿರುಗ್ರಂಥವೂ ಲಭ್ಯವಿದೆ.)

೧ ಆ. ದೇವಿ ಉಪಾಸನೆಯ ವಿಷಯದಲ್ಲಿ ಜ್ಞಾನವನ್ನು ನೀಡುವ ಕಿರುಗ್ರಂಥ – ‘ದೇವಿಪೂಜೆಯ ಶಾಸ್ತ್ರ’ : ಈ ಕಿರುಗ್ರಂಥದಲ್ಲಿ ‘ನವರಾತ್ರಿಯಲ್ಲಿ ಘಟಸ್ಥಾಪನೆ ಹೇಗೆ ಮಾಡಬೇಕು ? ವಿಜಯ ದಶಮಿಗೆ ಅಪರಾಜಿತಾ ದೇವಿಯ ಪೂಜೆ ಏಕೆ ಮಾಡಬೇಕು ? ದೇವಿಯ ಮೂರ್ತಿಗೆ ‘ಕುಂಕುಮಾರ್ಚನೆ’ ಏಕೆ ಮಾಡುತ್ತಾರೆ ?’ ಇತ್ಯಾದಿ ಮಾಹಿತಿಗಳನ್ನು ಸವಿಸ್ತಾರವಾಗಿ ನೀಡಲಾಗಿದೆ.

೨. ಸನಾತನದ ಇತರ ಸಾತ್ತ್ವಿಕ ಉತ್ಪಾದನೆಗಳು

೨ ಅ. ಶಕ್ತಿತತ್ತ್ವವಿರುವ ಚಿತ್ರ : ಸನಾತನ-ನಿರ್ಮಿತ ದುರ್ಗಾದೇವಿಯ ಸಾತ್ತ್ವಿಕ ಚಿತ್ರದಲ್ಲಿ ಶೇ. ೩೦.೫ ರಷ್ಟು ಶಕ್ತಿತತ್ತ್ವ ಬಂದಿದೆ. (ಕಲಿಯುಗದಲ್ಲಿ ಮೂರ್ತಿ ಅಥವಾ ಚಿತ್ರಗಳಲ್ಲಿ ಹೆಚ್ಚೆಂದರೆ ಶೇ. ೩೦ ರಷ್ಟು ಪ್ರಮಾಣದಲ್ಲಿ ದೇವತೆಯ ತತ್ತ್ವ ಬರಲು ಸಾಧ್ಯವಿದೆ. ಇತರೆಡೆ ಲಭ್ಯವಿರುವ ದೇವತೆಯ ಚಿತ್ರಗಳಲ್ಲಿ ಈ ತತ್ತ್ವ ಸರಾಸರಿ ಶೇ. ೨-೩ ರಷ್ಟಿರುತ್ತದೆ.) ಈ ಚಿತ್ರ ಸಣ್ಣದು, ಮಧ್ಯಮ ಮತ್ತು ದೊಡ್ಡ ಗಾತ್ರದಲ್ಲಿ ಸಿಗುತ್ತದೆ.

೨ ಆ. ನಾಮಪಟ್ಟಿ : ಅಕ್ಷರ ಸಾತ್ತ್ವಿಕವಾಗಿದ್ದರೆ ಅದರಲ್ಲಿ ಚೈತನ್ಯವಿರುತ್ತದೆ. ಸಾತ್ತ್ವಿಕ ಅಕ್ಷರಗಳು ಮತ್ತು ಅವುಗಳ ಸುತ್ತಲಿರುವ ದೇವತೆಯ ತತ್ತ್ವಕ್ಕನುರೂಪವಾದ ಚೌಕಟ್ಟನ್ನು ಅಭ್ಯಾಸ ಮಾಡಿ ಸನಾತನ ವಿವಿಧ ದೇವತೆಗಳ ನಾಮಜಪದ ಪಟ್ಟಿಗಳನ್ನು ತಯಾರಿಸಿದೆ.’  (೭.೯.೨೦೨೨)