ನೌಕರಿ ಅಥವಾ ವ್ಯವಸಾಯವನ್ನು ಮಾಡುವಾಗ ಬಂದಿರುವ ಒಳ್ಳೆಯ ಅಥವಾ ಕಹಿ ಅನುಭವಗಳನ್ನು ತಿಳಿಸಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಸವಿನಯ ವಿನಂತಿ !

ಸಮಾಜದಲ್ಲಿ ನೌಕರಿ ಅಥವಾ ವ್ಯವಸಾಯವನ್ನು ಮಾಡುವಾಗ ನಮಗೆ ವಿವಿಧ ಕ್ಷೇತ್ರಗಳಲ್ಲಿ ಒಳ್ಳೆಯ ಅಥವಾ ಕಹಿ ಅನುಭವಗಳು ಬರುತ್ತಿರುತ್ತವೆ. ತಮಗೂ ಮುಂದಿನಂತಹ ಅನುಭವಗಳು ಬಂದಿರಬಹುದು.

೧. ಸರಕಾರಿ ಕಾರ್ಯಾಲಯಗಳಲ್ಲಿ ನೌಕರಿ ಮಾಡುವಾಗ ಕೆಲವೊಮ್ಮೆ ನಮಗೆ ಪ್ರಾಮಾಣಿಕ ಮತ್ತು ನಿರಪೇಕ್ಷವಾಗಿ ಸಹಾಯ ಮಾಡುವ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಭೇಟಿಯಾಗುತ್ತಾರೆ. ಅದೇ ರೀತಿ ಕೆಲವು ಅಧಿಕಾರಿಗಳು ಲಂಚ ಸಿಕ್ಕರೆ ಮಾತ್ರ ಕೆಲಸವನ್ನು ಮಾಡುತ್ತಾರೆ, ಹೀಗೆ ತಾವು ಅನುಭವಿಸಿರಬಹುದು.

೨. ಕೆಲವೊಮ್ಮೆ ತಮಗೆ ಸರಕಾರಿ ಯೋಜನೆಗಳ ಲಾಭವನ್ನು ಸಾಮಾನ್ಯ ನಾಗರಿಕರಿಗೆ ದೊರಕಿಸಿ ಕೊಡುವ ತಳಮಳವಿರುವ ಕೆಲವು ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಭೇಟಿಯಾಗುತ್ತಾರೆ. ಅದೇ ರೀತಿ ಕೆಲವೊಮ್ಮೆ ಸರಕಾರಿ ಯೋಜನೆಗಳ ಲಾಭವನ್ನು ನಾಗರಿಕರಿಗೆ ಕೊಡುವಾಗ ಅವರಿಗೆ ತುಂಬಾ ತೊಂದರೆಗಳನ್ನು ಕೊಡುವ ಅವರನ್ನು ದುಡಿಸಿಕೊಳ್ಳುವ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಭೇಟಿಯಾಗುತ್ತಾರೆ.

೩. ತಾವು ಖಾಸಗಿ ಕಂಪನಿಯಲ್ಲಿ ನೌಕರಿಯನ್ನು ಮಾಡುವಾಗ, ಆ ಕಂಪನಿಯ ಮಾಲೀಕರು ಪ್ರಾಮಾಣಿಕತನದಿಂದ ಮತ್ತು ಗ್ರಾಹಕರ ಹಿತವನ್ನು ಕಾಪಾಡಿ ವ್ಯವಸಾಯವನ್ನು ಮಾಡುವವರಾಗಿರುತ್ತಾರೆ ಮತ್ತು ಕೆಲವರು ಕಾನೂನುಬಾಹಿರ ಮಾರ್ಗದಿಂದ ಹಣವನ್ನು ಗಳಿಸುವ ಅಥವಾ ಗ್ರಾಹಕರನ್ನು ಲೂಟಿ ಮಾಡುವವರಾಗಿತ್ತಾರೆ, ಈ ರೀತಿಯ ಅನುಭವಗಳು ತಮಗೆ ಬಂದಿರಬಹುದು.

೪. ತಾವು ಸರಕಾರಿ ಅಧಿಕಾರಿಗಳು ಅಥವಾ ಸಿಬ್ಬಂದಿಗಳಾಗಿರುವಾಗ ತಮ್ಮ ಮೇಲೆ ಕಾನೂನುಬಾಹಿರ ಕೆಲಸಗಳನ್ನು ಮಾಡಲು ಅನಿಯಮಿತ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಲು ಅಥವಾ ಭಷ್ಟಾಚಾರವನ್ನು ಮಾಡಲು ಯಾರಾದರೂ ಒತ್ತಡವನ್ನು ಹಾಕಿರುತ್ತಾರೆ. ಆ ಸಮಯದಲ್ಲಿ ನಾವು ಇಂತಹವರ ವಿರುದ್ಧ ಕಾನೂನುಮಾರ್ಗದಿಂದ ಹೋರಾಡಿರುತ್ತೇವೆ.

ತಮಗೆ ಮೇಲಿನಂತಹ ಅಥವಾ ಇತರ ಒಳ್ಳೆಯ ಅಥವಾ ಕಹಿ ಅನುಭವಗಳು ಬಂದಿದ್ದರೆ, ನಮಗೆ ತಪ್ಪದೇ ತಿಳಿಸಿರಿ. ತಮ್ಮ ಅನುಭವಗಳಿಂದ ಇತರರಿಗೆ ಕಲಿಯುವ ಅವಕಾಶ ಸಿಗುವುದು. ಒಳ್ಳೆಯ ಅನುಭವಗಳಿಂದ ಸಮಾಜದಲ್ಲಿನ ಒಳ್ಳೆಯ ಪ್ರವೃತ್ತಿಯ ಜನರ ಬಗ್ಗೆ ಮಾಹಿತಿ ದೊರಕಿ ಸಮಾಜವ್ಯವಸ್ಥೆಯ ಒಳ್ಳೆಯ ಬದಿಯನ್ನು ತಿಳಿದುಕೊಳ್ಳಲು ಸಹಾಯವಾಗುವುದು. ಹಾಗೆಯೇ ಕಹಿ ಅನುಭವಗಳಿಂದ ‘ಕಾನೂನು ಮಾರ್ಗದಿಂದ ಉಪಾಯಯೋಜನೆಗಳನ್ನು ಹೇಗೆ ಕಂಡು ಹಿಡಿಯಬಹುದು ?’ ಎಂಬುದಕ್ಕೆ ಮಾರ್ಗ ಸಿಗಲು ಸಹಾಯವಾಗುವುದು.

ಈ ಅನುಭವಗಳನ್ನು ಪ್ರಕಟಿಸುವಾಗ ತಮಗೆ ‘ತಮ್ಮ ಹೆಸರನ್ನು ಮುದ್ರಿಸಬಾರದು’, ಎಂದು ಅನಿಸುತ್ತಿದ್ದರೆ ತಾವು ಆ ರೀತಿ ನಮಗೆ ತಿಳಿಸಬಹುದು. ತಮ್ಮ ಹೆಸರನ್ನು ಗುಪ್ತವಾಗಿಡಲಾಗುವುದು.

ತಮ್ಮ ಅನುಭವಗಳನ್ನು ಮುಂದಿನ ವಿಳಾಸಕ್ಕೆ ಕಳುಹಿಸಿರಿ.

ಸುರಾಜ್ಯ ಅಭಿಯಾನ

ಅಂಚೆ ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ, ‘ಮಧುಸ್ಮೃತಿ ಮನೆ ಕ್ರ. ೪೫೭, ಮೊದಲ ಮಹಡಿ, ಬೈಠಕ್ ಸಭಾಗೃಹ, ಸತ್ಯನಾರಾಯಣ ಮಂದಿರದ ಹತ್ತಿರ, ಢವಳಿ, ಫೋಂಡಾ, ಗೋವಾ – ೪೦೩೪೦೧ ಸಂಪರ್ಕ ಕ್ರ. – ೭೭೩೮೨೩೩೩೩೩

ವಿ-ಅಂಚೆ ವಿಳಾಸ[email protected]

ಯಾರಾದರೂ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ಓಟಿಪಿಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ವಂಚನೆಗೊಳಗಾಗದಿರಲು ಅದರತ್ತ ದುರ್ಲಕ್ಷಿಸಿ !

ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಇತ್ತೀಚೆಗೆ ಕೊರೋನಾ ಲಸಿಕೆಯ ನೋಂದಣಿಗಾಗಿ ಆಧಾರ ಕಾರ್ಡ್ ಕ್ರಮಾಂಕ ಅಥವಾ ಸಂಚಾರವಾಣಿಯ ಮೇಲೆ ‘ಓಟಿಪಿ’ (ವನ್ ಟೈಮ್ ಪಾಸವರ್ಡ್) ಕಳುಹಿಸಿ, ಅದನ್ನು ಕೇಳುತ್ತಿದ್ದಾರೆ. ಈ ರೀತಿ ನಾಗರಿಕರನ್ನು ಮೋಸಗೊಳಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿಂದೆಯೂ ಆಯಾ ಸಮಯಕ್ಕೆ ಎದುರಾಗುವ ಸಾಮಾಜಿಕ ಸಮಸ್ಯೆ, ನಾಗರಿಕರ ಅಜ್ಞಾನ ಮತ್ತು ಮುಗ್ಧತೆ ಇತ್ಯಾದಿ ಕಾರಣಗಳಿಂದ ಸಮಾಜದ ದುಷ್ಟಶಕ್ತಿಗಳು ಜನರನ್ನು ಲೂಟಿ ಮಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಮುಂದೆ ತಿಳಿಸಿರುವ ಕೆಲವು ಕಾರಣಗಳಿಗಾಗಿ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಓಟಿಪಿ’ ಕೇಳುವುದು ಅಥವಾ ಕಳುಹಿಸಿದ ಲಿಂಕ್ ‘ಕ್ಲಿಕ್’ ಮಾಡಲು ಹೇಳಿ, ಈ ಹಿಂದೆಯೂ ನಾಗರಿಕರಿಗೆ ಮೋಸ ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ.

೧. ‘ಕೌನ ಬನೇಗಾ ಕರೋಡಪತಿ’ಯಲ್ಲಿ ಬಹುಮಾನ ಬಂದಿದೆ.

೨. ‘ಆನ್‌ಲೈನ್’ ಲಾಟರಿ ಗೆದ್ದಿದ್ದೀರಿ.

. ಪತಿ-ಪತ್ನಿ ಅಥವಾ ಕುಟುಂಬದ ಸಮೇತ ಪ್ರಯಾಣಕ್ಕೆ (‘ಟ್ರಾವಲ್ ಪ್ಯಾಕೇಜ್’ಗಾಗಿ) ನೀವು ಆಯ್ಕೆಯಾಗಿದ್ದೀರಿ.

. ನಿಮಗೆ ವಿದೇಶ ಪ್ರಯಾಣದ ವಿಮಾನದ ಟಿಕೀಟು ಸಿಕ್ಕಿದೆ.

. ಯಾವುದಾದರೂ ಕಂಪನಿಯ ಭಾಗ್ಯಶಾಲಿ ಗ್ರಾಹಕರೆಂದು (ಲಕಿ ಕಸ್ಟಮರ್) ಆಯ್ಕೆಯಾಗಿದ್ದೀರಿ.

. ಅಬಕಾರಿ ಇಲಾಖೆಯಿಂದ (‘ಫಾರೆನ್ ಎಕ್ಸಚೇಂಜ್’ನಿಂದ) ಬೆಲೆಬಾಳುವ ಸಾಮಗ್ರಿಯನ್ನು ಬಿಡಿಸಿಕೊಳ್ಳಬೇಕಾಗಿದೆ.

.  ಚತುಷ್ಚಕ್ರ ವಾಹನ, ತಂಪುಪೆಟ್ಟಿಗೆ (ಫ್ರಿಡ್ಜ್), ಎಲ್.ಇ.ಡಿ. ಟಿ.ವಿ. ಇತ್ಯಾದಿ ಬೆಲೆಬಾಳುವ ಸಾಮಗ್ರಿಗಳ ಬಹುಮಾನವನ್ನು ಗೆದ್ದಿದ್ದೀರಿ.

. ಸಂಚಾರವಾಣಿಯ ‘ಸಿಮ್‌ಕಾರ್ಡ್’ನ ಇತರ ಕಂಪನಿಗಳಿಗೆ ಉಚಿತವಾಗಿ ಬದಲಾಯಿಸಿ (ಪೋರ್ಟ್) ಕೊಡಲಾಗುವುದು.

. ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರಾತಿಯಾಗಿದೆ.

೧೦. ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಲಾಗಿದೆ.

೧೧. ನಿಮ್ಮ ಖಾತೆಯ ‘ಪಿನ್’ ಕ್ರಮಾಂಕವನ್ನು ಬದಲಾಯಿಸಬೇಕಾಗಿದೆ.

ಈ ರೀತಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಮಧುರವಾದ ಮಾತಿನಲ್ಲಿಯೇ ನಾಗರಿಕರನ್ನು ಮರಳು ಮಾಡುತ್ತಾರೆ. ಈ ರೀತಿ ಅಜಾಗರೂಕತೆಯಿಂದ ಮೋಸಗೊಳಿಸುವ ಜನರ ಮರಳು ಮಾತಿಗೆ ಅಥವಾ ಬಹುಮಾನದ ಆಮಿಷಗಳಿಗೆ ಬಲಿಯಾಗಿ ನಾಗರಿಕರು ಮೋಸಕ್ಕೊಳಗಾಗುತ್ತಾರೆ.

ವಾಸ್ತವದಲ್ಲಿ ಯಾವುದೇ ಕಾರಣಕ್ಕೂ ನಾಗರಿಕರಿಂದ ಸಂಚಾರವಾಣಿಯಲ್ಲಿ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಓಟಿಪಿ’ಯನ್ನು ಕೇಳುವುದಿಲ್ಲವೆಂದು ಸರಕಾರ-ಆಡಳಿತ ಸಂಸ್ಥೆಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವರು ಆಗಾಗ ಸ್ಪಷ್ಟಪಡಿಸಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಯಾರಾದರೂ ನಿಮ್ಮ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ಒಟಿಪಿಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ಅಥವಾ ಬಹುಮಾನ ಬಂದಿದೆಯೆಂದು ತಿಳಿಸಿ ‘ಲಿಂಕ್’ ಕಳುಹಿಸಿ ಅದನ್ನು ಕ್ಲಿಕ್ ಮಾಡಲು ಹೇಳಿದರೆ, ತಕ್ಷಣವೇ ಅದನ್ನು ನಿರ್ಲಕ್ಷಿಸಬೇಕು ಹಾಗೂ ಈ ರೀತಿ ಮೋಸ ಮಾಡುವವರ ಕರೆಗಳಿಗೆ ಸ್ಪಂದಿಸದೇ ನಿಮ್ಮ ಆರ್ಥಿಕ ಹಾನಿಯಾಗುವುದನ್ನು ತಡೆಯಬೇಕು.

ಈ ರೀತಿ ಮೋಸದ ಪ್ರಕರಣಗಳ ದೂರು ದಾಖಲಿಸಿದ ಬಳಿಕ ಅದರ ತನಿಖೆ ನಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ತಪ್ಪಿತಸ್ಥರು ಸಿಗುವ ಮತ್ತು ಅವರಿಗೆ ಶಿಕ್ಷೆಯಾಗುವ ಪ್ರಮಾಣವು ಬಹಳ ಕಡಿಮೆಯಿದೆ ಅಥವಾ ಇಲ್ಲವೆಂದೇ ಹೇಳಬಹುದು. ‘Prevention is better than cure’ ಎನ್ನುವಂತೆ ಸಮಯ ಇರುವಾಗಲೇ ಜಾಗರೂಕರಾಗಿ ಸಂಭಾವ್ಯ ಹಾನಿ ತಡೆಯಬೇಕು. ಅದೇ ರೀತಿ ಕುಟುಂಬದವರು, ಸ್ನೇಹಿತರನ್ನು ಎಚ್ಚರಿಸಬೇಕು.