‘ಪ್ರಸಾರದ ಅನೇಕ ಸಾಧಕರು ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿ ಸುತ್ತಾ ಧರ್ಮಪ್ರಸಾರದ ಸೇವೆಯನ್ನು ಮಾಡುತ್ತಾರೆ. ಅವರು ಮನೆಯಲ್ಲಿರುವಾಗ ಕೆಲವೊಮ್ಮೆ ಸಹಸಾಧಕರು ಸೇವೆಯ ವಿಷಯದಲ್ಲಿ ಅವರಿಗೆ ಸಂಚಾರಿವಾಣಿಯ ಮೂಲಕ ಕರೆ ಮಾಡಿ ಸಂಪರ್ಕಿಸುತ್ತಾರೆ ಮತ್ತು ಸೇವೆಯ ಬಗ್ಗೆ ಮಾತನಾಡುತ್ತಾರೆ. ಇದರಿಂದ ಮನೆಗೆಲಸ ಮತ್ತು ಇತರ ಕೆಲಸಗಳನ್ನು ಮಾಡುವಾಗ ಸಾಧಕ ರಿಗೆ ಅಡಚಣೆಯಾಗುತ್ತದೆ. ಇದರಿಂದ ಕುಟುಂಬ ದವರಿಗೆ ತೊಂದರೆಯಾಗಬಹುದು, ಹಾಗೆಯೇ ಕಾರ್ಯಾ ಲಯದ ಕೆಲಸ ಮತ್ತು ವ್ಯವಸಾಯವನ್ನು ಮಾಡುವ ಸಾಧಕರಿಗೂ ಈ ರೀತಿಯ ಅಡಚಣೆ ಬರುತ್ತದೆ. ಇದನ್ನು ತಡೆಗಟ್ಟಲು ಪ್ರಸಾರದ ಸಾಧಕರು ‘ಸಹಸಾಧಕರು ಮತ್ತು ಜವಾಬ್ದಾರ ಸಾಧಕರು ತಮ್ಮನ್ನು ಯಾವ ಸಮಯದಲ್ಲಿ ಸಂಚಾರ ವಾಣಿಯ ಮೂಲಕ ಸಂಪರ್ಕಿಸಬೇಕು ?’, ಎಂಬುದರ ಲಭ್ಯ ಸಮಯದ ಬಗ್ಗೆ ಅವರಿಗೆ ತಿಳಿಸಬೇಕು. ಆಶ್ರಮದಲ್ಲಿರುವ ಸಾಧಕರೂ ‘ಮನೆಯಲ್ಲಿರುವ ಕುಟುಂಬದವರು ಯಾವ ಸಮಯದಲ್ಲಿ ಸಂಪರ್ಕ ಮಾಡಬೇಕು ?’, ಎಂಬುದನ್ನು ಅವರಿಗೆ ಸೂಚಿಸಬೇಕು.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧೦.೨೦೨೨)