ನವರಾತ್ರಿಯ ಅವಧಿಯಲ್ಲಿ ನಡೆಯುವ ಧರ್ಮಹಾನಿ ತಡೆದು ಹಾಗೂ ‘ಆದರ್ಶ ನವರಾತ್ರ್ಯುತ್ಸವ’ ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಯನ್ನು ಸಂಪಾದಿಸಿ !

ಸಾಧಕರಿಗೆ ಸೂಚನೆ ಮತ್ತು ಧರ್ಮಪ್ರೇಮಿ ಹಾಗೂ ಹಿಂದುತ್ವನಿಷ್ಠರಲ್ಲಿ ವಿನಂತಿ !

‘೨೬.೯.೨೦೨೨ ರಿಂದ ನವರಾತ್ಯುತ್ಸವ ಆರಂಭವಾಗುತ್ತಿದೆ. ಈ ಉತ್ಸವವನ್ನು ಇಡೀ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಉತ್ಸಾಹದಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಕಾಲಾವಧಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ನವರಾತ್ರಿ ನಿಮಿತ್ತ ವ್ಯಾಪಕ ಧರ್ಮಪ್ರಸಾರವಾಗಲು ಮುಂದಿನಂತೆ ಪ್ರಯತ್ನಿಸಿ ದೇವಿಕೃಪೆಯನ್ನು ಸಂಪಾದಿಸಿ.

೧. ದೇವಿಯ ದೇವಸ್ಥಾನದ ವಿಶ್ವಸ್ಥರು ಹಾಗೂ ಅರ್ಚಕರನ್ನು ಸಂಪರ್ಕಿಸುವುದು

ಅ. ದೇವಸ್ಥಾನದ ವಿಶ್ವಸ್ಥರು ಹಾಗೂ ಅರ್ಚಕರನ್ನು ಭೇಟಿಯಾಗಿ ಕುಲದೇವತೆಯ ನಾಮಜಪದ ಪಟ್ಟಿಯ ಪ್ರಾಯೋಜಕತ್ವವನ್ನು ನೀಡುವಂತೆ ಹೇಳುವುದು.

ಆ. ದೇವಿಗೆ ಕುಂಕುಮಾರ್ಚನೆ ಮಾಡಲು ಸನಾತನದ ಕುಂಕುಮ ಬಳಸುವಂತೆ ಅರ್ಚಕರನ್ನು ಹುರಿದುಂಬಿಸುವುದು.

ಇ. ದೇವಿಯ ದೇವಸ್ಥಾನದ ಬಳಿ ಸನಾತನದ ಪ್ರಕಾಶನ ಮಾಡಿರುವ ಗ್ರಂಥ, ಕಿರುಗ್ರಂಥ, ಸಾತ್ತ್ವಿಕ ಉತ್ಪಾದನೆಗಳು ಹಾಗೂ ಪಂಚಾಂಗಗಳ ಪ್ರದರ್ಶನ ಏರ್ಪಡಿಸುವುದು.

ಈ. ‘ಶಾಸ್ತ್ರೀಯ ಪದ್ದತಿಯಲ್ಲಿ ದೇವಿಯ ಉಪಾಸನೆಯನ್ನು ಹೇಗೆ ಮಾಡಬೇಕು ?’, ಎಂಬ ಕುರಿತು ಅಮೂಲ್ಯ ಜ್ಞಾನ ನೀಡುವ ಹಾಗೂ ಧರ್ಮಶಿಕ್ಷಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ‘ಫ್ಲೆಕ್ಸ್’ಗಳ ಪ್ರದರ್ಶನವನ್ನೂ ವಿವಿಧ ದೇವಸ್ಥಾನಗಳಲ್ಲಿ ಏರ್ಪಡಿಸಬಹುದು.

೨. ನವರಾತ್ರ್ಯುತ್ಸವ ಮಂಡಳಿಗಳ ಮುಖ್ಯಸ್ಥರನ್ನು ಭೇಟಿಯಾಗುವುದು

ಅ. ಧರ್ಮಶಾಸ್ತ್ರಕ್ಕನುಸಾರ ಈ ಉತ್ಸವವನ್ನು ಆಚರಿಸಲು ಹಾಗೂ ವ್ಯಾಪಕವಾಗಿ ಧರ್ಮಪ್ರಸಾರ ಮಾಡಲು ನವರಾತ್ರ್ಯುತ್ಸವ ಮಂಡಳಿಯ ಮುಖ್ಯಸ್ಥರಿಗೆ ಕರೆ ನೀಡಬಹುದು. ಅದಕ್ಕಾಗಿ ಧರ್ಮಶಿಕ್ಷಣ ವರ್ಗದಲ್ಲಿ ಧರ್ಮಪ್ರೇಮಿ ಹಾಗೂ ಹಿಂದುತ್ವನಿಷ್ಠರ ಸಹಾಯವನ್ನು ಪಡೆಯಬಹುದು.

ಆ. ಕೆಲವೊಂದು ಮಂಡಳಿಗಳು ದೇವಿಯ ಮೂರ್ತಿಯನ್ನು ಅಸಾತ್ತ್ವಿಕವಾಗಿ ತಯಾರಿಸಿ ಪ್ರತಿಷ್ಠಾಪಿಸುತ್ತಾರೆ. ಅವರಿಗೆ ಧರ್ಮಶಾಸ್ತ್ರಕ್ಕನುಸಾರ ಯೋಗ್ಯವಾಗಿರುವ ಮೂರ್ತಿಯ ಪ್ರತಿಷ್ಠಾಪನೆ ಮಾಡಲು ಪ್ರೇರೇಪಿಸುವುದು.

ಇ. ಮಂಡಳಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ‘ಶಕ್ತಿಯ ಉಪಾಸನೆಯ ಮಹತ್ವ’, ‘ಸಾಧನೆ’, ‘ಹಿಂದೂ ರಾಷ್ಟ್ರ ಏಕೆ ಬೇಕು ?’ ಇತ್ಯಾದಿಗಳ ಕುರಿತು ಪ್ರವಚನಗಳನ್ನು ಆಯೋಜಿಸುವುದು. ‘ಹಿಂದೂ ಯುವಕ-ಯುವತಿಯರು ಆತ್ಮರಕ್ಷಣೆಯ ತರಬೇತಿ ಪಡೆಯುವ ಅವಶ್ಯಕತೆ’, ಈ ವಿಷಯವನ್ನು ಮಂಡಿಸಿ ಅದರ ಪ್ರಾತ್ಯಕ್ಷಿಕೆಯನ್ನೂ ತೋರಿಸಬಹುದು.

ಈ. ಮಂಡಳಿಯಲ್ಲಿ ನಡೆಸಲಾಗುವ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪ್ರಶಸ್ತಿ ಎಂದು ಹಾಗೂ ಕಾರ್ಯಕ್ರಮಕ್ಕಾಗಿ ಮಂಡಳಿಗಳಿಗೆ ಭೇಟಿ ನೀಡುವ ಅತಿಥಿಗಳಿಗೆ ಉಡುಗೊರೆ ಎಂದು ಸನಾತನದ ಗ್ರಂಥ, ಕಿರುಗ್ರಂಥ ಹಾಗೂ ಇತರ ಉತ್ಪಾದನೆ ನೀಡಲು ಸಲಹೆ ನೀಡಬಹುದು.

ಉ. ದೇವಿಯ ಪೂಜೆಗಾಗಿ ಊದುಬತ್ತಿ, ಕರ್ಪೂರ, ಕುಂಕುಮ, ಅಷ್ಟಗಂಧ ಇತ್ಯಾದಿ ಸನಾತನ ನಿರ್ಮಿತ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವಂತೆ ವಿನಂತಿಸಿ.

೩. ಜನಸಾಮಾನ್ಯರ ಪ್ರಬೋಧನೆ ಹಾಗೂ ವ್ಯಾಪಕ ಸಂಘಟನೆ ಮಾಡುವುದು

ಅ. ದೇವಿತತ್ತ್ವದ ಹೆಚ್ಚೆಚ್ಚು ಲಾಭವಾಗಲು ದೇವಿಭಕ್ತರ ಸಹಾಯದಿಂದ ‘ಶ್ರೀ ದುರ್ಗಾದೇವಿಯೈ ನಮಃ |’ ಈ ಜಪವನ್ನು ಸಾಮೂಹಿಕವಾಗಿ ಮಾಡಲು ಆಯೋಜಿಸುವುದು.

ಆ. ಹೆಚ್ಚಿನವರು ನವರಾತ್ರಿಯಲ್ಲಿ ಪ್ರತಿದಿನ ಕುಮಾರಿಕಾ ಪೂಜೆ ಮಾಡಿ ಆಕೆಗೆ ಭೋಜನ ಹಾಗೂ ಉಡುಗೊರೆ ನೀಡುತ್ತಾರೆ. ಸನಾತನದ ‘ಬಾಲಸಂಸ್ಕಾರ’ ಮಾಲಿಕೆಯ ‘ಬೋಧಕಥೆ’, ‘ಅಧ್ಯಯನ ಹೇಗೆ ಮಾಡಬೇಕು ?’, ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸ’ ಇತ್ಯಾದಿ ಗ್ರಂಥಗಳನ್ನು ಕುಮಾರಿಕಾಗೆ ಉಡುಗೊರೆ ಎಂದು ನೀಡಬಹುದು.

ಇ. ದಾಂಡಿಯಾ, ಗರಬಾ ಇತ್ಯಾದಿಗಳ ಮಾಧ್ಯಮದಿಂದ ಅಸಹ್ಯಕರ ನೃತ್ಯ ಮಾಡುವುದು, ಅಶ್ಲೀಲವಾಗಿ ಅಂಗಪ್ರದರ್ಶನ ಮಾಡುವುದು ಇತ್ಯಾದಿ ದುರಾಚಾರ ಆಗುತ್ತಿದೆ, ಅದೇ ರೀತಿ ‘ಲವ್ ಜಿಹಾದ್’ ನಂತಹ ಘಟನೆಗಳೂ ಹೆಚ್ಚಾಗುತ್ತಿದೆ. ಆದ್ದರಿಂದ ಪವಿತ್ರವಾಗಿರುವ ಈ ನೃತ್ಯೋಪಾಸನೆಯು ವಿಕೃತಿಯ ಸ್ವರೂಪ ಆಗಿದೆ. ಈ ಕುರಿತು ಯುವಕ-ಯುವತಿಯರನ್ನು ಪ್ರಬೋಧನೆ ಮಾಡುವುದು.

ಈ. ‘ಸನಾತನ ಚೈತನ್ಯವಾಣಿ ಆ್ಯಪ್’ನ ಶ್ರೀ ದುರ್ಗಾಸಪ್ತ ಶ್ಲೋಕ, ಶ್ರೀ ದುರ್ಗಾದೇವಿಯ ನಾಮಜಪ ಇತ್ಯಾದಿಗಳ ಮಾಹಿತಿ ನೀಡಿ ‘ಆ್ಯಪ್ ಡೌನ್‌ಲೋಡ್’ ಮಾಡಿಕೊಳ್ಳಲು ಪ್ರಬೋಧನೆ ಮಾಡುವುದು. ಅದರಲ್ಲಿ ಸಾತ್ತ್ವಿಕ ನಾಮಜಪದ ಲಾಭ ಪಡೆಯಲು ಕರೆ ನೀಡಬಹುದು.

೪. ಶಿಬಿರಗಳ ಆಯೋಜನೆ ಮಾಡುವುದು

‘ಸಾರ್ವಜನಿಕ ಉತ್ಸವ ಸಮನ್ವಯ ಶಿಬಿರ’ವನ್ನು ಸಾಧ್ಯವಿರುವ ಸ್ಥಳಗಳಲ್ಲಿ ಆಯೋಜಿಸುವುದು. ಇದಕ್ಕಾಗಿ ರಾಷ್ಟ್ರ-ಧರ್ಮ ಪ್ರೇಮಿ ಮಂಡಳಿಯ ಸಂಘಟನೆ ಮಾಡಿ ಮಂಡಳಿಯ ಮುಖ್ಯಸ್ಥರೊಂದಿಗೆ ಆತ್ಮೀಯತೆ ಹೊಂದಬೇಕು. ಈ ಸಂಘಟನೆಯ ಮಾಧ್ಯಮದಿಂದ ಹಿಂದೂ ರಾಷ್ಟ್ರ ನಿರ್ಮಾಣದ ಪ್ರಯತ್ನಕ್ಕೆ ವೇಗ ಸಿಗಲಿದೆ.

ನವರಾತ್ರ್ಯುತ್ಸವದಿಂದ ಆಗುವ ಧರ್ಮಹಾನಿಯನ್ನು ತಡೆಗಟ್ಟಲು ನ್ಯಾಯಯುತಮಾರ್ಗದಿಂದ ಪ್ರಯತ್ನವನ್ನು ಮಾಡಿ ಉತ್ಸವದ ಪಾವಿತ್ರ್ಯ ಕಾಪಾಡುವುದು, ಪ್ರತಿಯೊಬ್ಬ ದೇವಿಯ ಭಕ್ತರ ಪ್ರಥಮ ಕರ್ತವ್ಯವಾಗಿದೆ. ಈ ದುರಾಚಾರ ತಡೆಗಟ್ಟಿ ‘ಆದರ್ಶ ನವರಾತ್ರ್ಯುತ್ಸವ’ ಆಚರಿಸುವುದು ಹಾಗೂ ಇತರರಿಗೂ ಅದಕ್ಕಾಗಿ ಪ್ರೇರೇಪಿಸುವುದು ದೇವಿಯ ಸರ್ವಶ್ರೇಷ್ಠ ಉಪಾಸನೆಯಾಗಲಿದೆ !’ (೧೦.೯.೨೦೨೨)

ಪಕ್ಕದಲ್ಲಿ ನೀಡಿದ ಗ್ರಂಥಗಳೊಂದಿಗೆ ಈ ಮುಂದಿನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನೂ ವಿತರಿಸಬಹುದು !

೧ ಅ. ಗ್ರಂಥ

ಅ. ಹಬ್ಬಗಳನ್ನು ಆಚರಿಸುವ  ಯೋಗ್ಯ ಪದ್ಧತಿ ಮತ್ತು ಶಾಸ್ತ್ರ

ಆ. ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ

ಇ. ಆಭರಣಶಾಸ್ತ್ರ

ಈ. ಸ್ತ್ರೀ ಪುರುಷರ ಆಭರಣ

ಉ. ಸ್ತ್ರೀಯರ ಅಲಂಕಾರಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಅಲಂಕಾರಗಳು)

೧ ಆ. ಕಿರುಗ್ರಂಥ

ಆ. ಸಾತ್ತ್ವಿಕ ರಂಗೋಲಿಗಳು