ಶ್ರೀರಾಮ, ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ಮಹತ್ವ !
ನಿರ್ಗುಣ ಈಶ್ವರನು ಭಕ್ತರಿಗೆ ಆನಂದವನ್ನು ನೀಡಲು ಸಗುಣ ರೂಪದಲ್ಲಿ ಬರುತ್ತಾನೆ. ಆನಂದಮಯ ಅವತಾರೀ ಲೀಲೆಯನ್ನು ಮಾಡುತ್ತಾನೆ ಮತ್ತು ಪುನಃ ನಿರ್ಗುಣದಲ್ಲಿ ವಿಲೀನನಾಗುತ್ತಾನೆ. ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೂ ನಮ್ಮೆಲ್ಲರಿಗಾಗಿ ನಿರ್ಗುಣ ಈಶ್ವರನ ಸಗುಣ ರೂಪದ ಆನಂದವನ್ನು ಪಡೆಯುವ ಕ್ಷಣವಾಗಿದೆ.