ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಖದ ಮೇಲಿನ ಮಂದಹಾಸವು ಮಗುವಿನಂತೆ ನಿರ್ಮಲವೆನಿಸುವುದು

ಸದ್ಗುರು (ಡಾ.) ಮುಕುಲ ಗಾಡಗೀಳ

ಜೀವವು ತನು, ಮನ, ಬುದ್ಧಿ, ಚಿತ್ತ, ಅಹಂ ಮತ್ತು ಪ್ರಕೃತಿ ಇವುಗಳಿಂದ ತಯಾರಾದ ತನ್ನ ಅಸ್ತಿತ್ವದ ಅಂದರೆ ಸರ್ವಸ್ವದ ತ್ಯಾಗ ಮಾಡಿದ ನಂತರ ಅದಕ್ಕೆ ಈಶ್ವರೇಚ್ಛೆಯಿಂದ ಕಾರ್ಯ ಮಾಡಿ  ಈಶ್ವರಸ್ವರೂಪವಾಗಲು ಬರುತ್ತದೆ. ಸಾಧನೆಯಿಂದ ಆಧ್ಯಾತ್ಮಿಕ ಉನ್ನತಿಯಾಗತೊಡಗಿದಾಗ ವ್ಯಕ್ತಿಯ ದೇಹ ಮತ್ತು ಅವನು ಉಪಯೋಗಿಸುವ ವಸ್ತುಗಳಲ್ಲಿಯೂ ದೈವೀ ಪರಿವರ್ತನೆ ಕಂಡು ಬರುತ್ತದೆ. ಅವುಗಳ ಮೇಲೆ ಮೂಡಿದ ಶುಭಚಿಹ್ನೆಗಳು ವ್ಯಕ್ತಿಯಲ್ಲಿ ಹೆಚ್ಚಾಗುತ್ತಿರುವ ದೇವತ್ವದ ಅನುಭೂತಿಯನ್ನು ನೀಡುತ್ತದೆ.  ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮುಖಮಂಡಲದಲ್ಲಾದ ಬುದ್ಧಿಗೆ ಮೀರಿದ ದೈವೀ ಪರಿವರ್ತನೆಯ ಶಾಸ್ತ್ರವನ್ನು ಲೇಖನದ ಮೂಲಕ ನೋಡೋಣ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಖದ ಮೇಲೆ ಮಗುವಿನಂತೆ ನಿರ್ಮಲ ನಗು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಇಲ್ಲಿನೀಡಲಾದ ಛಾಯಾಚಿತ್ರವು ಜುಲೈ ೨೦೨೧ ರಲ್ಲಿ ಗುರುಪೂರ್ಣಿಮೆ ದಿನದಂದು ತೆಗೆಯಲಾಗಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಈ ಛಾಯಾಚಿತ್ರವನ್ನು ನೋಡಿದಾಗ, “ಈ ಛಾಯಾಚಿತ್ರದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಮುಖದಲ್ಲಿನ ನಗು ಎಷ್ಟು ನಿರ್ಮಲ ಮತ್ತು ಮಗುವಿನಂತೆ ಇದೆಯಲ್ಲವೇ !” ಎಂದು ಹೇಳಿದರು. ಪರಾತ್ಪರ ಗುರು ಡಾ. ಆಠವಲೆಯವರು ಹೀಗೆ ಹೇಳುವುದರ ಹಿಂದಿನ ಕಾರಣ ನನಗೆ ಮುಂದಿನಂತೆ ಅರಿವಾಯಿತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ಪರಾತ್ಪರ ಗುರು ಡಾ. ಆಠವಲೆಯವರ ‘ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದಾರೆ’, ಆದ್ದರಿಂದ ಅವರ ಆಧ್ಯಾತ್ಮಿಕ ಅರ್ಹತೆ ಬಹಳ ದೊಡ್ಡದಿದೆ. ಪ್ರತಿಯೊಬ್ಬ ವ್ಯಕ್ತಿಯು ಆರಂಭದಲ್ಲಿ ಮಗುವೇ ಇರುತ್ತಾನೆ. ಮಗುವಿನ ಮನಸ್ಸು ಅತ್ಯಂತ ನಿರ್ಮಲವಾಗಿರುತ್ತದೆ. ಆದ್ದರಿಂದ ಅದು ಯಾವಾಗ ನಗುವುದೋ, ಆಗ ಅದರ ನಗು ನಮಗೆ ಬಹಳ ಮುಗ್ಧವಿದೆ ಎಂದು ಅರಿವಾಗುತ್ತದೆ. ಯಾರಾದರೊಬ್ಬ ವ್ಯಕ್ತಿ ಅಧ್ಯಾತ್ಮದಲ್ಲಿ ಉನ್ನತಿ ಮಾಡಿಕೊಂಡು ‘ಸಂತಪದವಿ’ (ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು) ಯನ್ನು ತಲುಪುವನೋ, ಆಗ ಅವನಲ್ಲಿ ಚೈತನ್ಯವು ಹೆಚ್ಚಾಗುತ್ತದೆ. ಅವನು ‘ಸದ್ಗುರುಪದವಿ’ಯಲ್ಲಿ ವಿರಾಜಮಾನವಾದಾಗ (ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟ) ಅವನಲ್ಲಿ ಆನಂದದ ಅರಿವಾಗತೊಡಗುತ್ತದೆ. ಅಧ್ಯಾತ್ಮದಲ್ಲಿ ಇನ್ನೂ ಮುಂದಿನ ಮಾರ್ಗಕ್ರಮಣದಲ್ಲಿ, ಅವನು ಶಾಂತಿಯ ಹಂತದ ಕಡೆಗೆ ಅಂದರೆ ನಿರ್ಗುಣ ಸ್ತರದ ಕಡೆಗೆ ಹೋಗತೊಡಗುತ್ತಾನೆ. ಇಂತಹ ವ್ಯಕ್ತಿಯು ನಿಜವಾಗಿಯೂ ಮಗುವಿನಂತೆ ಇರುತ್ತಾನೆ; ಏಕೆಂದರೆ ಅವನಲ್ಲಿ ಅಹಂನ ಪ್ರಮಾಣ ತೀರಾ ನಗಣ್ಯವಾಗಿರುತ್ತದೆ. ಆದ್ದರಿಂದ ಅವನ ನಿರ್ಮಲತೆ ಅವನ ನಗುವಿನಲ್ಲಿ ಮತ್ತು ವರ್ತನೆಯಲ್ಲಿ ಕಾಣಿಸುತ್ತದೆ. ಇದರಿಂದ ವ್ಯಕ್ತಿಯ ಪ್ರವಾಸ ಮಗುವಿನ ನಿರ್ಮಲತೆಯಿಂದ ಆರಂಭವಾಗಿ ಕೊನೆಗೆ ಪುನಃ ಆ ನಿರ್ಮಲತೆಯಲ್ಲಿಯೇ ಮುಗಿಯುತ್ತದೆ, ಎಂದು ಗಮನಕ್ಕೆ ಬರುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ವಿಷಯದಲ್ಲಿ ಹಾಗೆಯೇ ಆಗಿದೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ವಾಚಕರಿಗೆ ಮನವಿ

‘ಮುದ್ರಣದ ತಾಂತ್ರಿಕ ಅಡಚಣೆಯಿಂದ ಇಲ್ಲಿ ಮುದ್ರಿಸಿದ ಛಾಯಾಚಿತ್ರ ಇದ್ದ ಹಾಗೆ ಮುದ್ರಿಸಲ್ಪಡುವ ಸಾಧ್ಯತೆ ಇಲ್ಲ. ಅದಕ್ಕಾಗಿ ಮತ್ತು ಪ್ರತಿಯೊಬ್ಬರಿಗೆ ಈ ಬದಲಾವಣೆ ಕಾಣಿಸಬೇಕೆಂದು ಮತ್ತು ವಿಷಯ ತಿಳಿಯಬೇಕೆಂದು ಈ ಬದಲಾವಣೆಯನ್ನು ಗಣಕಯಂತ್ರದ ಸಹಾಯದಿಂದ ಇನ್ನಷ್ಟು ಎದ್ದು ಕಾಣಿಸುವಂತೆ ಮಾಡಲಾಗಿದೆ. ಮೂಲ ಛಾಯಾಚಿತ್ರಗಳು ಸ್ಪಷ್ಟ ಕಾಣಿಸಲು ವಾಚಕರು ‘ಸನಾತನ ಪ್ರಭಾತ’ದ ಜಾಲತಾಣದ https://bit.ly/3FUy5eA ಈ ‘ಲಿಂಕ್’ಗೆ ಭೇಟಿ ನೀಡಬೇಕು. (ಈ ಲಿಂಕ್‌ನ ಕೆಲವು ಅಕ್ಷರಗಳು ‘ಕ್ಯಾಪಿಟಲ್’ ಇವೆ)

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು