
೧. ಸಾಧಕರ ಮತ್ತು ಶಿಷ್ಯರ ಆಯೋಜನೆಯಲ್ಲಿನ ವ್ಯತ್ಯಾಸ
‘ಸಾಧಕನ ಆಯೋಜನೆಯನ್ನು ಸಾಧಕನು ಸ್ವತಃ ಮಾಡಬೇಕಾಗುತ್ತದೆ. ಶಿಷ್ಯನ ಆಯೋಜನೆ ಮಾತ್ರ ಗುರುಗಳೇ ಮಾಡುತ್ತಾರೆ. ಒಂದು ಬಾರಿ ದೇವರ ಭಕ್ತನಾದ ಮೇಲೆ, ಅವನ ಜೀವನದ ಎಲ್ಲ ಆಯೋಜನೆಗಳನ್ನು ದೇವರೇ ಮಾಡುತ್ತಾರೆ; ಆದುದರಿಂದಲೇ ದೇವರ ಭಕ್ತರಾಗಿರುವ ಸಂತರು, ‘ನಮ್ಮ ಆಯೋಜನೆಯನ್ನು ನಾವು ಮಾಡುವುದೇ ಇಲ್ಲ. ಎಲ್ಲವನ್ನು ದೇವರೇ ನೋಡಿಕೊಳ್ಳುತ್ತಾರೆ,’ ಎಂದು ಹೇಳುತ್ತಾರೆ.
೨. ಭಾವವಿದ್ದರೆ, ಕರ್ಮವು ಅಕರ್ಮವಾಗುತ್ತದೆ.
೩. ಕನಿಷ್ಠ ದೇವತೆಗಳ ಮತ್ತುಉಚ್ಚ ದೇವತೆಗಳ ಕಾರ್ಯದಲ್ಲಿನ ವ್ಯತ್ಯಾಸ
ಕನಿಷ್ಠ ದೇವತೆಗಳು ಕರ್ಮದ ಸ್ತರದಲ್ಲಿ, ಅಂದರೆ ಸಕಾಮ ಸ್ತರದಲ್ಲಿ ತಾತ್ಕಾಲಿಕ ಮಾರ್ಗದರ್ಶನವನ್ನು ನೀಡುತ್ತಿದ್ದರೆ, ಉಚ್ಚ ದೇವತೆಗಳು ಸಾಧಕನಿಗೆ ಕರ್ಮದ ಆಚೆಗೆ ಹೋಗಿ ಶಾಶ್ವತವಾದ ಆನಂದಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತಾರೆ.
೪. ಸಾಧಕನ ಸಾಧನೆಯ ಪ್ರಯಾಣದಲ್ಲಿ ಗುರುಗಳ ಸಹಾಯ ಅತ್ಯಂತ ಮಹತ್ವದ್ದಾಗಿದೆ
ಸಾಧಕನು ಸಾಧನೆಯ ಪ್ರಯಾಣದಲ್ಲಿ ಹಂತ ಹಂತವಾಗಿ ಮುಂದು ಮಂದಿನ ಪ್ರಯಾಣ ಮಾಡುತ್ತಿರುತ್ತಾನೆ. ಇದರಲ್ಲಿ ಅವನಿಗೆ ಅನಂತ ಅಡಚಣೆಗಳು ಬರುತ್ತವೆ; ಆದರೆ ಅವನಿಗೆ ಇದರಲ್ಲಿ ಗುರುಗಳೇ ಮಾರ್ಗವನ್ನು ತೋರಿಸುತ್ತಾರೆ. ಗುರುಗಳು ಅವನ ಮೃತ್ಯುವಿನ ಭಯವನ್ನು ದೂರಗೊಳಿಸಿ ಅವನನ್ನು ಜೀವನ-ಮೃತ್ಯುವಿನ ರೇಖೆಯ ಆಚೆಗೆ ಒಯ್ಯುತ್ತಾರೆ. ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ ಅವನಿಗೆ ಜೀವನದಲ್ಲಿನ ಅಡಚಣೆಗಳ ಬಗ್ಗೆ ಏನೂ ಎನಿಸುವು ದಿಲ್ಲ; ಏಕೆಂದರೆ ಅವನಿಗೆ ಮೃತ್ಯುವಿನ ನಂತರವೂ ಗುರುಗಳು ನಮ್ಮೊಂದಿಗೆ ಇರುತ್ತಾರೆಂಬ ಬಗ್ಗೆ ಶ್ರದ್ಧೆ ಇರುತ್ತದೆ. ಈ ಅಚಲವಾದ ಶ್ರದ್ಧೆಯ ದಾರದಿಂದಲೇ ಅವನ ಜೀವನವು ನಡೆಯುತ್ತಿರುತ್ತದೆ; ಆದುದರಿಂದ ಜೀವನದಲ್ಲಿ ಗುರುಗಳ ಜೊತೆ ಇರುವುದು ಅತ್ಯಂತ ಮಹತ್ವದ್ದಾಗಿರುತ್ತದೆ.’
– (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ (೧೨.೪.೨೦೨೦)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ